ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 01-10-2019

 

ದಿನಾಂಕ 30-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 01-10-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಅಕ್ರಮ ಅಂದರ್‌ ಬಾಹರ್‌ ಜೂಜು , ರೂ ಸುಮಾರು 13,600 ರೂ  ಮತ್ತು   6 ಜನರ ಬಂದನ:

ಶ್ರೀನಿವಾಸಪುರ ಪೊಲಿಸ್‌ ಠಾಣೆಯಲ್ಲಿ ಅಕ್ರಮ ಜೂಜುಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಶ್ರೀನಿವಾಸಪುರ ತಾಲ್ಲೂಕು ಬದ್ದಿಪಲ್ಲಿ ಪ್ರಾಜೆಕ್ಟ್‌ ಬಳಿ ಘಟನೆ ಸಂಬವಿಸಿರುತ್ತದೆ, ದಿನಾಂಕ  ೩೦-೦೯೨೦೧೯ ರಂದು  ಪಿ,ಎಸ್‌,ಐ, ಗೌನಿಪಲ್ಲಿ ರವರಿಗೆ ಬಂದ ಖಚಿತ ಮಾಗಹಿತಿ ಮೇರೆಗೆ ಪಂಚರ ಸಮಕ್ಷಮದೊಂದಿಗೆ  HC 51 ಶ್ರೀನಿವಾಸಗೌಡ, HC 201 ಶ್ರಿನಿವಾಸ  PC 407 ಸಿದ್ದೇಶ  ರವರು ಸರ್ಕಾರಿ ವಾಹನ  KA 07 G 259  ಚಾಲಕ PC 322  ಮಂಜುನಾಥ್ , ಸೇರಿ ಸದರಿ ಸ್ಥಳಕ್ಕೆ   ಹೋಗಿ ನೋಡಲಾಗಿ ಮಾಹಿತಿ ನಿಜವಾಗಿದ್ದು, ಸಿಬ್ಬಂದಿ  ಜೂಜಾಡಿತ್ತಿದ್ದ ಆರೋಪಿಗಳನ್ನು ಮತ್ತು ಸುಮಾರು ರು ೧೩.೬೦೦ ಗನ್ನು ವಶಕ್ಕೆ ಪಡೆದಿರುತ್ತಾರೆ,

 

ಬಂದಿತ ಆರೋಪಿಗಳ ವಿವರ:

೧) ಜಯಣ್ಣ , ಯಾಡಗಾನಪಲ್ಲಿ, ಶ್ರೀನಿವಾಸಪುರ ತಾಲ್ಲೂಕು,

೨) ಚೋಟಾಸಾಬ್‌,  ಯಾಡಗಾನಪಲ್ಲಿ, ಶ್ರೀನಿವಾಸಪುರ ತಾಲ್ಲೂಕು

೩) ಶಂಕರ ವೇಂಪಲ್ಲಿ, ಶ್ರೀನಿವಾಸಪುರ ತಾಲ್ಲೂಕು

೪) ವೆಂಕಟರವಣ ,ವೇಂಪಲ್ಲಿ ಶ್ರೀನಿವಾಸಪುರ ತಾಲ್ಲೂಕು

೫) ನರೇಶ , ದಿಗವ ಚಿಂತಪಲ್ಲಿ, ಶ್ರೀನಿವಾಸಪುರ ತಾಲ್ಲೂಕು

೬) ವೆಂಕಟರವಣ, ವೇಂಪಲ್ಲಿ , ಶ್ರೀನಿವಾಸಪುರ ತಾಲ್ಲೂಕು

 

ಹಲ್ಲೆ ಮತ್ತು ಪ್ರಾಣಬೆದರಿಕೆ:

ವೇಮಗಲ್ ಪೊಲಿಸ್ ಠಾಣೆಯಲ್ಲಿ ಹಲ್ಲೆ ಮತ್ತು ಪ್ರಾಣಬೆದರಿಕೆ ಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾತ ತಾಲ್ಲುಕು , ನರಾಸಾಪುರ ಹೋಬಳಿ , ದೊಡ್ಡವಲ್ಲಬಿ ಗ್ರಾಮದ ಸರ್ವೆ ನಂ: ೮೪ , ಬಳಿ ಘಟನೆ ಸಂಬವಿಸಿರುತ್ತದೆ,  ಸದರಿ ವಿಳಾಸದ ನಿವಾಸಿಯಾದ  ನಂಜಪ್ಪ ಬಿನ್ ಲೇಟ್‌ ಚಿಕ್ಕಪ್ಪಣ್ಣ, ರವರು ದಿನಾಂಕ೨೯-೯-೨೦೧೯ ರಂದು ಮೇಲ್ಕಂಡ  ಜಮಿನಿನಲ್ಲಿ ದಾರಿ ಮುಚ್ಚಿದ್ದು , ನಂತರ ದಿನ ಅದೇ ಗ್ರಾಮದ ನಿವಾಸಿಗಳಾದ   ವೆಂಕಟೇಶಪ್ಪ, ಬೈರೇಗೌಡ, ನಾರಾಯಣಮ್ಮ, ಎಂಬುವರು ಸದರಿ ಜಮೀನಿನ ವಿಚಾರದಲ್ಲಿ ವಿನಾಕಾರಣ ಜಗಳ ತೆಗೆಯುತ್ತಿದ್ದು, ಅದರಂತೆ ಸುಮಾರು ೦೮:೦೦ ಗಂಟೆ ಸಮಯದಲ್ಲಿ , ಏಕಾ-ಏಕಿ ಬಂದು ಅವಾಚ್ಯಶಬ್ದಗಳಿಂದ ಬೈದು , ಕೈಗಳಿಂದ ಹೋಡೆದು, .ಹಲ್ಲೆ ಮಾಡಿ ಪ್ರಾಣಬೆದರಿಕೆ ಹಾಕಿರುತ್ತಾರೆ,

 

Leave a Reply

Your email address will not be published. Required fields are marked *