ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೦೭-೦೯-೨೦೧೯

ದಿನಾಂಕ ೦೬-೦೯-೨೦೧೯ ರ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೦೭-೦೯-೨೦೧೯ ರ ಸಂಜೆ ೦೪:೦೦ ಗಂಟೆಯ ವರೆಗೆ ವರದಿಯಾಗಿರುವ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

ಹಲ್ಲೆ:
ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಉರಿಮಾದಿಗಪಲ್ಲಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೬-೦೯-೨೦೧೯ ರಂದು ೧೮:೩೦ ಗಂಟೆ ಸಮಯದಲ್ಲಿ ಉರಿಮಾದಿಗಪಲ್ಲಿ ಗ್ರಾಮದ ವಾಸಿಗಳಾದ ಲಕ್ಷ್ಮಮ್ಮ ಹಾಗೂ ನರಸಿಂಹ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ನರೇಶ್, ಚಿಕ್ಕ ನರಸಿಂಹಪ್ಪ ಮತ್ತು ಅಮನ್ ಎಂಬುವರು ಕೋಲಿನಿಂದ ಮತ್ತು ಕಲ್ಲಿನಿಂದ ಹೊಡೆದು ಅವಾಚ್ಯ ಶಬ್ದಗೀಂದ ನಿಂದಿಸಿರುತ್ತಾರೆ.

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಲೂರು ತಾಲೂಕು ಬನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೩-೦೯-೨೦೧೯ ರಂದು ೧೭:೩೦ ಗಂಟೆ ಸಮಯದಲ್ಲಿ ಬನಹಳ್ಳಿ ಗ್ರಾಮದ ವಾಸಿ ಸುಮನ್ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಜಗದೀಶ ಮತ್ತು ಸುನಿಲ್ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ರಾಡಿನಿಂದ ಹೊಡೆದು ಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *