ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೦೮-೦೯-೨೦೧೯

ದಿನಾಂಕ ೦೭-೦೯-೨೦೧೯ ರ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೦೮-೦೯-೨೦೧೯ ರ ಸಂಜೆ ೦೪:೦೦ ಗಂಟೆಯ ವರೆಗೆ ವರದಿಯಾಗಿರುವ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

ಮನೆ ಕಳ್ಳತನ:

ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಪಟ್ಟಣದ ಟೀಚರ್ಸ್‌ ಕಾಲೋನಿಯಲ್ಲಿ ಕೃತ್ಯ ಸಂಭವಿಸಿರುತ್ತದೆ. ಮುಳಬಾಗಿಲು ಪಟ್ಟಣದ ಟೀಚರ್ಸ್‌ ಕಾಲೋನಿ ವಾಸಿಯಾದ ಜಯಪಾಲರೆಡ್ಡಿ ರವರು ದಿನಾಂಕ: ೦೬-೦೯-೨೦೧೯ ರಂದು ಬೆಳಗಿನ ಜಾವ ೦೩-೧೫ ಗಂಟೆಯಲ್ಲಿ ಅವರ ಇಬ್ಬರು ಮಕ್ಕಳಿಗೆ ಜ್ವರ ಇದ್ದ ಕಾರಣ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೊಗಿ ಚಿಕಿತ್ಸೆಕೊಡಿಸಿಕೊಂಡು ಬೆಳಗಿನ ಜಾವ ಸುಮಾರು ೪-೦೦ ಗಂಟೆಗೆ ಮನೆಗೆ ವಾಪಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲನ್ನು ಹೊಡೆದು ಮನೆಯೊಳಗೆ ಪ್ರವೇಶಮಾಡಿ ಮನೆಯಲ್ಲಿ ಬೀರುವಿನಲ್ಲಿ ಇಟ್ಟಿದ್ದ ರೂ. ೧,೫೦೦೦೦/- ನಗದು ಹಣ ಹೋಡಿಯಲ್ಲಿ ಇಟ್ಟಿದ್ದ ರೂ. ೧೦,೦೦೦/- ಹಾಗೂ ೫೮ ಗ್ರಾಂ ಬಂಗಾರದ ವಡವೆಗಳನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ರೂ. ೩೯೨,೦೦೦/- ಗಳಾಗಿರುತ್ತದೆ.

ಮನೆ ಕಳ್ಳತನ:

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮನೆ ಕಳ್ಳತನಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು ಯಲ್ದೂರು ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು ಯಲ್ದೂರು ಗ್ರಾಮದ ವಾಸಿಯಾದ ಜಿ.ಮಂಜುನಾಥ್ ರವರು ಬೆಂಗಳೂರಿನಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸಮಾಡುತ್ತಿದ್ದು, ಇವರ ತಂದೆತಾಯಿ ಮನೆಗೆ ಬೀಗ ಹಾಕಿಕೊಂಡು ತುಮಕೂರಿಗೆ ಮಗಳ ಮನೆಗೆ ಹೋಗಿದ್ದು, ದಿನಾಂಕ: ೦೬-೦೯-೨೦೧೮೯ ರಂದು ರಾತ್ರಿ ಯಾರೋ ಕಳ್ಳರು ಮನೆಯ ಬಾಗಿಲನ್ನು ಹೊಡೆದು ಮನೆಯೊಳಗೆ ಪ್ರವೇಶಮಾಡಿ ಮನೆಯಲ್ಲಿ ಬೀರುವಿನಲ್ಲಿ ಇಟ್ಟಿದ್ದ ರೂ.೨೦,೦೦೦/- ನಗದು ಹಣ, ೫೫ ಗ್ರಾಂ ಬಂಗಾರದ ಆಭರಣಗಳನ್ನು ಹಾಗೂ ೨.೫೦ ಕೆ.ಜಿ ಬೆಳ್ಳಿಯ ಸಾಮಾನುಗಳನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ರೂ. ೨೬೭,೦೦೦/-ಗಳಾಗಿರುತ್ತದೆ.

Leave a Reply

Your email address will not be published. Required fields are marked *