ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : ೩೦-೦೮-೨೦೧೯

ದಿನಾಂಕ ೨೯-೦೮-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೩೦-೦೮-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಹಲ್ಲೆ ಮತ್ತು ಪ್ರಾಣಬೆದರಿಕೆ:

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ,  ಶ್ರೀನಿವಾಸಪುರ ತಾಲ್ಲೂಕು ಯಲ್ದೂರು ಹೋಬಳಿ ಹೊಸಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ. ಸದರಿ ಗ್ರಾಮದ ವಾಸಿಗಳಾದ ಪಾರ್ವತಮ್ಮ  ಎಂಬುವರು ತಮ್ಮ ಬಾಬತ್ತುವಿನಲ್ಲಿ  ದಿನಾಂಕ ೨೦-೦೮-೨೦೧೯ ರಂದು ಸಂಜೆ ೪:೦೦ ಗಂಟೆ ಸಮಯದಲ್ಲಿ ಉಳಿಮೆ ಮಾಡುತ್ತಿದ್ದಾಗ ಅದೇ ಗ್ರಾಮದ ವಾಸಿಗಳಾದ  ಜಯಣ್ಣ ಮತ್ತು ಸೀನಪ್ಪ, ಮಂಜುನಾಥ್, ರಾಮಕ್ಕ, ಮಂಜಣ್ಣ, ಎಂಬುವರು ಉಳುಮೆಗೆ ಅಡ್ಡಗಟ್ಟಿ ,,ಕಲ್ಲು ತೂರಾಟ ಮಾಡಿ , ದೊಣ್ಣೆಗಳಿಂದ ಹೊಡೆದು , ಸದರಿ ಜಮೀನಿನಲ್ಲಿ ನಮಗೂ ಪಾಲು ಬರಬೇಕು ಎಂದು  ಅವಾಚ್ಯ ಶಬ್ದಗಳಿಂದ ಬೈದು , ಹಲ್ಲೆ ಮಾಡಿ  ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

ಮಾರಣಾಂತಿಕ ರಸ್ತೆ ಅಪಘಾತ:

ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು – ಕೋಲಾರ  ಎನ್ ಎಚ್ ೭೫ ಅನಂತಪುರ ಗೇಟ್ ಬಳಿ ಘಟನೆ ಸಂಬವಿಸಿರುತ್ತದೆ. ದಿನಾಂಕ ೨೯-೦೮-೨೦೧೯ ರಂದು ೨:೩೦ ನಿಮಿಷದಲ್ಲಿ  ಎಮ್ ನಾರಾಯಣಸ್ವಾಮಿ ಬಿನ್ ಲೆಟ್ ಮುನಿಸ್ವಾಮಿ ಎಂಬುವರು ಮುಳಬಾಗಿಲು ಟಜರಿಗೆ ಹೋಗಲು  ಕೆ ಎ ೦೭ ೮೪೯೭ ಟಾಟಮ್ಯಾಜಿಕ್  ನಲ್ಲಿ ಹೋಗುತ್ತಿರುವಾಗ ಕೋಲಾರ ಕಡೆಯಿಂದ  ಬಂದ ಟಾಟಾ೪೦೭ ಟೆಂಪೋ ವಾಹನವನ್ನು ಚಾಲಕ  ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆಯ ಬದಿಯಲ್ಲಿ ಬರುತ್ತಿದ್ದ ಒಬ್ಬ ಅನಾಮಿಕ ವ್ಯಕ್ತಿಯ ಮೇಲೆ ಹರಿದು ,   ಕೆ ಎ ೦೭ ೮೪೯೭ ಟಾಟಮ್ಯಾಜಿಕ್ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಮಾಡಿದ್ದರಿಂದ ಸದರಿ ಗಾಡಿಯಲ್ಲಿದ್ದ ಪ್ರಯಾಣಿಕರಿಗೆ ಕೈ, ಕಾಲುಗಳಿಗೆ ರಕ್ತ ಗಾಯಗಳಾಗಿದ್ದು, ಡಿಕ್ಕಿ ಹೊಡೆದ  ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ,( ಮೃತ ವ್ಯಕ್ತಿಯ ಹೆಸರು ಮತ್ತು ವಿಳಾಸ ತಿಳಿದುಬಂದಿರುವುದಿಲ್ಲ,)

Leave a Reply

Your email address will not be published. Required fields are marked *