ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೨೨-೦೬-೨೦೧೯

ದಿನಾಂಕ ೨೧-೦೬-೨೦೧೯ ರ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೨-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ವರೆಗೆ ವರದಿಯಾಗಿರುವ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

ಮಾರಣಾಂತಿಕ ರಸ್ತೆ ಅಪಘಾತ:

ಆಟೋ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯ ಚಾಲನೆಯಿಂದ ಆಟೋ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಆಂದ್ರಪ್ರದೇಶ ಚಿತ್ತೂರು ಜಿಲ್ಲೆಯ ಬಿ.ಕೊತ್ತಕೋಟೆ ಗ್ರಾಮದ ವಾಸಿ ಶ್ಯಾಮಲ (೩೭) ಎಂಬುವರು ಮೃತಪಟ್ಟಿರುತ್ತಾರೆ. ದಿನಾಂಕ ೨೨-೦೬-೨೦೧೯ ರಂದು ೧೪:೪೫ ಗಂಟೆಯಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಆಟೋ ಸಂಖ್ಯೆ ಎಪಿ-೦೩-ಟಿಕೆ-೦೩೭೨ ಸಂಖ್ಯೆಯ ಆಟೋವಿನಲ್ಲಿ ಬರುತ್ತದ್ದಾಗ ಘಟನೆ ಸಂಭವಿಸಿರುತ್ತದೆ. ಆಟೋ ಬಿದ್ದ ಪರಿಣಾಮ ತೀವ್ರಗಾಯಗಳಿಂದ ಶ್ಯಾಮಲ ರವರು ಸ್ಥಳದಲ್ಲೇ ಮೃತಪಟ್ಟಿದ್ದು ಆಟೋವಿನಲ್ಲಿದ್ದ ಇನ್ನಿತರರಿಗೆ ಗಾಯಗಳಾಗಿರುತ್ತದೆ. ಈ ಬಗ್ಗೆ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಕಳವು:

ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಮುತ್ಯಾಲಪೇಟೆ ವಾಸಿ ಜಿ.ಸುಬ್ರಮಣ್ಯಂ (೫೬) ಎಂಬುವರಿಗೆ ಸೇರಿದ ಹೀರೋಹೋಂಡಾ ದ್ವಿಚಕ್ರವಾಹನ ಸಂಖ್ಯೆ ಕೆಎ-೦೭-ವೈ-೨೨೯೩ ಕಳುವಾಗಿರುವ ವಾಹನ. ದಿನಾಂಕ ೧೯-೦೬-೨೦೧೯ ರಂದು ೨೦:೦೦ ಗಂಟೆಯ ಸಮಯದಲ್ಲಿ ಮುಳಬಾಗಿಲು ಆಂಜನೇಯ ದೇವಾಲಯಕ್ಕೆ ಹೋಗಿ ಪಕ್ಕದ ಅಂಚೇಕಛೇರಿಯ ಮುಂಬಾಗದ ರಸ್ತೆಯ ಬದಿ ನಲ್ಲಿಸಿ ತನ್ನ ಸ್ನೇಹಿತರನ್ನು ಮಾತನಾಡಿಸಿಕೊಂಡು ಹಿಂತಿರುಗಿ ಬಂದು ನೋಡಿದಾಗ ವಾಹನ ಕಳುವಾಗಿರುತ್ತದೆ. ಕಳುವಾದ ವಾಹನದ ಮೌಲ್ಯ ರೂ. ೩೮೦೦೦-೦೦ ಆಗಿರುತ್ತದೆ.

ಮಹಿಳೆ ಕಾಣೆಯಾಗಿರುವ ಬಗ್ಗೆ:

ಮಹಿಳೆ ಕಾಣೆಯಾಗಿರುವ ಬಗ್ಗೆ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ನಗರದ ಹೈದರೀ ನಗರದ ವಾಸಿ ಶಾಜಿಯಾ ಬೇಗಂ ಬಿನ್ ಸೈಯದ್ ಅಹ್ಮದ್ (೧೯) ಎಂಬುವರು ಕಾಣೆಯಾಗಿರುತ್ತಾರೆ. ದಿನಾಂಕ ೨೦-೦೬-೨೦೧೯ ರಂದು ರಾತ್ರಿ ಮನೆಯಿಂದ ಹೊರಟ ಶಾಜಿಯಾ ಬೇಗಂ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.

ಕಾಣೆಯಾದ ವ್ಯಕ್ತಿಯ ವಿವರ

ಹೆಸರು: ಶಾಜಿಯಾ ಬೇಗಂ

ವಯಸ್ಸು: ೧೯ ವರ್ಷ

Leave a Reply

Your email address will not be published. Required fields are marked *