ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :12-09-2019

ದಿನಾಂಕ ೧೧-೦೯-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೧೨-೦೯-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಹಲ್ಲೆ ಮತ್ತು ಪ್ರಾಣ ಬೆದರಿಕೆ ;

ನಂಗಲಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ತಾಲ್ಲೂಕು ಅನ್ನಿಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿರುತ್ತದೆ,ಸದರಿ ಗ್ರಾಮದ ನಿವಾಸಿಗಳಾದ ಕೃಷ್ಣಪ್ಪ ಬಿನ್ ನಲ್ಲಪ್ಪ  ಮತ್ತು ತಮ್ಮ ಚಿಕ್ಕಮ್ಮನ ಮಗನಾದ ಗೊಪಾಲ ಎಂಬುವರಿಗೂಸದರಿ ಗ್ರಾಮದ ಸರ್ವೆ ನಂಬರ್‍ ೧೫೮ರ ಜಮೀನಿನಲ್ಲಿ ತಕರಾರಿದ್ದು, ದಿನಾಂಕ ೧೧-೦೯-೨೦೦೯ ರಂದು ಸುಮಾರು ಬೆಳಿಗ್ಗೆ ಸುಮಾರು ೦೭:೦೦ ಗಂಟೆ ಸಮಯದಲ್ಲಿ ಹಳೇ ದ್ವೇಶದವನ್ನು ಮನಸಲ್ಲಿಟ್ಟುಕೊಂಡು  ಚಿಕ್ಕಮ್ಮನ ಮಗನಾದ ಗೊಪಾಲನು ಏಕಾ-ಏಕಿ  ಕೃಷ್ಣಪ್ಪನ ಮೇಲೆ ಕಬ್ಬಿಣದ ರಾಡ್ನಿಂದ ಹೊಡೆದು, ಅವಾಚ್ಯ ಶಬ್ದಗಳಿಂದ ಬೈದು , ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ,

 

ಕಳವು:

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಶ್ರೀನಿವಾಸಪುರ ನಗರದ ಪವನ್ ಆಸ್ಪತ್ರೆಯ ಬಳಿ ಘಟನೆ ಸಂಬವಿಸಿರುತ್ತದೆ,  ಶ್ರೀನಿವಾಸಪುರ ನಗರ ವೆಂಕಟೇಶ್ವರ ಭಡಾವಣೆ ನಿವಾಸಿಯಾದ ನಾಗರಾಜರೆಡ್ಡಿ ಬಿನ್ ವೆಂಕಟರಾಮಿರೆಡ್ಡಿ, ರವರು ದಿನಾಂಕ ೦೯-೯-೨೦೧೯ ರಂದು ತನ್ನ ಮಗನಿಗೆ ಅನಾರೋಗ್ಯ ಕಾರಣ ನಗರದ  ಪವನ್ ಆಸ್ಪತ್ರೆಯ ಬಳಿ ತನ್ನ ಬಾಬತ್ತು  ನೊಂದಣಿ ಸಂಖ್ಯೆ ಕೆ ಎ ೦೭ ಡಬ್ಲೂ೦೩೪೧  ದ್ವಿಚಕ್ರ ವಾಹನವನ್ನು ಆಸ್ಪತ್ರೆ ಮುಂಬಾಗ ನಿಲ್ಲಿಸಿ ಮಗನ ಚಿಕಿತ್ಸೆ ಮುಗಿಸಿ ಬರುವಸ್ಟರಲ್ಲಿ ಯಾರೊ  ಅಪರಿಚಿತರು ಸದಿ ದ್ವಿಚಕ್ರ ವಾಹನವನ್ನು ಅಳವು ಮಾಡಿ ಪರಾರಿ ಯಾಗಿರುತ್ತಾರೆ,

ಕಳವು:

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಪುಂಗನೂರು ಕ್ರಾಸ್ ಬಳಿ ಇರುವ ಗೌರಿಶಂಕರ ಕಲ್ಯಾಣ ಮಂಟಪದ ಬಳಿ ಘಟನೆ ಸಂಬವಿಸಿರುತ್ತದೆ, ಕೋಲಾರ ತಾಲ್ಲೂಕು  ವಾನರಾಶಿ ಗ್ರಾಮದ ನಿವಾಸಿಯಾದ ಅಡಿಗೆ ಕ್ರಾಂಟ್ರಾಕ್ಟರ್‍ ಆಗಿರುವ ಬೀರಪ್ಪ ಬಿನ್ ಗಿರಿಯಪ್ಪ ಎಂಬುವರು  ದಿನಾಂಕ ೦೭-೦೯-೨೦೯ ರಂದು  ಪುಂಗನೂರು ಕ್ರಾಸ್ ಬಳಿ ಇರುವ ಗೌರಿಶಂಕರ ಕಲ್ಯಾಣ ಮಂಟಪದ ಬಳಿ ತನ್ನ ಬಾಬತ್ತು ನೊಂದಣಿ ಸಂಖ್ಯೆ ಕೆಎ೦೭ಆರ್‍೫೪೦೭ ನಿಲ್ಲಿಸಿದ್ದು ,ನಂತರ  ಅಡುಗೆ ಕೆಲಸ ಮುಗಿಸಿ ಬಂದು ನೊಡುವಷ್ಠರಲ್ಲಿ ಯಾರ ಅಪರಿಚಿತರು ಸದರಿ ದ್ವಿಚಕ್ರ ವಾಹನವನ್ನು ಕಳವು ಮಾಡಿ ಪರಾರಿ ಯಾಗಿರುತ್ತಾರೆ.

ಪರಿಶಿಷ್ಟ ಜಾತಿ , ನಿಂದನೆ ಮತ್ತು ಸುಮಾರು ರೂ ೬ ಲಕ್ಷ ವಂಚನೆ:

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ , ನಿಂದನೆ ಮತ್ತು ಸುಮಾರು ರೂ ೬ ಲಕ್ಷ ವಂಚನೆಗೆ ಸಂಬಂದಿಸಿದಂತೆ ಪ್ರಕರನ ದಾಖಲಾಗಿರುತ್ತದೆ, ಕೋಲಾರ ನಗರದ ಎಸ್,ಬಿ,ಐ ಬ್ಯಾಂಕ್ ,ಬಳಿ ಘಟನೆ ಸಂಬವಿಸಿರುತ್ತದೆ, ನಂ ೧೬೪೨ ದಯಾನಂದ ರಸ್ತೆ, ಶ್ರೀನಿವಾಸಪುರ ನಗರ ದ ನಿವಾಸಿಯಾದ ವೆಂಕಟೇಶ್ ಬಾಬು ಬಿನ್ ನಾರೆಪ್ಪ ಎಂಬುವರು ಶ್ರೀನಿವಾಸಪುರ ನಗರದಲ್ಲಿ ೩೦*೪೦ ವಿಸ್ತೀರ್ಣದ ಅಂಗಡಿ ಮಳಿಗೆಯಲ್ಲಿ ಗಾರ್ಮೆಂಟ್ಸ್ ಪ್ರಾರಂಬಿಸಲು ಪಿ,ಎಮ್,ಉ,ಪಿ,ಜಿ ಯೊಜನೆಯಡಿಲ್ಲಿ ಲೋನ್ ಪಡೆಯುವ ಸಲುವಾಗಿ ದಾಖಲೆಗಳನ್ನು ಸಲ್ಲಿಸಿದ್ದು, ಸದರಿ ಲೊನ್ ೩ ಲಕ್ಷ ಮಾಡಿದ್ದು, ಬ್ಯಾಂಕ್ ದಾಖಲೆಗಳಲ್ಲಿ ಸುಮಾರು ೧೦ಲಕ್ಷ ಎಂಬಂತೆ ನಖಲಿ ದಾಖಲೆಗಳನ್ನು ಸೃಷ್ಟಿಸಿದ್ದು, ಇದನ್ನು ಕೇಳಿದಕ್ಕಾಗಿ  ಸದರಿ ಬ್ಯಾಂಕ್ ನ ಪೀಲ್ಡ್ ಆಪಿಸರ್‍ ಶ್ರೀಮತಿ ಮಂಜುಳ ರವರು ಮತ್ತು ಸದರಿ ಬ್ಯಾಂಕ್ ನ ಮ್ಯಾನೇಜರ್‍ ಜಯರಾಮ್ ಎಂಬುವರು  ವೆಂಕಟೇಶ್ ಬಾಬು  ರವರನ್ನು ಕೆಳಜಾತಿಯವರು ಎಂದು ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು  ವಂಚನೆ ಮಾಡಿ ಪ್ರಾಣಬೆದರಿಕೆ ಹಾಕಿರುತ್ತಾರೆ,.

 

Leave a Reply

Your email address will not be published. Required fields are marked *