ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :೦೨-೦೮-೨೦೧೯

ದಿನಾಂಕ ೦೧-೦೭-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೦೨-೦೮-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ವ್ಯಕ್ತಿ ಕಾಣೆಯಾಗಿರುವ ಬಗ್ಗೆ  :

ಮಾಲೂರು ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ತಾಲ್ಲೂಕು  ಲಕ್ಕೂರು ಹೋಬಳಿ ಚಿಕ್ಕಇಗ್ಗಲೂರು ಗ್ರಾಮದಲ್ಲಿ  ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ನಿವಾಸಿಯಾದ ಮಂಜುನಾಥ್ ಬಿನ್ ಮುನಿವೆಂಕಟಪ್ಪ ಎಂಬುವರು ಮಂಜುಳ ಎಂಬುವರೊಂದಿಗೆ ವಿವಾಹವಾಗಿದ್ದು ,  ಇತನಿಗೆ  ಇಸ್ಪೀಟ್ , ಮತ್ತು ರೇಸ್ ಜೂಜು ಆಡುವ ಅಬ್ಯಾಸವಿದ್ದು  ೧೫ ದಿನಗಳಿಗೊಮ್ಮೆ ಮನೆಗೆ ಬರುತ್ತಿದ್ದು,  ಅದರಂತೆ ದಿನಾಂಕ ೨೮-೦೭-೨೦೧೯ ರಂದು ಸುಮಾರು ೮:೩೦ ಗಂಟೆ ಸಮಯದಲ್ಲಿ  ತನ್ನ ಬಾಬತ್ತು  ದ್ವಿಚಕ್ರ ವಾಹನ ಪಲ್ಸರ್‍ ಸಂಖ್ಯೆ ; ಕೆ ಎ ೦೩ ಹೆಚ್ ಜಿ ೩೦೧೭ ನೊಂದಿಗೆ  ಮಾಲೂರ ತಾಲ್ಲೂಕು ಕಛೇರಿಗೆ ಹೋಗಿ ಬರುವುದಾಗಿ ಹೇಳಿ ಹೊರಟವನು ವಾಪಸ್ಸು ಬರದೇ ಕಾಣೆ ಯಾಗಿರುತ್ತಾರೆ.

ವ್ಯಕ್ತಿ ಕಾಣೆಯಾಗಿರುವ ಬಗ್ಗೆ  :

ಕೋಲಾರ ನಗರ ಪೊಲಿಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಶಾಹಿದ್ ನಗರ , ಕೋಲಾರ ನಗರ ಕೋಲಾರ , ಎಂಬಲ್ಲಿ ಗಟನೆ ಸಂಬವಿಸಿರುತ್ತದೆ. ಸದರಿ ವಿಳಾಸದ ವಾಸಿಗಳಾದ ರಶೀಮ್ ಖಾನ್  ಎಂಬುವನು ಸಲ್ಮ ಎಂಬುವರೋದಿಗೆ ವಿವಾಹ ವಾಗಿದ್ದು, ರಶೀಮ್ ಖಾನ್   ಕೋಲಾರ ನಗರದಲ್ಲೆ ರೇಶ್ಮೆ  ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದು ಮತ್ತು ಜಿವನೋಪಾಯಕ್ಕಾಗಿ ಆಟೋ ಬಾಡಿಗೆಗೆ ಹೋಡಿಸುತ್ತಿದ್ದು , ಇವನು ತಜಮಲ್ ಎಂಬುವನಿಗೆ ರೂ  ೪೫೦೦೦ ಕೋಡಬೇಕಿದ್ದು, ಸದರಿ ಹಣವನ್ನು  ರೇಶ್ಮೆ  ಪ್ಯಾಕ್ಟರಿಯ ಮಾಲಿಕನ ಬಳಿ ಸಾಲ ವಾಗಿ ಪಡೆದು  ದಿನಾಂಕ ೩೧-೦೭-೨೦೧೯ ರಂದು ರಾತ್ರಿ ೧೦:೦೦ ಗಂಟೆ ಸಮಯದಲ್ಲಿ ಹಣವನ್ನು  ತಜಮಲ್ ಗೆ ಕೊಟ್ಟುಬರುವುದಾಗಿ ಹೇಳಿ  ಆಟೋದಲ್ಲಿ ಹೊರಟವರು ಮರುಳಿ ಬರದೇ ಕಾಣೆಯಾಗಿರುತ್ತಾರೆ.

 

 

Leave a Reply

Your email address will not be published. Required fields are marked *