ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೨೬-೦೭-೨೦೧೯

ದಿನಾಂಕ ೨೫-೦೭-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೬-೦೭-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 ಮಹಿಳೆ ಆತ್ಮ ಹತ್ಯೆ:

ನಂಗಲಿ ಪೊಲಿಸ್ ಠಾಣೆಯಲ್ಲಿ ಆತ್ಮ ಹತ್ಯೆ ಗೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲ್ಲೂಕು ಕಸವಿರೆಡ್ಡಿಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ನಿವಾಸಿಯಾದ ನಾಗರಾಜ ಬಿನ್ ಸುಬ್ಬಣ್ಣ ರವರ ಪತ್ನಿ ಯಾದ ಪಾರ್ವತಮ್ಮ ರವರಿಗೆ  ಅದೇ ಗ್ರಾಮದ ವಾಸಿಯಾದ ನಾರಾಯಣ ಸ್ವಾಮಿ ಎಂಬುವರು ನಿರಂತರ ಕಿರುಕುಳ ಮತ್ತು ಮಾನಸಿಕ  ಹಿಂಸೆ ನೀಡುತ್ತಿದ್ದು , ದಿನಾಂಕ ೨೪-೦೭-೨೦೧೯ ರಂದು  ಸುಮಾರು ೫:೦೦ ಗಂಟೆ ಸಮಯದಲ್ಲಿ  ಕಿರುಕುಳ ತಾಳಲಾರದೆ ಯಾವುದೋ ವಿಷ ಕುಡಿದು ಪ್ರಗ್ನೆ ತಪ್ಪಿ ಬಿದ್ದಿದ್ದು, ತಕ್ಷಣ ಅವರನ್ನು ಚಿಕಿತ್ಸೆಗೆ  ಆಸ್ಪತ್ರೆಗೆ ದಾಖಲಿಸುವಷ್ಠರಲ್ಲಿ ಪಾರ್ವತಮ್ಮ ರವರು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *