ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :೦೧-೦೮-೨೦೧೯

ದಿನಾಂಕ ೩೧-೦೭-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೦೧-೦೮-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಯುವತಿ ಕಾಣೆಯಾಗಿರುವ ಬಗ್ಗೆ  :

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ  ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು  ಯಲ್ದೂರು ಹೋಬಳಿ  ಹೊಸಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ವಿಳಾಸದ ವಾಸಿಯಾದ ರೆಡ್ಡೆಪ್ಪ ಬಿನ್ ನಾರಾಯಣಪ್ಪ ರವರ ಮಗಳು ಅನುಷಾ ರವರು ಎಸ್,ಎಸ್,ಎಲ್,ಸಿ, ವ್ಯಾಸಾಂಗ ಮಾಡಿದ್ದು ಅನುತ್ತೀರ್ಣ ಆಗಿದ್ದರಿಂದ ೨ ವರ್ಷಗಳಿಂದ ಮನೆಯಲ್ಲಿಯೇ ಇದ್ದು ,ಇತ್ತಿಚಿಗೆ ಸದರಿ ತಾಲ್ಲೂಕು  ಮೂಲಗೊಲ್ಲಪಲ್ಲಿ ಗ್ರಾಮದ ವಾಸಿಯಾದ ಮುನಿರಾಜ್ ರವರೊಂದಿಗೆ  ಸಾಂಪ್ರದಾಯಿಕವಾಗಿ ವಿವಾಹ ನಿಶ್ಚಯವಾಗಿದ್ದು , ದಿನಾಂಕ ೨೭-೦೭-೨೦೧೯ ರಂದು ಸುಮಾರು ೨:೦೦ ಗಂಟೆ ಸಮಯದಲ್ಲಿ  ಮನೆಯಿಂದ ಹೊರಗೆ ಹೋದವಳು ಮರುಳಿ ಬರದೇ ಕಾಣೆಯಾಗಿರುತ್ತಾಳೆ.

ಯುವಕ ಕಾಣೆಯಾಗಿರುವ ಬಗ್ಗೆ:

ಕೋಲಾರ  ನಗರ ಠಾಣೆಯಲ್ಲಿ  ಯುವಕ ಕಾಣೆಯಾಗಿರುವ ಬಗ್ಗೆ ಪ್ರಕಣ ದಾಖಲಾಗಿರುತ್ತದೆ.  ವೆಂಕಟಾದ್ರಿ ನಿಲಯ,೩ ನೇ ಕ್ರಾಸ್ ಮುನೇಶ್ವರನಗರ ಕೋಲಾರ ನಗರ ಎಂಬಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ವಿಳಾಸದ ನಿವಾಸಿಯಾದ ಭಾಸ್ಕರ್‌ ಬಿನ್ ರಾಮಯ್ಯ , ರವರ ಮಗ  ಗೌತಮ್ ಬಿ,ಜಿ    ದಿನಾಂಕ ೩೧-೦೭೮-೨೦೧೯ ರಂದು ಸುಮಾರು ೧೨:೦೦ ಗಂಟೆ ಸಮಯದಲ್ಲಿ  ಸ್ನೇಹಿತನ ಹುಟ್ಟುಹಬ್ಬದ ಔತಣ ಕೂಟಕ್ಕೆಂದು ತೇರಳ್ಳಿ ಬೆಟ್ಟಕ್ಕೆ ಹೋಗಿದ್ದು,ಸಂಜೆಯಾದರು ಮನೆಗೆ ಬರದೇ ಕಾಣೆಯಾಗಿರುತ್ತಾನೆ.

Leave a Reply

Your email address will not be published. Required fields are marked *