ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ :೧೭-೦೯-೨೦೧೯

 

ದಿನಾಂಕ ೧೬-೦೯-೨೦೧೯ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೧೭-೦೯-೨೦೧೯ ಸಂಜೆ ೦೪:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಮಹಿಳೆ ಕಾಣೆ ಯಾಗಿರುವ ಬಗ್ಗೆ:

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು  ಕೆಂಬೋಡಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,

ಸದರಿ ಗ್ರಾಮದ ನಿವಾಸಿಯಾದ ಚಂದ್ರಶೇಖರ್ ಬಿನ್ ವೆಂಕಟೇಶಪ್ಪ ರವರ ನಾದಿನಿ ಯಾದ ಝಾನ್ಸಿ ಕೆ,ವಿ, ಅವರು ದಿನಾಂಕ 15-09-2019 ರಂದು ಸುಮಾರು 5:00 ಗಂಟೆ ಸಮಯದಲ್ಲಿ ಮನೆಯಿಂದ ಹೊರಟಡೆ ಹೋದವರು ಮರುಳಿ ವಾಪ್ಪಸ್ ಆಗದೇ ಕಾಣೆಯಾಗಿರುತ್ತಾರೆ,

 

ಮಹಿಳೆಯ ವಿವರ:

 

ಹೆಸರು : ಝಾನ್ಸಿ ಕೆ,ವಿ

 

ವಯಸ್ಸು: 20 ವಷ೵

 

ಎತ್ತರ:  05 ಅಡಿ, ಸಾದಾರಣ ಮೈಕಟ್ಟು, ಕೆಂಪು ಬಣ್ಣ ,

 

 

ಹಲ್ಲೆ ಮತ್ತು ಪ್ರಾಣ ಬೆದರಿಕೆ :

 

ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣ ಬೆದರಿಕೆ ಗೆ ಸಂಬಂದಿಸಿದಂತೆ ಪ್ರಕರಂ ದಾಖಲಾಗಿರುತ್ತದೆ, ಕೋಲಾರ ನಗರ ದ ಎಸ್,ಎಲ್,ವಿ ಬಾರ್ ಅಂಡ್ ರೆಸ್ಟೋರೆಂಟ್, ಬಳಿ ಘಟನೆ ಸಂಬವಿಸಿರುತ್ತದೆ, 1ನೇ ಮುಖ್ಯ ರಸ್ತೆ, 15 ನೇ ಕ್ರಾಸ್, ಗಾಂಧಿನಗರ ದ ನಿವಾಸಿಯಾದ ಮಂಜೇಶ್,ಜಿ ಎಂಬುವರ ಮೇಲೆ ಯಾವುದೋ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದಿನಾಂಕ 15-9-2019 ರಂದು ರಾತ್ರಿ ಸುಮಾರು 08:30 ಗಂಟೆ ಸಮಯದಲ್ಲಿ ನಗರ ದ ಎಸ್,ಎಲ್,ವಿ ಬಾರ್ ಅಂಡ್ ರೆಸ್ಟೋರೆಂಟ್, ಬಳಿ ನಿಂತಿದ್ದಾಗ ಸದರಿ ವಿಳಾಸದ  ನಿವಾಸಿಗಳಾದ  ಸಂತೋಷ್ ಬಿನ್ ಜಯರಾಜ್ ,ಮತ್ತು ಶಶಿಕುಮಾರ್ ಬಿನ್ ತಿಪ್ಪಣ್ಣ,ೆಂಬುವರು ಏಕಾ-ಏಕಿ, ಮಂಜೇಶ್,ಜಿ ರವರ ತಲೆಗೆ ಬೀರ್ ಬಾಟಲ್ ನಿಂದ ಹೊಡೆದು ರಕ್ತ ಗಾಯ ಮಾಡಿ ಕೈಗಳಿಂದ ಹೊಡೆದು, ಹಲ್ಲೆ ಮಾಡಿ ಸಾಯಿಸಿ ಬಿಡುವುದಾಗಿ ಪ್ಪರಾಣ ಬೆದರಿಕೆ ಹಾಕಿರುತ್ತಾರೆ,

 

 

ಮಹಿಳೆ ಕಾಣೆಯಾಗಿರುವ ಬಗ್ಗೆ:

 

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಕೊಲಾರ ತಾಲ್ಲೂಕು ಎಸ್, ಅಗ್ರಹಾರ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ನಿವಾಸಿಯಾದ  ರಾಮಚಂದ್ರಪ್ಪ ಬಿನ್ ನಾರಾಯಣಸ್ವಾಮಿ ರವರ ಸಹೋದರ ನಾದ ಆನಂದ,ಎಸ್,ಎನ್,   ರವರು ಕುಡಿತದ ಚಟಕ್ಕೆ ಬಾನಿಸನಾಗಿದ್ದು , 2-3 ದಿನಗಳಿಗೊಮ್ಮೆ ಮನೆಗೆ  ಬರುತ್ತಿದ್ದು, ಆದರೆ ದಿನಾಂಕ 15-09-2019 ರಿಂದ ಈ ದಿನದ ವರೆಗೆ ಮನೆಗೆ ಬರದೇ ಕಾಣೆಯಾಗಿರುತ್ತಾನೆ,

Leave a Reply

Your email address will not be published. Required fields are marked *