ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೩೦-೦೭-೨೦೧೯

ದಿನಾಂಕ ೨೯-೦೭-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ೩೦-೦೭-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಮಹಿಳೆ ಕಾಣೆ ಯಾಗಿರುವ ಬಗ್ಗೆ :

ಶ್ರೀನಿವಾಸಪುರ ಪೊಲಿಸ್ ಠಾಣೆಯಲ್ಲಿ  ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು ಶೆಟ್ಟಿಹಳ್ಳಿ ಗ್ರಾಮದಲ್ಲಿ  ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಯಾದ ಪದ್ಮಾವತಮ್ಮ ಕೊಂ ಲೆಟ್ ಶಿವಶಂಕರ ರವರ ಮಗಳು ಚಂದನಾ (೧೮) ವರ್ಷ , ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ನಗರದಲ್ಲಿ  ಮಹಿಳಾ ಕಾಲೇಜು ವಿನಲ್ಲಿ ಪ್ರಥಮ ಪಿ ,ಯು,ಸಿ  ಬಿ,ಎಸ್ಸಿ, ವ್ಯಾಸಾಂಗ  ಮಾಡುತ್ತಿದ್ದು,  ಹಾಸ್ಟೆಲ್ ನಿಂದ ಮನೆಗೆ ಬಂದಿದ್ದು , ದಿನಾಂಕ ೨೮-೦೭-೨೦೧೯ ರಂದು  ಸುಮಾರು ೨:೩೦ ಗಂಟೆ ಸಮಯದಲ್ಲಿ  ಮನೆಯಿಂದ ಹೊರಗೆ ಹೊರಟವಳು ವಾಪಸ್ಸು ಮನೆಗೆ ಬರದೇ ಕಾಣೆಯಾಗಿರುತ್ತಾಳೆ.

ಹೆಸರು: ಚಂದನಾ

ಎತ್ತರ: ೧೬೮

ಬಾಷೆ: ಕನ್ನಡ,ತೆಲುಗು.ಇಂಗ್ಲಿಷ್.

ಸಾದಾರಣ ಮೈಕಟ್ಟು.  ಗೋದಿಬಣ್ಣ,

ವ್ಯಕ್ತಿ ಕಾಣೆಯಾಗಿರುವ ಬಗ್ಗೆ:

ಮಾಲೂರು ಪೊಲಿಸ್ ಠಾಣೆಯಲ್ಲಿ  ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ನಗರ, ಬಾಲಾಜಿ ಟಾಕೀಸ್ ರಸ್ತೆ ,ಕಾರಂಜಿ ಬಡಾವಣೆ ಯಲ್ಲಿ ಘಟನೆ  ಸಂಬವಿಸಿರುತ್ತದೆ. ಸದರಿ ವಿಳಾಸದ ವಾಸಿಯಾದ ನೇತ್ರಾವತಿ ಕೊಂ ಸುಬ್ರಮಣಿ  ಎಂಬುವರು  ಮಾಲುರು ತಾಲ್ಲೂಕು ರಾಂಪುರ ಗ್ರಾಮದ ನಿವಾಸಿಯಾದ ಸುಬ್ರಮಣಿ ಎಂಬುವರನ್ನು ಪ್ರೀತಿಸಿ  ವಿವಾಹವಾಗಿದ್ದು , ದಿನಾಂಕ ೨೯-೦೭-೨೦೧೯ ರಂದು  ತಮ್ಮ ಗ್ರಾಮದಲ್ಲಿ ಯಾರೋ ತೀರಿಕೊಂಡಿರುತ್ತಾರೆಂದು  ಊರಿಗೆ ಹೋದವನು ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *