ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :28-08-2019

ದಿನಾಂಕ ೨೭-೦೮-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೮-೦೮-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಹಲ್ಲೆ ಮತ್ತು ಪ್ರಾಣ ಬೆದರಿಕೆ :

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ನಗರ ವೆಂಕಟೇಶ್ವರ ಕಲ್ಯಾಣ ಮಂಟಪ ದ ಬಳಿ ಘಟನೆ ಸಂಬವಿಸಿರುತ್ತದೆ.,  ಶ್ರೀನಿವಾಸಪುರ ತಾಲ್ಲೂಕು  ಕೊಲ್ಲೂರು ಗ್ರಾಮದ ನಿವಾಸಿಯಾದ  ಕೆ.ಎಸ್ ಕೃಷ್ಣ ಮತ್ತು ಅದೇ ಗ್ರಾಮದ ನಿವಾಸಿಗಳಾದ ಚೊಕ್ಕರೆಡ್ಡಿ  ಎಂಬುವರಿಗೆ  ಸರ್ವೆ ನಂ: ೯೭/೭ ಗಮೀನಿನಲ್ಲಿ ತಕರಾರು ಇದ್ದು ದಿನಾಂಕ ೨೭-೦೮-೨೦೧೯ ರಂದು   ಸದರಿ ಜಮೀನಿನಲ್ಲಿ   ಅಳತೆಯ ಸಲುವಾಗಿ  ಸರ್ವೆ ಮಾಡಿದ್ದು ,  ಕೆ.ಎಸ್ ಕೃಷ್ಣ  ರವರಿಗೆ  ಸೇರಿದ ಜಾಗದಲ್ಲಿ  ಚೊಕ್ಕರೆಡ್ಡಿ ಎಂಬುವರು   ಗುಳಿಯನ್ನು ಅಗೆಯುತ್ತಿದ್ದು , ಅದನ್ನು ಕೇಳಿದಕ್ಕೆ  ಚೊಕ್ಕರೆಡ್ಡಿ ಎಂಬುವರು  ಮಚ್ಚಿನಿಂದ   ಕೆ.ಎಸ್ ಕೃಷ್ಣ ರವರ ತಲೆಗೆ ಹೊಡೆದು  ರಕ್ತಗಾಯಪಡಿಸಿದ್ದು , ಮತ್ತು ಪ್ರಶಾಂತ್ ಎಂಬುವರು ಸಹ ಕೈಗಳಿಂದ  ಹೊಡೆದು  ಅವಾಚ್ಯ ಶಬ್ದಗಳಿಂದ ಬೈದು ಹಲ್ಲೇ ಮಾಡಿ ಪ್ರಾಣ ಬೆದರಿಕೆ  ಹಾಕಿರುತ್ತಾರೆ.

Leave a Reply

Your email address will not be published. Required fields are marked *