ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :10-09-2019

ದಿನಾಂಕ ೦೯-೦೯-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೧೦-೦೯-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಹಲ್ಲೆ ಮತ್ತು ಪ್ರಾಣಬೆದರಿಕೆ:

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು  ಯಲ್ದೂರು ಹೋಬಳಿ  ಕೊಳತೂರು ಗ್ರಾಮದಲ್ಲಿ ಘಟನೆ ಸಂಭವಿಸಿರುತ್ತದೆ,  ದಿನಾಂಕ ೦೯-೦೯-೨೦೯ ರಂದು ಸುಮಾರು ಸಾಯಂಕಾಲ ೦೬:೦೦ ಗಂಟೆ ಸಮಯದಲ್ಲಿ  ಸದರಿ ವಿಳಾಸದ ನಿವಾಸಿಯಾದ ಚಂದ್ರಪ್ಪ ಬಿನ್ ನಾರೆಪ್ಪ ರವರು ತಮ್ಮ ಬಾಬತ್ತು ತೋಟದ ಜಮೀನಿನಲ್ಲಿ ಕಟ್ಟಿದ್ದ ಹಸುಗಳನ್ನು ಹಿಡಿದಿಕೊಂಡು ಬರುವಾಗ ಒಂದು ಹಸು  ಪಕ್ಕದ ಪಾರಂ ಹುಲ್ಲುಗೆ ಹೋಗಿ ಮೇಯುತ್ತಿತ್ತು ಅದನ್ನು ಕಂಡ ಸದರಿ ಗ್ರಾಮದ ನಿವಾಸಿಯಾದ ಭವಾನಿ ಕೋಂ ಆನಂದಪ್ಪ ರವರು ಇಬ್ಬರು ಅವಾಚ್ಯಶಬ್ದಗಳಿಂದ ಬೈದು ಅಲ್ಲಿದ್ದ ಕಬ್ಬಿಣದ ರಾಡಿನಿಂದ ಕಾಲಿಗೆ ಹೊಡೆದು , ಕೈಗಳಿಂದ ಹೊಡೆದು  ರಕ್ತಗಾಯ ಮಾಡಿ  ಹಲ್ಲೆ ಮಾಡಿರುತ್ತಾರೆ,

ಮಹಿಳೆ ಕಾಣೆಯಾಗಿರುವ ಬಗ್ಗೆ:

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಶ್ರೀನಿವಾಸಪುರ ನಗರ ಅಂಬೇಡ್ಕರ್‌ಪಾಳ್ಯ ದಲ್ಲಿ ಘಟನೆ ಸಂಭವಿಸಿರುತ್ತದೆ, ಸದರಿ ವಿಳಾಸದ ನಿವಾಸಿಯಾದ ಚಿಕ್ಕಗೋಪಾಲಪ್ಪ ರವರ ಮಗಳು ಶೋಭ (೨೫)ವರ್ಷ ಅವರು ದಿನಾಂಕ ೦೯-೦೯-೨೦೯  ರಂದು ಸುಮಾರು ಸಂಜೆ ೦೫:೦೦ ಗಂಟೆ ಸಮಯದಲ್ಲಿ ಮನೆಯಿಂದ ಹೊರಗೆ ಹೋದವಳು ಮೆನೆಗೆ ವಾಪ್ಪಸ್ಸಾಗದೇ ಕಾಣೆಯಾಗಿರುತ್ತಾಳೆ .

ಮಾರಣಾಂತಿಕ ರಸ್ತೆ  ಅಪಘಾತ:

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಹೊಸೂರು – ಮಾಲೂರು ರಸ್ತೆ ಆಲಂಬಾಡಿ ಬಳಿ ಘಟನೆ ಸಂಭವಿಸಿರುತ್ತದೆ, ದಿನಾಂಕ ೦೯-೦೯-೨೦೯ ರಂದು ಸುಮಾರು ೦೫;೦೦ ಗಂಟೆ ಸಮಯದಲ್ಲಿ ಬಂಗಾರಪೇಟೆ ತಾಲ್ಲೂಕು ಕಾಮಸಮುದ್ರ ಹೋಬಳಿ ದೊಡ್ಡಪೊನ್ನಾಂಡಹಳ್ಳಿ ಗ್ರಾಮದ ನಿವಾಸಿಗಳಾದ ಮನೋಹರ್‍ ರಾವ್ ಮತ್ತು ಅದೇ ಗ್ರಾಮದ ನಿವಾಸಿಯಾದ ರಘುನಾಥ್ ರಾವ್ ಅವರು ಇಬ್ಬರು  ಕೆಎ೫೩ ಎಚ್ ಬಿ ೯೭೦೮ ದ್ವಿಚಕ್ರವಾಹನದಲ್ಲಿ ದೇವಸ್ಥಾನಕ್ಕೆ ಹೋಗಿ ಬರುತ್ತಿರುವಾಗ ಮಾಲೂರು ಕಡೆಯಿಂದ ಬಂದ ವಾಹನ ಸಂಖ್ಯೆ ಕೆಎ ೦೩ಎಮ್ ಸಿ ೬೪೧೭ ವಾಹನವನ್ನು ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ  ದ್ವಿಚಕ್ರ ವಾಹನ ಸವಾರರಿಗೆ ತಿವ್ರ ಗಾಯಗಳಾಗಿದ್ದು , ಮನೊಹರ್‍ ರಾವ್ ಗೆ ತಲೆಗೆ ತೀವ್ರ ರಕ್ತ ಗಾಯವಾಗಿ ಸ್ಥಳದಲ್ಲೇ ಮೈತಪಟ್ಟಿರುತ್ತಾರೆ, ರಘುನಾಥ್ ರಾವ್ ರವರಿಗೂ ತೀವ್ರ ಗಾಯಗಳಾಗಿ ಚಿಕಿತ್ಸೆಗಾಗಿ ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

Leave a Reply

Your email address will not be published. Required fields are marked *