ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :೧೪-೦೯-೨೦೧೯

ದಿನಾಂಕ ೧೩-೦೯-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೧೪-೦೯-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ನಕಲಿ ದಾಖಲೆ ಸೃಷ್ಟಿಸಿ  ನಿವೇಶನ ವಂಚನೆ  ;

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ನಕಲಲಿ ದಾಖಲೆ ಸೃಷ್ಠಿಸಿ  ನಿವೇಸನ ವಂಚನೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ನಗರ , ಗೌರಿಪೇಟೆ, ಸಬ್ರಿಜಿಸ್ಟರ್ ಕಛೇರಿ ಯಲ್ಲಿ ಘಟನೆ ಸಂಬವಿಸಿರುತ್ತದೆ, #194 ಪುಷ್ಪಮಾತ ನಿಲಯ , ಪಿ,ಸಿ ಎಕ್ಸಟೆನ್ಷ್ನ್ , ಕೋಲಾರ ನಗರದ ವಾಸಿಯಾದ ನಂಜಮ್ಮ ಕೊ ರಾಮಕೃಷ್ಣ ೆಂಬುವರು 1995 ನೇ ಸಾಲಿನಲ್ಲಿ  ಕೋಲಾರ ನಗರ ಪೇಟೆಚಾಮರಹಳ್ಳಿ  ನಿವಾಸಿಗಳಾದ ಶ್ರೀನಿವಾಸಪ್ಪ ಮತ್ತು ಸಹೋದರ ನಂಜುಂಡಪ್ಪ ರವರಿಂದ 40*30 ಮತ್ತು 40*20 ಅಡಿಗಳ ೆರಡು ನಿವೇಶನಗಳನ್ನು ಖರೀದಿಸಿದ್ದು, ಸದರಿ ನಿವೇಶನಗಳನ್ನು ಸವೆ೵ ನಂಬರ್ 13/7 ರ 1.32 ೆಕರೆ ಜಮೀನಾಗಿ ಪರಿವತಿ೵ಸಿ  ಅಬಿವೃದ್ದಿ ಪಡಿಸಿ ಸದರಿ  ಜಮೀನಿಗೆ ಈ ಖಾತೆ ಮಾಡಿಸಿ , ಮನೆ ಕಟ್ಟಲು ನಗರ ಸಭೆ ಅದಿಕಾರಿಗಳಿಗೆ ಅನುಮತಿಗೆ ನಿವೇದನೆ ನೀಡಿದ್ದು, ಸದರಿ ಅದಿಕಾರಿಗಳು ಸದರಿ ನಿವೇಶವು ಉದ್ಯಾನವನಕ್ಕೆ ಕಾಯ್ದಿರಿದ ಸ್ಥಳ ೆಂದು ಹಿಂಬರಹ ನೀಡಿರುತ್ತಾರೆ, ಇದರ ಬಗ್ಗೆ ಶ್ರೀನಿವಾಸಪ್ಪ ಮತ್ತು ಸಹೋದರ ನಂಜುಂಡಪ್ಪರವರನ್ನು  ಕೇಳಿದಾಗ ುತ್ತರ ನೀಡದೇ ನಕಲಿ ದಾಖಲೆ ಸೃಷ್ಟಿಸಿ  ನಿವೇಶನ ವಂಚನೆ  ಮಾಡಿ , ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ:

ಕೋಲಾರ ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ಬೆಂಗಳೂರು ರಸ್ತೆ, ಬೆತನಿ ಗೇಟ್ ಬಳಿ ಘಟನೆ ಸಂಬವಿಸಿರುತ್ತದೆ, ಕೋಲಾರ ತಾಲ್ಲೂಕು ಕುಪ್ಪನಹಳ್ಳಿ ಗ್ರಾಮದ ನಿವಾಸಿಯಾದ ನಾರಾಯಣಸ್ವಾಮಿ ಎಂಬುವರು ದಿನಾಂಕ 13-09-2019 ರಂದು ಸುಮಾರು ಸಾಯಂಕಾಲ 06:00 ಗಂಟೆ ಸಮಯದಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ದಾರಿಯಲ್ಲಿ ಎಡಗಡೆಗೆ ನಡೆದುಕೊಂಡು ಹೊಗುತ್ತಿರುವಾಗ ಕೋಲಾರ ಕಡೆಯಿಂದ ವಾಹನ ಸಂಖ್ಯೆ ಕೆಎ03 ಬಿಎಕ್ಸ್7777 ವಾಹನವನ್ನು ಚಾಲಕ ಅತಿವೇಗ ಮತ್ತು ಅಜಾಗರಿಕತೆಯಿಂದ ಚಾಲನೆ ಮಾಡಿಕೊಂಡು ಬಂದು  ನಾರಾಯಣಸ್ವಾಮಿ ಎಂಬುವರಗೆ ಡಿಕ್ಕಿ ಹೊಡೆದ ಅಪಘಾತ ುಂಟುಮಾಡಿದ ಪರಿಣಾಮ ನಾರಾಯಣಸ್ವಾಮಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ

Leave a Reply

Your email address will not be published. Required fields are marked *