ದಿನಾಂಕ ೨೦-೦೬-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೧-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.
ವಾಹನ ಕಳುವು:
ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳುವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ಕುಶಾಲ ನಗರದ ಬೆಹೆಂದ್ ಅಲಾಮಿನ್ ಸ್ಕೂಲ್ ಕೋಲಾರ ದ, ವಿಳಾಸದಲ್ಲಿ ಕೃತ್ಯ ನಡೆದಿರುತ್ತದೆ, ನಗರದ ಕುಶಾಲ ನಗರದ ಬೆಹೆಂದ್ ಅಲಾಮಿನ್ ಸ್ಕೂಲ್ ಕೋಲಾರ ವಿಳಾಸದ ವಾಸಿಯಾದ ಶೇಕ್ ಮೋಲಾ ರವರು ದಿನಾಂಕ:೧೨-೦೬-೨೦೧೯ ರಂದು ಸಂಜೆ ೪;೦೦ ಗಂಟೆಯಲ್ಲಿ ಅವರ ಬಾಬುತ್ತು ದ್ವಿಚಕ್ರ ವಾಹನವನ್ನು ವಾಹನದ ಸಂಖ್ಯೆ ಕೆ.ಎ.೦೧ ಎಚ್ ಟಿ ೯೫೬೬ ಅನ್ನು ಅವರ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿ ಪ್ರವಾಸಕ್ಕೆ ಹೋಗಿ ದಿನಾಂಕ ೨೧-೦೬-೨೦೧೯ ರಂದು ಮನೆಗೆ ವಾಪಸ್ಸಾಗಿ, ನೋಡಿದಾಗ ದ್ವಿಚಕ್ರ ವಾಹನ ಕಾಣಿಸದೇ ಇದ್ದು, ಎಲ್ಲಾ ಕಡೆ ಹುಡುಕಿದರೂ ಸಿಗದೇ ಇದ್ದು, ಸದರಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳುವುಮಾಡಿಕೊಂಡು ಹೋಗಿರುತ್ತಾರೆ