ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 30-09-2019

 

ದಿನಾಂಕ 30-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 01-09-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಮಾರಣಾಂತಿಕ ರಸ್ತೆ ಅಪಘಾತ:

 ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು ಚಲುವನಹಳ್ಳಿ ಗೇಟ್‌ ಬಳಿ ಘಟನೆ ಸಂಬವಿಸಿರುತ್ತದೆ,  ದಿನಾಂಕ ೨೯-೦೯-೨೦೧೯ ರಂದು ಸದರಿ ಗ್ರಾಮದ ನಿವಾಸಿಯಾದ ವೆಂಕಟಮ್ಮ ಕೊಂ ಮುನುಯಪ್ಪ ಎಂಬುವರು ತಮ್ಮ ಸ್ವಂತ ಕೆಲಸದ ನಿಮಿತ್ತ ನರಸಾಪುರಕ್ಕೆ ಹೊಗಿದ್ದು ಅಲ್ಲಿ ಕೆಲಸ ಮುಗಿಸಿ ತಮ್ಮ ಗ್ರಾಮದ ಗೇಟ್‌ ಬಳಿ ಇಳಿದು  ಬೆಂಗಳೂರು –ಕೋಲಾರ  ಹೆದ್ದಾರಿ ದಾಟುವಾಗ ಬೆಂಗಳೂರು ಕಡೆಯಿಂದ ಕೆಎ,೦೫ ಎಮ್,ಎಕ್ಸ್೧೭೭೧ ವಾಹನವನ್ನು ಚಾಲಕ ಅತಿವೇಗ ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೋಡೆ ಪರಿಣಾಮ ವೆಂಕಟಮ್ಮ ರವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

 

ವ್ಯಕ್ತಿ ಕಾಣೆಯಾಗಿರುವ ಬಗ್ಗೆ:

ವೇಮಗಲ್ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಕೊಲಾರ ತಾಲ್ಲೂಕು ಕ್ಯಾಲನೂರು ಗ್ರಾಮದ ನಿವಾಸಿಯಾದ ಶ್ರೀಮತಿ ಕುಶಾಲಾವತಿ ಮತ್ತು ಗಂಡ ಮಂಜುನಾಥ್‌ ರವರು ಕೆವಿಎಮ್‌, ಬ್ರಿಕ್ ಪ್ಯಾಕ್ಟರಿ , ವೆಟರನರಿ ಆಸ್ಪತ್ರೆ  ಕ್ಯಾಲನೂರು ನಲ್ಲಿ ವಾಸವಿದ್ದು, ದಿನಾಂಕ ೧೨-೦೯-೨೦೧೯ ರಂದು ಮನೆಯಿಮದ ಕೆಲಸದ ಮೇಲೆ  ಹೊರಗಡೆ ಹೋದವರು ಇಲ್ಲಿಯವರೆಗು ಮನೆಗೆ ಬರದೇ ಕಾಣೆಯಾಗಿರುತ್ತಾರೆ,

 

 

Leave a Reply

Your email address will not be published. Required fields are marked *