ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :೦೩-೦೯-೨೦೧೯

ದಿನಾಂಕ ೦೨-೦೯-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೦೩-೦೯-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಹಲ್ಲೆ ಮತ್ತು ಪ್ರಾಣಬೆದರಿಕೆ:

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು  ಮಂಜಲನಗರ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,ದಿನಾಂಕ ೦೧-೦೯-೨೦೧೯ ರಂದು ಬೆಳಿಗ್ಗೆ ೮:೩೦ಗಂಟೆ ಸಮಯದಲ್ಲಿ  ಸದರಿ ಗ್ರಾಮದ ನಿವಾಸಿಯಾದ  ಮುನಿಸಾಮಿಗೌಡ ರರಿಗೆ ಸೇರಿದ  ಸರ್ವೆ ನಂಬರ್‍ ೭/೧ ರಲ್ಲಿ  ವಿದ್ಯುತ್ ಕಂಬ ನೆಡುವ ಸಲುವಾಗಿ  ಸದರಿ ಗ್ರಾಮದ ನವಾಸಿಗಳಾದ ಚಂದ್ರಪ್ಪ ಮತ್ತು ಇನ್ನಿತರು  ಗುಳಿ ತೆಗೆಯುತ್ತಿದ್ದು , ಇದನ್ನು ಕೇಳಿದಕ್ಕೆ  ಚಂದ್ರಪ್ಪ ,ವೆಂಕಟರವಣಪ್ಪ, ವೆಂಕಟಪ್ಪ, ದೊಡ್ಡ ವೆಂಕಟೇಶಪ್ಪ, ವರಲಕ್ಶಮ್ಮ, ಲಕ್ಷ್ಮೀದೇವಮ್ಮ, ಹನುಮೇಶ, ಮತ್ತು ಮೋಹನ್ ಇನ್ನಿತರು ಸೇರಿ  ಮುನಿಸಾಮಿಗೌಡ ರವರ ಮೇಲೆ ಕಲ್ಲುಗಳಿಂದ ಹೊಡೆದು , ಅವಾಚ್ಯಶಬ್ದಗಳಿಂದ ಬೈದು  ಕೋಲುಗಳಿಂದ ಹೊಡೆದು ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿರುತ್ತಾರೆ.

 

ಹಲ್ಲೆ ಮತ್ತು ಪ್ರಾಣಬೆದರಿಕೆ:

ಮಾಲೂರು  ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು ಲಕ್ಕೂರು ಹೋಬಳಿ ಚನ್ನಿಗರಾಯಪುರ ಗ್ರಾಮ ದ ಬಳಿ ಘಟನೆ ಸಂಬವಿಸಿರುತ್ತದೆ.  ದಿನಾಂಕ ೦೧-೦೯೨೦೧೯ ರಂದು ಯಾವುದೋ ಕ್ಷುಲ್ಲಕ ಕಾರಣಕ್ಕೆ  ಸದರಿ ಗ್ರಾಮದ ವಾಸಿಗಳಾದ ವೆಂಕಟೇಶಪ್ಪ ಬಿನ್ ಕರಿಯಪ್ಪ ಎಂಬುವರ ಮೇಲೆ ಅದೇ ಗ್ರಾಮದ ವಾಸಿಗಳಾದ ಮೂರ್ತಿ, ಹರೀಶ್, ವೆಂಕಟೇಶ್ ಎಂಬುವರ ಮದ್ಯೇ ಜಗಳ ಶುರುವಾಗಿ ವೆಂಕಟೇಶಪ್ಪ ಎಂಬುವರ ಮೇಲೆ  ಮೇಲ್ಕಂಡ ಆರಿಪಿಗಳು ಗುಂ[ಪುಕಟ್ಟಿ ಕೈಗಳಿಂದ ಹೊಡೆದು, ರಕ್ತಗಾಯ ಮಾಡಿ, ಪ್ರಾಣಬೆದರಿಕೆ ಹಾಕಿರುತ್ತಾರೆ.

ಅಕ್ರಮ ಕೋಳಿಪಂದ್ಯದ ಜೂಜು  ರೂ ೧೬೦೦, ಮತ್ತು ೦೨ ಕೋಳಿ ಹುಂಜ , ಐವರ ಬಂದನ:

ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ  ಅಕ್ರಮ ಕೋಳಿಪಂದ್ಯದ ಜೂಜು ಗೆ  ಸಂಬಂದಿಸಿದಂತೆ, ಪ್ರಕರಣ ದಾಖಲಾಗಿರುತ್ತದೆ, ಶ್ರೀನಿವಾಸಪುರ ತಾಲ್ಲೂಕು ಬಲ್ತಮೂರಿ ಗ್ರಾಮ ದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ  ಸರ್ಕಾರಿ ಗುಟ್ಟೆಗಳಲ್ಲಿ  ಅಕ್ರಮವಾಗಿ  ಕೋಳಿ ಪಂದ್ಯ ಆಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ  ದಿನಾಂಕ ೦೨-೦೯-೨೦೧೯ ರಂದು  ಸದರಿ ಠಾಣೆಯ ಸಿಬ್ಬಂದಿಗಳು ಪಂಚರೊಂದಿಗೆ  ದಾಳಿ ಮಾಡಿದಾಗ ಅಕ್ರಮವಾಗಿ  ಕೋಳಿ ಪಂದ್ಯ ಆಡುತ್ತಿದ್ದು, ಬಾಗಿಯಾಗಿದ್ದ  ೦೫ ಜನ ಆರೋಪಿಗಳನ್ನು ಮತ್ತು ರೂ ಸುಮಾರು ೧೬೦೦ , ಮತ್ತು೦೨ಕೋಳಿ ಹುಂಜನ ಗಳನ್ನು   ಸಿಬ್ಬಂದಿ  ವಶಕ್ಕೆ ಪಡೆದಿರುತ್ತಾರೆ.

ಬಂದಿತ ಆರೋಪಿಗಳ ವಿವರ;

೧) ಪ್ರಸಾದ್ ಬಿನ್ ನಾಗಪ್ಪ, ಗಿರಿರಾವ್ ಕಾಲೋನಿ , ಮದನಪಲ್ಲಿ.

೨) ಶಂಕರ ಬಿನ್ ಲೇಟ್ ಕ್ರಿಷ್ಣಪ್ಪ ಎಸ್, ಬಿ, ಐ ಕಾಲೊನಿ , ಮದನಪಲ್ಲಿ

೦೩) ರಾಜಣ್ಣ ಬಿನ್ ಲೇಟ್ ಪಾಪಣ್ಣ ಎಸ್, ಬಿ, ಐ ಕಾಲೊನಿ , ಮದನಪಲ್ಲಿ

 

೦೪) ಚಂದ್ರ ಬಿನ್ ಶ್ರೀರಾಮಪ್ಪ, ರಂಗನಾಥಪುರ ಶ್ರೀನಿವಾಸಪುರ ತಾಲ್ಲೂಕು

೦೫) ಚಿನ್ನವೆಂಕಟಪ್ಪ ಬಿನ್ ಲೇಟ್ ಚಿನ್ನ ವೆಂಕಟಪ್ಪ  ಎಂ ಕೊತ್ತೂರು  ಶ್ರೀನಿವಾಸಪುರ ತಾಲ್ಲೂಕು

ಮಾರಣಾಂತಿಕ ರಸ್ತೆ ಅಪಘಾತ :

ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ಪರಕರಣ ದಾಖಲಾಗಿರುತ್ತದೆ, ಎನ್-ಎಚ್ ೭೫ ಕೊಲಾರ್‍ ಮುಳಬಾಗಿಲು ರಸ್ತೆ ಕಾಂತರಾಜ ವೃತ್ತದ ಬಳಿ ಘಟನೆ ಸಂಬವಿಸಿರುತ್ತದೆ, ದಿನಾಂಕ ೧-೦೯-೨೦೧೯ ರಂದು ಮುಳಬಾಗಿಲು ತಾಲ್ಲೂಕು ಮೋತಕಪಲ್ಲಿ ಗ್ರಾಮದ ನಿವಾಸಿಯಾದ ಪದ್ಮಮ್ಮ ಎಂಬುವರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಅವರನ್ನು ಚಿಕಿತ್ಸೆಗೆಂದು ಎಸ್,ಎನ್,ಆರ್‍, ಆಸ್ಪತ್ರೆಯಲ್ಲಿ ದಾಖಲಿಸಿದ್ದು , ಇವರನ್ನು ನೋಡಿಬರಲೆಂದು ಅದೇ ಗ್ರಾಮದ ವಾಸಿಯಾದ ಮತ್ತು ಮೈದನಾಗಿರುವ ಗೋಪಿ ಎಸ್ ಬಿನ್ ಸೀನಪ್ಪ ,ಎಂಬುವರು ರಾತ್ರಿ ೧೧: ಗಂಟೆ ಸಮಯದಲ್ಲಿ ತನ್ನ ಬಾಬತ್ತು  ಕೆ ಎ ೫೩ ಕ್ಯೂ ೬೯೫೨ ದ್ವಿಚಕ್ರ ವಾಹನದಲ್ಲಿ ಎನ್-ಎಚ್ ೭೫ ಕೊಲಾರ್‍ ಮುಳಬಾಗಿಲು ರಸ್ತೆ ಕಾಂತರಾಜ ವೃತ್ತದ ಬಳಿ ಹೋಗುತ್ತಿರುವಾಗ  ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿ ರಸ್ತೆಯ ಡಿವೈಡರ್‍ಗೆ ಡಿಕ್ಕಿ ಹೊಡೆದು ತಲೆಗೆ ತೀವ್ರ ಗಾಯವಾಗಿ  ಗೋಪಿ ಎಸ್ ಬಿನ್ ಸೀನಪ್ಪ ರವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

 

 

Leave a Reply

Your email address will not be published. Required fields are marked *