ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೦೬-೦೯-೨೦೧೯

ದಿನಾಂಕ ೦೫-೦೯-೨೦೧೯ ರ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೦೬-೦೯-೨೦೧೯ ರ ಸಂಜೆ ೦೪:೦೦ ಗಂಟೆಯ ವರೆಗೆ ವರದಿಯಾಗಿರುವ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

ವ್ಯಕ್ತಿ ಕಾಣೆಯಾಗಿರುವ ಬಗ್ಗೆ:

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೆ.ಜಿ.ಎಫ್ ಬಳಿಯ ನಾಗಕುಪ್ಪಂ ಗ್ರಾಮದ ವಾಸಿ ವಿಜಯ್ ಕುಮಾರ್ (೪೫) ಎಂಬುವರು ಕಾಣೆಯಾದವರು. ವಿಜಯಕುಮಾರ್ ರವರು ಅನಾರೋಗ್ಯದಿಂದ ಕೋಲಾರ ನಗರದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಾಗಿದ್ದರು. ದಿನಾಂಕ ೦೨-೦೯-೨೦೧೯ ರಂದು ಯಾರಿಗೂ ಹೇಳದೇ ಆಸ್ಪತ್ರೆಯಿಂದ ಹೊರಟುಹೋದ ಇವರು ಹಿಂದಿರುಗಿ ಬಾರದೇ ಕಾಣೆಯಾಗಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ:

ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಾಲೂರು ನಗರ, ಹೊಸೂರು ರಸ್ತೆಯ ಬಿ.ಇ.ಒ ಕಛೇರಿ ಮುಂಬಾಗ ಸಂಭವಿಸಿರುತ್ತದೆ. ದಿನಾಂಕ ೦೪-೦೯-೨೦೧೯ ರಂದು ೨೧:೪೫ ಗಂಟೆ ಸಮಯದಲ್ಲಿ ಮಾಲೂರು ಆದರ್ಶ ನಗರದ ವಾಸಿ ಲೋಕನಾಥನ್ (೫೦) ಎಂಬುವರು ರಸ್ತೆಯನ್ನು ದಾಟುತ್ತಿದ್ದರು. ಆ ಸಮಯದಲ್ಲಿ ಕೆಎ-೦೮-ಹೆಚ್-೮೧೨೪ ದ್ವಿಚಕ್ರವಾಹನದ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಲೋಕನಾತನ್ ರವರಿಗೆ ತೀವ್ರವಾದ ಗಾಯಗಲಾಗಿದ್ದು ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ.

ಕೊಲೆ:

ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಚದುಮನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೪-೦೯-೨೦೧೯ ರಂದು ೦೯:೦೦ ಗಂಟೆಯಿಂದ ೧೦:೩೦ ಗಂಟೆ ನಡುವಿನ ಸಮಯದಲ್ಲಿ ಚದುಮನಹಳ್ಳಿ ಗ್ರಾಮದ ವಾಸಿ ಅಶ್ವತ್ಥ ನಾರಾಯಣ ಎಂಬುವರನ್ನು ತಲೆಗೆ ಹೊಡದು ಕೊಲೆ ಮಾಡಲಾಗಿರುತ್ತದೆ. ಈ ಬಗ್ಗೆ ಮೃತರ ಪತ್ನಿ ರೇವತಿ ರವರು ದೂರು ನೀಡಿದ್ದು ಅದೇ ಗ್ರಾಮದ ವಾಸಿಗಳಾದ ರಮೇಶ್ ಮತ್ತು ವಿಜಯಕುಮಾರ್ ರವರು ಹಳೇ ದ್ವೇಷದಿಂದ ಈ ಕೃತ್ಯ ಎಸಗಿರುವುದಾಗಿ ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

ಸ್ಥಳೀಯ ಮತ್ತು ವಿಶೇಷ ಕಾಯ್ದೆ ಪ್ರಕರಣಗಳು:

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ಹನುಮಂತಪುರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೫-೦೯-೨೦೧೯ ರಂದು ಹನುಮಂತಪುರ ಗ್ರಾಮದ ವಾಸಿ ಈರಮ್ಮ ಮತ್ತು ಹರೀಶ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಮಲ್ಲಪ್ಪ, ಶ್ರೀರಾಮ ಹಾಗೂ ಮತ್ತಿತರರು ಅಕ್ರಮ ಕೂಟ ಕಟ್ಟಿಕೊಂಡು ಅವಾಚ್ಯ ಶಬ್ದಗಳಿಂದ ಬೈದು ಚಾಕು, ದೊಣ್ಣೆ ಮತ್ತು ರಾಡಿನಿಂದ ಹಲ್ಲೆ ಮಾಡಿ ಜಾತಿನಿಂದನೆ ಮಾಡಿರುತ್ತಾರೆ.

Leave a Reply

Your email address will not be published. Required fields are marked *