ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :11-09-2019

ದಿನಾಂಕ ೧೦-೦೯-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೧೧-೦೯-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಯುವತಿ ಕಾಣೆಯಾಗಿರುವ ಬಗ್ಗೆ:

ಕೊಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಕೊಲಾರ ತಾಲ್ಲೂಕು ಬೆಗ್ಲಿಹೊಸಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ನಿವಾಸಿಯಾದ ಮುನಿರತ್ನ ಬಿವಿ ಬಿನ್ ವೆಂಕಟೇಶಪ್ಪ ರವರ ಮಗಳಾದ ನಿವೇದಿತಾ ಬಿ,ಎಮ್ , ಇವರು ಕೊಲಾರ ಎಕ್ಸಲೆಂಟ್ ಕಾಲೇಜಿನಲ್ಲಿ ದ್ವಿತೀಯ ಪಿ,ಯು,ಸಿ ವ್ಯಾಸಾಂಗ ಮಾಡಿತ್ತಿದ್ದು ದಿನಾಂಕ ೦೯-೦೯-೨೦೧೯ ರಂದು ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಮರುಳಿ ಮನೆಗೆ ಬರದೇ ಕಾಣೆಯಾಗಿರುತ್ತಾಳೆ. ಪಿರ್ಯಾದುದಾರ ಅದೇ ಗ್ರಾಮದ ನಿವಾಸಿಒಯಾದ ಸುನೀಲ್ ಬಿನ್ ವೆಂಕಟೇಶಪ್ಪ ರವರ ಮೇಲೆ ಅನುಮಾನ ವ್ಯಕ್ತ ಪಡಿಸಿರುತ್ತಾರೆ.
ಕಾಣೆಯಾದ ಮಹಿಳೆಯ ವಿವರ ;
ಎತ್ತರ; ೦೫ ಅಡಿ, ಕೋಲು ಮುಖ, ಸಾದಾರಣ ಮೈಕಟ್ಟು, ಕಪ್ಪು ಬಣ್ಣದ ಉಡುಪು ದರಿಸಿರುತ್ತಾರೆ.

ಮಹಿಳೆ ಕಾಣೆಯಾಗಿರುವ ಬಗ್ಗೆ:

ಕೊಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೊಲಾರ ತಾಲ್ಲೂಕು ಶೆಟ್ಟಿಮಾದಮಂಗಲ ಗ್ರಾಮದಲ್ಲಿ ಘಟನೆ ಸಂಭವಿಸಿರುತ್ತದೆ, ಸದರಿ ವಿಳಾಸದ ನಿವಾಸಿಯಾದ ರಾಮಚಂದ್ರಪ್ಪ ರವರ ಮಗಳು ಶ್ವೇತಾ.ಆರ್‌ ರವರಿಗೆ ದಿನಾಂಕ ೧೦-೦೯-೨೦೧೯ ರಂದು ಮದುವೆ ನಿಷ್ಚಯವಾಗಿದ್ದು ,ಅದೇ ದಿನ ಮುಂಜಾನೆ ೩:೦೦ ಗಂಟೆ ಸಮಯದಲ್ಲಿ ಸ್ವಗೃಹದಿಂದ ಕಾಣೆಯಾಗಿರುತ್ತಾರೆ,
ಕಾಣೆಯಾದ ಮಹಿಳೆಯ ವಿವರ ;
ಎತ್ತರ; ೪.೫ ಅಡಿ
ಬಣ್ಣ; ಗೋದಿ ಬಣ್ಣ
ಸಾದಾರಣಮೈಕಟ್ಟು, ಗುಂಡು ಮುಖ , ನೀಲಿ ಬಣ್ಣದ ಚುಡಿದಾರ್‍ ದರಿಸಿರುತ್ತಾರೆ.

ಸುಲಿಗೆ: ೬೦ ಗ್ರಾಂ ತೂಕದ ತಾಳಿ , ಲಕ್ಷಿಕಾಸು ಮತ್ತು ಗುಂಡುಗಳುಇದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಸುಲಿಗೆ
ಮಾಲೂರು ಪೊಲೀಸ್ ಠಾಣೆಯಲ್ಲಿ ಸುಲಿಗೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು ಚಿಕ್ಕಿಗ್ಗಲೂರು ಗ್ರಾಮದ ನಾಗರಾಜ ಇಟ್ಟಿಗೆ ಪ್ಯಾಕ್ಟರಿ ಬಳಿ ಘಟನೆ ಸಂಬವಿಸಿರುತ್ತದೆ, ಸದರಿ ವಿಳಾಸದ ನಿವಾಸಿಯಾದ ಶ್ರೀಮತಿ ಲಕ್ಷಮ್ಮ ಎಂಬುವರು ತಮ್ಮ ಗ್ರಾಮದ ತಮ್ಮ ಬಾಬತ್ತು ಜಮೀನಿನಲ್ಲಿ ಹಸು ಮೇಯಿಸುತ್ತಿದ್ದಾಗ ಯಾರೋ ಅಪರಿಚಿತ ವ್ಯಕ್ತಿ ಬಂದು ಏಕಾಏಕಿ ಶ್ರೀಮತಿ ಲಕ್ಷಮ್ಮ ರವರ ತಲೆಗೆ ದೊಣ್ಣೆಯಿಂದ ತಲೆಗೆ ಹೊಡೆದು ಅವರ ಕತ್ತಲ್ಲಿದ್ದ ೬೦ ಗ್ರಾಂ ತೂಕದ ತಾಳಿ , ಲಕ್ಷಿಕಾಸು ಮತ್ತು ಗುಂಡುಗಳುಇದ್ದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿ ಯಾಗಿರುತ್ತಾನೆ.

Leave a Reply

Your email address will not be published. Required fields are marked *