ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೨೫-೦೭-೨೦೧೯

ದಿನಾಂಕ ೨೪-೦೭-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೫-೦೭-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಹಲ್ಲೆ ಮತ್ತು ಪ್ರಾಣಬೆದರಿಕೆ  :

ಮುಳಬಾಗಿಲು ನಗರ ಪೊಲಿಸ್ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣಬೆದರಿಕೆ ಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ನಗರ, ಕೆ,ಜಿ.ಎಪ್ ರಸ್ತೆ ಹೈದರ್‍ವಲ್ಲಿ ದರ್ಗಾ ಮುಂಬಾಗ ಘಟನೆ ಸಂಬವಿಸಿರುತ್ತದೆ. ಸದರಿ ಮುಳಬಾಗಿಲು ಹೈದರ್‍ ನಗರದ ವಾಸಿಯಾದ ಬಿ, ಬಾಬು ಬಿನ್ ಬಾಷಾಸಾಬ್ ರವರು  ದಿನಾಂಕ ೨೪-೦೭-೨೦೧೯  ರಂದು ಚಾಂದ್ ಪಾಷ ಬಿನ್ ಶೇಕ್ ಅಹಮದ್ ರವರ ನಿವೇಶನದಲ್ಲಿ  ಶೆಡ್ ಕಟ್ಟುತ್ತಿರುವಾಗ  ಬಸೀದ್,ಬಿನ್  ಅಮಿರ್‍ಜಾನ್ ,ಬಂದು ಇದು ನಮ್ಮ ಅನ್ಸಿಪ್ ರವರಿಗೆ ಸೇರಿದ್ದು ,ನೆವೇಕೆ ಇಲ್ಲಿ ಶೆಡ್ ಕಟ್ಟುತ್ತಿದ್ದಿರಿ ಎಂದು ಜಗಳ ಮಾಡುತ್ತಿದ್ದಾಗ ಆದೇ ಸಮಯಕ್ಕೆ ಮುತ್ಯಾಲಪೇಟೆ  ಸಾಬ್ಜಾನ್ ಸಾಬ್ ,ಅನ್ಸಿಪ್,ನವೀನ್ ಕುರುಬರಪೇಟೆ ಅಕ್ರಂ,ಹೈದರೀನಗರ ವಾಸಿ ಅಮೀರ್‍ ಜಾನ್ , ರವರ ಮಕ್ಕಳು ಅಪ್ಸರ್‍,ಅನ್ಸರ್‍,ಸರ್ದಾರ್‍,ನಿಸಾರ್‍, ರವರು ಗುಂಪು ಸೇರಿಕೊಂಡು ಗೋಡೆಗಳನ್ನು ತಳ್ಳಿ , ಇಟ್ಟಿಗೆಯಿಂದ ಹೊಡೆದು ಇಲ್ಲಿ ಶೆಡ್ ಕಟ್ಟಿದರೆ ಸಾಯಿಸಿಬಿಡುತ್ತೇವೆ ಎಂದು ಪ್ರಾಣಬೆದರಿಕೆ ಹಾಕಿರುತ್ತಾರೆ,

 

ಹಲ್ಲೆ ಮತ್ತು ಪ್ರಾಣಬೆದರಿಕೆ  :

ರಾಯಲ್ಪಾಡು ಪೊಲಿಸ್ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣಬೆದರಿಕೆ ಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ತಾಲ್ಲೂಕು ಗುಡಿಪಲ್ಲಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಗಳಾದ ವೆಂಕಾಟಾಚಲಪತಿ, ಮತ್ತು ಪುರುಶೋತ್ತಮ್ ಬಿನ್ ಶಂಕರಪ್ಪ ಮತ್ತು ರಾಜಾ ಬಿನ್ ಶಂಕರಪ್ಪ ರವರ ಎರಡು ಕುಟುಂಬಗಳಿಗೂ ವಿನಾಕರಣ ಆಸ್ತಿ ವಿಚಾರವಾಗಿ ಜಗಳ ಇದ್ದು, ದಿನಾಂಕ ೨೪-೦೭-೨೦೧೯ರಂದು  ಬೆಳಿಗ್ಗೆ  ಸುಮಾರು ೦೭:೦೦ ಗಂಟೆ ಸಮಯದಲ್ಲಿ ಅದೇ ಆಸ್ತಿ ವಿಚಾರದ ಜಗಳ ತೆಗೆದು  ಈ ಸಂದರ್ಭದಲ್ಲಿ ವೋಕಟಾಚಲಪತಿ ರವರ ಹೆಂಡತಿ ಉಶಾರಾಣಿ ರರಿಗೆ  ಪುರುಶೋತ್ತಮ್ ಬಿನ್ ಶಂಕರಪ್ಪ ಮತ್ತು ರಾಜಾ ಬಿನ್ ಶಂಕರಪ್ಪ ರವರು ತಲೆಯ ಹಿಂಬಾಗಕ್ಕೆ  ರಕ್ತ ಗಾಯ ಮಾಡಿ ಪ್ರಾಣಬೆದರಿಕೆ ಹಾಕಿರುತ್ತಾರೆ.

ಅಕ್ರಮ ಮಧ್ಯ ಮಾರಾಟ, ೮೩ ಮಧ್ಯದ ಟೆಟ್ರಾಪಾಕೆಟ್ ವಶ:

ವೇಮಗಲ್ ಪೊಲಿಸ್ ಠಾಣೆಯಲ್ಲಿ ಅಕ್ರಮ ಮಧ್ಯ ಮಾರಾಟ, ಕ್ಕೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು  ನರಸಾಪುರ ಹೊಬಳಿ ದೊಡ್ಡವಲ್ಲಬಿ ಗ್ರಾಮದಲ್ಲಿ ಘಟನೆ ಸಂವಿಸಿರುತ್ತದೆ.ಸದರಿ ಗ್ರಾಮದ ವಾಸಿಯಾದ ಕೃಷ್ಣಪ್ಪ ಬಿನ್ ಮಿನಿಯಪ್ಪ  ಎಂಬುವರು ಯಾವುದೆ ಪರವಾನಗಿ ಇಲ್ಲದೆ ಅಕ್ರಮವಾಗಿ ಚಿಲ್ಲರೆ ಅಂಗಡಿಯಲ್ಲಿ  ಮದ್ಯ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ  ಸಿಬ್ಭಂದಿ  ಪಂಚರೊಂದಿಗೆ ದಾಳಿ ಮಾಡಿದಾಗ  ಕೃಷ್ಣಪ್ಪ ತಪ್ಪಿಸಿಕೊಂಡು ಓಡಿ ಹೋಗಿದ್ದು ., ಸದರಿ ಅಂಗಡಿಯಲ್ಲಿ ಹುಡಿಕಿದಾಗ ಸುಮಾರು ೮೩ ಮದ್ಯದ ಟೆಟ್ರಾಪಾಕೆಟ್ ಗಳನ್ನು ಸಿಬ್ಬಂದಿ  ವಶಪಡಿಸಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *