ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೧೯-೦೬-೨೦

ದಿನಾಂಕ ೧೮-೦೬-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೧೯-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಮಾರಣಾಂತಿಕ ರಸ್ತೆ ಅಪಘಾತ:
ನಂಗಲಿ ಪೋಲಿಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲ್ಲೂಕು ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊತ್ತೂರು ಮತ್ತು ಹೆಚ್.ಬೈಯಪಲ್ಲಿ ಗ್ರಾಮದ ಮಧ್ಯದಲ್ಲಿ ಕೃತ್ಯ ಸಂಭವಿಸಿರುತ್ತದೆ. ಮುಳಬಾಗಿಲು ತಾಲ್ಲೂಕು ಹೆಚ್.ಬೈಯಪಲ್ಲಿ ಗ್ರಾಮದ ವಾಸಿಯಾದ ೨೪ ವರ್ಷದ ಶಿವರಾಜ ರವರು ದಿನಾಂಕ:೦೫-೦೬-೨೦೧೯ ರಂದು ಬೆಳಗ್ಗೆ ೮-೩೦ ಗಂಟೆಯಲ್ಲಿ ಕೊಲಾರ ತಾಲ್ಲೂಕು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೋಗಲು ದ್ವಿಚಕ್ರ ವಾಹನದಲ್ಲಿ ಕೊತ್ತೂರು ಮತ್ತು ಎಚ್. ಬೈಪಲ್ಲಿ ಗ್ರಾಮದ ಮಧ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ತನ್ನಷ್ಟಕ್ಕೆ ತಾನೇ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಹೋಗಿ ರಸ್ತೆಯ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿಹೊಡೆಸಿದ ಪರಿಣಾಮ ತೀವ್ರ ರಕ್ತಗಾಯಗಳಾಗಿದ್ದು, ಸದರಿಯವರನ್ನು ಚಿಕಿತ್ಸೆಗಾಗಿ ಕೋಲಾರದ ಆರ್‍.ಎಲೆ.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ, ದಿನಾಂಕ:೧೯-೦೬-೨೦೧೯ ರಂದು ಮೃತಪಟ್ಟಿರುತ್ತಾರೆ.

ಹಲ್ಲೆ ಮತ್ತು ಪ್ರಾಣ ಬೆದರಿಕೆ;
ವೇಮಗಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಅಪರಾದ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ನರಸಾಪುರ ಹೋಬಳಿ ಕೆ.ಬಿ.ಹೊಸಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ನರಸಾಪುರ ಹೋಬಳಿ ಕೆ.ಬಿ.ಹೊಸಹಳಳಿ ಗ್ರಾಮದ ವಾಸಿಯಾದ ನಾಗರಾಜಗೌಡ ರವರು ದಿನಾಂಕ:೧೮-೦೬-೨೦೧೯ ರಂದು ಬೆಳಗ್ಗೆ ಅವರ ತೋಟದಲ್ಲಿ ಕೆಲಸಮಾಡುತ್ತಿರುವಾಗ ಅದೇ ಗ್ರಾಮದ ವಾಸಿಗಳಾದ ಚಿಕ್ಕಮುನಿಶಾಮಿಗೌಡ ಮತ್ತು ಇತರೇ ಮೂರು ಜನ ಸೇರಿಕೊಂಡು ಪಿರ್ಯಾದಿ ಬಳಿ ಬಂದು ಪಿರ್ಯಾದಿಯನ್ನು ಕುರಿತು ಅವಾಚ್ಯ ಶಬ್ದಗಳಿಂದ ಬೈದು, ದೊಣ್ಣೆಗಳಿಂದ ಹೊಡೆದು ಗಾಯಗಳನ್ನುಂಟುಮಾಡಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಶ್ರೀನಿವಾಸಪುರ ಪೊಲೀಸ್ ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಅಪರಾದ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು ನಾರಾಯಣಪುರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು ನಾರಾಯಣಪುರ ಗ್ರಾಮದ ವಾಸಿಯಾದ ನಾರಾಯಣಪ್ಪ ರವರ ಮಗನಾದ ಶ್ರೀನಿವಾಸ ರವರು ದಿನಾಂಖ;೧೦-೦೬-೨೦೧೯ ರಂದು ಸೋಮಯಾಜಲಹಳ್ಳಿ ಗ್ರಾಮಕ್ಕೆ ಬರಲು ದ್ವಿಚಕ್ರ ವಾಹನದಲ್ಲಿ ಅದೇ ಗ್ರಾಮದ ವಾಸಿಯಾದ ಚಿಕ್ಕರೆಡ್ಡಪ್ಪ ರವರ ಮನೆಯ ಬಳಿ ರಸ್ತೆಯಲ್ಲಿ ಬರುತ್ತಿರುವಾಗ ಚಿಕ್ಕರೆಡ್ಡಪ್‌ಪ ಮತ್ತು ಇತರೇ ಮೂರು ಜನರು ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿ ಶ್ರೀನಿವಾಸರವರನ್ನು ಹಿಡಿದುಕೊಂಡು ಕೈಗಳಿಂದ ಹೊಡೆದು, ಅವಾಷ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಗ್ರಾಮದ ಹಿರಿಯರು ಗ್ರಾಮದಲ್ಲಿ ಪಂಚಾಯ್ತಿ ಮಾಡೋಣ ಅಂತ ತಿಳಿಸಿದ್ದು, ಇದುವರೆಗೂ ಯಾವುದೇ ಪಂಚಾಯ್ತಿ ಮಾಡದ ಕಾರಣ ತಡವಾಗಿ ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *