ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :೦೩-೦೮-೨೦೧೯

ದಿನಾಂಕ ೦೨-೦೭-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೦೩-೦೮-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಅತಿಕ್ರಮವಾಗಿ ೮ ಮಾವಿನ ಮರಗಳ ಕಡಿತ  ರೂ ಸುಮಾರು ೧ ಲಕ್ಷ  ನಷ್ಠ:

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ  ಅತಿಕ್ರಮವಾಗಿ ಜಮೀನಿನಲ್ಲಿ ನುಗ್ಗಿ  ನಷ್ಠ  ಉಂಟುಮಾಡಿರುವ  ಬಗ್ಗೆ ಪ್ರಕರಣ ದಾಖಲಾಗಿರುತ್ತದೆ . ಸರ್ವೆ ನಂ: ೨೩೦ ಪಾಳ್ಯ ಗ್ರಾಮ , ಕಸಬ ಹೋಬಳಿ , ಶ್ರೀನಿವಾಸಪುರ ತಾಲ್ಲೂಕಿನ ಬಳಿ ಘಟನೆ ಸಂಬವಿಸಿರುತ್ತದೆ. ಸದರಿ ವಿಳಾಸದ ನಿವಾಸಿಯಾದ ಶ್ರೀನಿವಾಸರೆಡ್ಡಿ ಬಿನ್ ಪಾಪಿರೆಡ್ಡಿರವರ ಬಾಬತ್ತು ಸರ್ವೆ ನಂ: ೨೩೦ ರಲ್ಲಿ ಮಾವಿನ ಮರಗಳನ್ನು ಬೆಳೆಸಿದ್ದು , ಅವುಗಳಿಗೆ ಸುಮಾರು ೧೫ ರಿಂದ ೨೦ ವರ್ಷ ಆಗಿದ್ದು ,ಕ್ಷುಲ್ಲಕ ಕಾರಣಕ್ಕೆ ಸದರಿ ಗ್ರಾಮದ ನಿವಾಸಿಯಾದ ಮುನಿವೆಂಕಟರೆಡ್ಡಿ ಬಿನ್ ಮುನಿಶಾಮಿರೆಡ್ಡಿ ಎಂಬುವರು ದಿನಾಂಕ ೦೨-೦೮-೨೦೧೯ ರಂದು ರಾತ್ರಿ ಅತಿಕ್ರಮವಾಗಿ  ನುಗ್ಗಿ ಸುಮಾರು ೦೮ ಮರಗಳನ್ನು ಕಟಾವುಮಾಡಿರುತ್ತಾರೆ ,ಈ ಮರಗಳ ಬೆಲೆ  ಸುಮಾರು ರೂ ೧೦೦೦೦೦ ( ಒಂದು ಲಕ್ಷ ) ಆಗಿರುತ್ತದೆ.

Leave a Reply

Your email address will not be published. Required fields are marked *