ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೨೦-೦೬-೨೦೧೯

ದಿನಾಂಕ ೧೯೦೬-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೦-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಮಾರಣಾಂತಿಕ ರಸ್ತೆ ಅಪಘಾತ:

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು ತೊರ್ನಹಳ್ಳಿ ಮತ್ತು ಬೈರನಹಳ್ಳಿ ರಸ್ತೆಯಲ್ಲಿ ಕೃತ್ಯ ಸಂಬವಿಸಿರುತ್ತದೆ. ಮಾಲೂರು ತಾಲ್ಲೂಕು ದೊಂಬರಹಳ್ಳಿ ಗ್ರಾಮದ ವಾಸಿಯಾದ ಮುನಿರಾಜು ರವರ ತಂದೆಯಾದ ವೆಂಕಟೆಶಪ್ಪ (೫೦) ರವರು ದಿನಾಂಕ:೨೦-೦೬-೨೦೧೯ ರಂದು ಮಾಲೂರು ತಾಲ್ಲೂಕು ಬಂಡೆಗುಡಿಸಲು ಗ್ರಾಮದ ವಾಸಿ ವೀರಾಂಜನೇಯಪ್ಪ ರವರ ದ್ವಿಚಕ್ರ ವಾಹನದಲ್ಲಿ ಬೈರನಹಳ್ಳಿ ಕಡೆಗೆ ಹೋಗುತ್ತಿರುವಾಗ ಬೈರನಹಳ್ಳಿ ಕಡೆಯಿಂದ ಬಂದ ಟ್ರಾಕ್ಟರ್‍  ಚಾಲಕ  ಟ್ರಾಕ್ಟರ್‍ ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ವೆಂಕಟೇಶಪ್ಪ ರವರು ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಸಿದ ಪರಿಣಾಮ ವೆಂಕಟೆಶಪ್ಪ ರವರ ತಲೆಗೆ ಮತ್ತು ಬಲಕಾಲಿಗೆ ತೀವ್ರತರವಾದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

ಹಲ್ಲೆ ಮತ್ತು ಪ್ರಾಣ ಬೆದರಿಕೆ;

ಮಾಲೂರು ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು ಆಲಂಬಾಡಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಮಾಲುರು ತಾಲ್ಲೂಕು ಆಲಂಬಾಡಿ ಗ್ರಾಮದ ವಾಸಿಯಾದ ರವೀಂದ್ರರೆಡ್ಡಿ ರವರು ದಿನಾಂಕ:೦೩-೦೬-೨೦೧೯ ರಂದು ಸಂಜೆ ೭-೦೦ ಗಂಟೆಯಲ್ಲಿ ಅವರ  ಜಮೀನಿನಲ್ಲಿ ಇದ್ದಾಗ ರಾಜಕೃಷ್ಣಾಪುರ ಗ್ರಾಮದ ವಾಸಿಗಳಾದ ಪುಟ್ಟರೆಡ್ಡಿ ಮತ್ತು ಇತರರು ಅಕ್ರಮ ಗುಂಪುಕಟ್ಟಿಕೊಂಡು ಕೈಗಳಲ್ಲಿ ಗಡಾರಿ ಮತ್ತು ಸನಿಕೆಗಳನ್ನು ಹಿಡಿದುಕೊಂಡು ಬಂದು ಜಮೀನಿಗೆ ಹಾಕಿದ್ದ ಕಾಂಪೌಂಡ್ ಅನ್ನು ತಳ್ಳಿ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

ವಾಹನ ಕಳುವು:

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳುವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ಬೈರೇಗೌಡ ನಗರದಲ್ಲಿ ಕೃತ್ಯ ಸಂಭವಿಸಿರುತ್ತದೆ. ಕೋಲಾರ ನಗರದ ಬೈರೇಗೌಡ ನಗರ ವಾಸಿಯಾದ ಆರ್‍.ಪ್ರಕಾಶ್ ರವರು ದಿನಾಂಕ:೧೫-೦೬-೨೦೧೯ ರಂದು ರಾತ್ರಿ ೮-೦೦ ಗಂಟೆಯಲ್ಲಿ ಅವರ ಬಾಬುತ್ತು ಮಾರುತಿ ಸ್ವಿಪ್ಟ್ ಕಾರ್‍ ಸಂಖ್ಯೆ ಕೆ.ಎ.೫೧ ಎಂ.ಹೆಚ್.೩೮೬೯ ಅನ್ನು ಅವರ ಮನೆಯ ಮುಂದೆ ನಿಲ್ಲಿಸಿದ್ದು, ಬೆಳಗ್ಗೆ ಎದ್ದು, ನೋಡಲಾಗಿ ಕಾರು ಕಾಣೀಸದೇ ಇದ್ದು, ಎಲ್ಲಾ ಕಡೆ ಹುಡುಕಿದರೂ ಸಿಗದೇ ಇದ್ದು, ಸದರಿ ಕಾರನ್ನು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಕಾರಿನ ಬೆಲೆ ರೂ.೩,೯೮.೦೦೦/- ಗಳಾಗಿರುತ್ತದೆ.

 

ಸುಲಿಗೆ:

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ನಗರದ ಜಾಕೀರ ಹುಸೇನ್ ಮೊಹಲ್ಲಾ ದಲ್ಲಿ ಕೃತ್ಯ ಸಂಭವಿಸಿರುತ್ತದೆ. ಶ್ರೀನಿವಾಸಪುರ ನಗರದ ಜಾಕೀರ್‍ ಹುಸೇನ್ ಮೊಹಲ್ಲಾ ವಾಸಿಯಾದ ಶ್ರೀಮತಿ ವೆಂಕಟಲಕ್ಷ್ಮಮ್ಮ ರವರು ದಿನಾಂಕ:೧೯-೦೬-೨೦೧೯ ರಂದು ಮಧ್ಯಾಹ್ನ ೦೧-೦೦ ಗಂಟೆಯಲ್ಲಿ ಎಸ್.ಎಫ್.ಎಸ್.ಶಾಲೆಯಿಂದ ಅವರ ಮೊಮ್ಮಕ್ಕಳನ್ನು ಕರೆದುಕೊಂಡು ಬರುತ್ತಿರುವಾಗ ಯಾರೋ ೨೦-೨೨ ವರ್ಷದ ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ವೆಂಕಟಲಕ್ಷ್ಮಮ್ಮ ರವರ ಕತ್ತಿನಲ್ಲಿದ್ದ ಸುಮಾರು ೩೦-೪೦ ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ. ಸದರಿ ಮಾಂಗಲ್ಯ ಸರದ ಬೆಲೆ ರೂ.೭೦,೦೦೦/- ಗಳಾಗಿರುತ್ತದೆ.

ಮಹಿಳೆ ಕಾಣೆಯಾಗಿರುವ ಬಗ್ಗೆ:

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ವಾನರಾಶಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಕೋಲಾರ ತಾಲ್ಲೂಕು ವಾನರಾಶಿ ಗ್ರಾಮದ ವಾಸಿಯಾದ ಶ್ರೀನಿವಾಸ ರವರ ಮಗಳಾದ ೧೮ ವರ್ಷದ ಎಸ್.ದೀಪಿಕ ರವರು ದಿನಾಂಕ:೧೮-೦೬-೨೦೧೯ ರಂದು ಬೆಳಗ್ಗೆ ೧೧-೩೦ ಗಂಟೆಯಲ್ಲಿ ಮುಳಬಾಗಲು ನಗರದ ಆಂಜನೇಯ ದೇವಾಲಯಕ್ಕೆ ಹೋಗಿ ಬರುವುದಾಗಿ ಮನೆಯಿಂದ ಹೋದವಳು ಮತ್ತೆ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾಳೆ.

 

Leave a Reply

Your email address will not be published. Required fields are marked *