ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೩೧-೦೭-೨೦೧೯

ದಿನಾಂಕ ೩೦-೦೭-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ೩೧-೦೭-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ದ್ವಿವಚಕ್ರ ವಾಹನ ಕಳವು  :

ಕೊಲಾರ ಗ್ರಾಮಾಂತರ  ಪೊಲಿಸ್ ಠಾಣೆಯಲ್ಲಿ  ದ್ವಿಚಕ್ರವಾಹನ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು  ವಡುಗೂರ್‍ ಗೇಟ್ ಬಳಿ ಘಟನೆ ಸಂಬವಿಸಿರುತ್ತದೆ.  ಕೋಲಾರ ತಾಲ್ಲೂಕು ಇರಗಸಂದ್ರ ಗ್ರಾಮದ ವಾಸಿಯಾದ ಸತೀಶ್ ಇ,ಎನ್ , ಬಿನ್ ನಾರಯಣಸ್ವಾಮಿ ,ರವರು ನರಸಾಪುರದ ಇಂಡೋ –ಆಟೋ ಲಿಮಿಟೆಡ್ಸ್ ,ನಲ್ಲಿ ಕೆಲಸ ಮಾಡುತ್ತಿದ್ದು   ಪ್ರತಿ ದಿನ  ಕೆಲಸಕ್ಕೆ ತನ್ನ ಬಾಬತ್ತು ಕೆಎ೦೭ ಡಬ್ಲೂ೩೦೩೮ ಸ್ಪೆಂಡರ್‍ ಪ್ರೋ ದ್ವಿಚಕ್ರ ವಾಹನದಲ್ಲಿ  ವಡುಗೂರ್‍ ಗೇಟ್ ಬಳಿ ಬಂದು  ತನ್ನ ದ್ವಿಚಕ್ರ ವಾಹನವನ್ನ ಗೇಟ್ ಬಳಿ ನಿಲ್ಲಿಸಿ  ಕಂಪನಿ ವಾಹನದಲ್ಲಿ ಕೆಲಸಕ್ಕೆ ಹೋಗುತ್ತಿದ್ದು, ಎಂದಿನಂತೆ  , ದಿನಾಂಕ  ೧೨-೦೭-೨೦೧೯ ರಂದು ಸಂಜೆ ೫:೩೦ ಗಂಟೆ ಸಮಯದಲ್ಲಿ ತನ್ನ ದ್ವಿಚಕ್ರ ವಾಹನವನ್ನ  ನಿಲ್ಲಿಸಿ ಕೆಲಸಕ್ಕೆ ಹೋಗಿ  ಮರುದಿನ ಬೆಳಿಗ್ಗೆ ೫:೨೦ ಗಂಟೆ ಸಮಯದಲ್ಲಿ ಬಂದು ನೋಡುವುದರಲ್ಲಿ ಯಾರೋ ಅಪರಿಚಿತರು ದ್ವಿಚಕ್ರ ವಾಹನವನ್ನು ಕಳವು ಮಾಡಿ ಪರಾರಿಯಾಗಿರುತ್ತಾರೆ.

 

ಹಲ್ಲೆ ಮತ್ತು ಪ್ರಾಣಬೆದರಿಕೆ:

ಕೊಲಾರ ಗ್ರಾಮಾಂತರ  ಪೊಲಿಸ್ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ  ತಾಲ್ಲೂಕು  , ನಾಗಲಾಪುರ  ಗ್ರಾಮದ ನಾಗರಾಜ ಕೋಳಿ ಪಾರಂ ನ ಬಳಿ ಘಟನೆ ಸಂಬವಿಸಿರುತ್ತದೆ. ಕೋಲಾರ ತಾಲ್ಲೂಕು  ಚುಂಚುದೇನಹಳ್ಳಿ ಗ್ರಾಮದ ವಾಸಿಯಾದ ನಾಗರಾಜ ರವರು ಕೋಳಿ ಪಾರಂ ನ್ನು  ಇಟ್ಟಿದ್ದು , ಸದರಿ ಕೋಳಿ ಪಾರಂನ ವಿದ್ಯುತ್ ಬಿಲ್ ಬಾಕಿ ಸುಮಾರು  ರೂ ೫೮೦೦ ಇರುತ್ತದೆ, ಅದನ್ನು ಪಾವತಿಗಾಗಿ ಅವರಿಗೆ ಮೌಖಿಕವಾಗಿ ಹೇಳಿದ್ದು ,ಬಿಲ್ ಪಾವತಿಸಿರುವಿದಿಲ್ಲ ಆದ್ದರಿಂದ ದಿನಾಂಕ ೩೧-೦೭-೨೦೧೯ ರಂದು ಸುಮಾರು ೧೦: ೦೦ ಗಂಟೆ ಸಮಯದಲ್ಲಿ ಮೇಲಾದಿಕಾರಿಗಳ ಆದೇಶದ ಮೇರೆಗೆ ನರಸಾಪುರ ಬ್ರಾಂಚ್ , ರೂರಲ್ ಸಬ್ಡಿವಿನ್ , ಲೈನ್ಮೆನ್ ಆಗಿರುವ ನವೀನ್ ಬಿನ್ ಸೊಣ್ಣಪ್ಪ (ಛತ್ರಕೋಡಿಹಳ್ಳಿ ,ಕೋಲಾರ ತಾಲ್ಲೂಕು) ರವರು ಕೋಳಿ ಪಾರಂ ಗೆ ಸಂಪರ್ಕವಿರುವ ವಿದ್ಯುತ್ ಲೈನ್ ಅನ್ನು  ತೆಗೆದುದ್ದರಿಂದ ಕೊಪಗೊಂಡ ಕೋಳಿ ಪಾರಂ ನ ಮಾಲಿಕ ನಾಗರಾಜ ಮತ್ತು ಅವರ ಮಗ ( ಹೆಸರು ಗೊತ್ತಿರುವುದಿಲ್ಲ) ಲೈನ್ ಮೆನ್ ಗೆ ಕೈಗಳಿಂದ ಹೊಡೆದು ,  ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ , ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ಹಾಕಿಕೊಂಡು , ಈ ಕಡೆ ಬಂದರೆ  ಸಾಯಿಸಿಬಿಡುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *