ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 04-10-2019

ದಿನಾಂಕ 03-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 04-10-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಕರ್ತವ್ಯ ನಿರತ ಪೊಲೀಸ್‌ ಅದಿಕಾರಿಗೆ ಕರ್ತವ್ಯ ಅಡ್ಡಿ ಮತ್ತು ಹಲ್ಲೆ:

ಮುಳಬಾಗಿಲು  ನಗರ ಪೊಲೀಸ್‌ ಠಾಣೆಯಲ್ಲಿ  ಕರ್ತವ್ಯ ನಿರತ ಪೊಲೀಸ್‌ ಅದಿಕಾರಿಗೆ ಕರ್ತವ್ಯ ಅಡ್ಡಿ ಮತ್ತು ಹಲ್ಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ನಗರದ  ಕೆ ಬೈಪಲ್ಲಿ ರಸ್ತೆ, ಗೆಮಿನಿ ಸ್ಟುಡಿಯೊ ಪಕ್ಕ ಪ್ರಸಾದ್‌ ಅಂಗಡಿ ಮುಂಬಾಗ ಘಟನೆ ಸಂಬವಿಸಿರುತ್ತದೆ, ದಿನಾಂಕ ೦೩-೧೦-೨೦೧೯ ರಂದು  ನಗರ ಠಾಣೆಯ PC 560 ಶಂಕರಪ್ಪ ಎಂಬುವರು ಚೀತಾ ವಾಹನದ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದು,  ಸುಮಾರು ಮದ್ಯಾಹ್ನ ೧೨:೪೫ ಗಂಟೆ ಸಮಯದಲ್ಲಿ ಮೇಲ್ಕಂಡ ಘಟನೆ ನಡೆದ ಸ್ಥಳದಲ್ಲಿ ಸಂಚಾರಿ ನಿಯಂತ್ರಣ ಸಲುವಾಗಿ ದ್ವಿಚಕ್ರ ವಾಹನಗಳನ್ನು ತೆರುವು ಗೋಲಿಸುತ್ತಿದ್ದು, ಆದೇ ಸಮಯಕ್ಕೆ ಸದರಿ ಸ್ಥಳಕ್ಕೆ ಬಂದ TN 05 P-6224 ನೊಂದಣಿ  ಸಂಖ್ಯೆಯ ದ್ವಿಚಕ್ರ  ವಾಹನವನ್ನು  ಅಡ್ಡಾ ದಿಡ್ಡಿ ನಿಲ್ಲಿಸಿ ಸಾರ್ವಜನಿಕರಿಗೆ ಸಂಚಾರಕ್ಕೆ ಅಡಚಣೆ ಯಾಗಿದ್ದು, ಸದರಿ ದ್ವಿಚಕ್ರ ವಾಹನವನ್ನು ಪಕ್ಕಕ್ಕೆ ನಿಲ್ಲಿಸಲು ಸೂಚಿಸಿದ್ದು, ಆದರೆ ಆಸಾಮಿ ಪೊಲೀಸ್‌ ಅದಿಕಾರಿಯ ಮಾತು ಲೆಕ್ಕಿಸದೆ, ವಾಹನವನ್ನು  ಆಲ್ಲಿಯೇ ನಿಲ್ಲಿಸಿ ,ಅವಾಚ್ಯ ಶಬ್ದಗಳಿಂದ ಬೈದು , ಸಮವಸ್ತ್ರವನ್ನು ಎಳೆದು ಕರ್ತವ್ಯಕ್ಕೆ ಅಡ್ಡಿ ಮಾಡಿ, ಹಲ್ಲೆ ಮಾಡಿರುತ್ತಾನೆ,

 

ಹಲ್ಲೆ ಮತ್ತು ಪ್ರಾಣ ಬೆದರಿಕೆ ;

ಮುಳಬಾಗಿಲು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ    ಹಲ್ಲೆ ಮತ್ತು ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ತ್ತಾಲ್ಲೂಕು ಸಂಗಸಂದ್ರ  ಗ್ರಾಮದಲ್ಲಿ ಘಟನೆ  ಸಂಬವಿಸಿರುತ್ತದೆ, ಸದರಿ ಗ್ರಾಮದ ನಿವಾಸಿಯಾದ ಕೃಷ್ಣಪ್ಪ ಬಿನ್ ಹನುಮಪ್ಪ ಎಂಬುವರು ತನ್ನ ತಂಗಿಯಾದ ಸರಸ್ವತಿ ಯನ್ನು ಕೊಲಾರ ತಾಲ್ಲುಕು ಕ್ಯಾಲನೂರ್‌ ಗ್ರಾಮದ ನಿವಾಸಿಯಾದ ಶಂಕರಪ್ಪ ಎಂಬುವರಿಗೆ ಕೊಟ್ಟು ವಿವಾಹ  ಮಾಡಿದ್ದು, ಸದರಿ ದಂಪತಿಗಳು ವಾಸ ಮಾಡಲು ಕೃಷ್ಣಪ್ಪ ತಮ್ಮ ಊರಿನಲ್ಲಿಯೇ ತನ್ನ ಮನೆಯನ್ನು ನೀಡಿದ್ದು, ಹೊಸ ಮನೆ ಕಟ್ಟುವ ತನಕ ಎಂದು ಹೇಳಿ ವಾಸಿಸುತ್ತಿದ್ದು, ದಿನಾಂಕ ೦೩-೧೦-೨೦೧೯ ರಂದು ಮನೆಯನ್ನು ಬಿಡಲು ಹೇಳಿದ್ದಕ್ಕಾಗಿ ಕೋಪಗೊಂಡ ಶಂಕರಪ್ಪ ಸುಮಾರು ೦೬:೦೦ ಗಂಟೆ ಸಮಯದಲ್ಲಿ ಮಚ್ಚಿನಿಂದ ತಲೆಗೆ ಹೊಡೆದು, ರಕ್ತ ಗಾಯ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು, ಪ್ರಾಣಬೆದರಿಕೆ ಹಾಕಿರುತ್ತಾರೆ,

 

 

 ಕಳವು:

 ಮಾಲುರು  ಪೋಲೀಸ್‌ ಠಾಣೆಯಲ್ಲಿ  ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಮಾಲೂರು ,ನಗರ  ಆರ್‍,ಪಿ ಲೇಔಟ್  ಬಳಿ ಘಟನೆ  ಸಂಬವಿಸಿರುತ್ತದೆ,  ಸದರಿ ವಿಳಾಸದ ನಿವಾಸಿ ರೆಹಮತ್ತುಲ್ಲಾ ಬಿನ್ ಸದಾರ್‍ಸಾಬ್‌ , ರವರು ದಿನಾಂಕ ೦೨-೧೦-೨೦೧೯ ರಂದು ತಮ್ಮ ನಾದಿನಿಗೆ ಆರೋಗ್ಯದಲ್ಲಿ ಏರು ಪೇರಾಗಿದ್ದು, ಚಿಕಿತ್ಸೆಗೆಂದು ಬೆಂಗಳೂರಿನ  ನಿಮಾನ್ಸ್ ಆಸ್ಪತ್ರೆಗೆ  ದಾಖಲು ಮಾಡಿ ಮರುದಿನ ೦೩-೧೦-೨೦೧೯ ರಂದು ಮನೆಗೆ ಬಂದು ನೋಡುವಲ್ಲಿ ಯಾರೋ ಅಪರಿಚಿತರು ಮನೆಯ ಬಾಗಿಲು ಹೊಡೆದು, ಮನೆಯಲ್ಲಿದ್ದ ೩೦ ಗ್ರಾಂ ತುಕದ ೦೩ ಬಂಗಾರದ ಸರಗಳು, ೦೫ ಉಂಗುರಗಳು, ೦೩ ಜೊತೆಬೆಳ್ಳಿ ಕಾಲು ಚೈನುಗಳನ್ನು ಕಳವು ಮಾಡಿ ಪರಾರಿ ಯಾಗಿರುತ್ತಾರೆ,

 

ಹಲ್ಲೆ ಮತ್ತು ಪ್ರಾಣಬೆದರಿಕೆ:   

ಕೋಲಾರ  ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಹಲ್ಲೆ ಮತ್ತು ಪ್ರಾಣಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು ಪೇರುಶೆಟ್ಟಿಹಳ್ಳಿ ಗ್ರಾಮ್ದಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮದ ನಿವಾಸಿಗಳಾದ ಸೊಣ್ಣಪ್ಪ ಮತ್ತು ದೇವಪ್ಪ ಕುಟುಂಬದವರಿಗೆ ಜಮಿನಿನ ವಿಚಾರದಲ್ಲಿ  ತಕರಾರಿದ್ದು, ದಿನಾಂಕ ೦೩-೧೦-೨೦೧೯ ರಂದು  ಸೊಣ್ಣಪ್ಪ ಮತ್ತು ಹೆಂಡತಿ ಪದ್ಮಮ್ಮ ರವರು  ಮನೆಯಲ್ಲಿದ್ದಾಗ ದಾಯಾದಿ ದೇವಪ್ಪ ರವರ  ಹೆಂಡತಿ ಸಂಜೆಯ ಮತ್ತು,ಮಗಳು ಸುದಾ ಮತ್ತು ಯಾರೊ ಒಬ್ಬ ಅಪರಿಚಿತ ವ್ಯಕ್ತಿಯೊಂದಿಗೆ  ಬಂದು ಮುಖಕ್ಕೆ ಪೆಪ್ಪರ್‍ ಸ್ಪರೇ ಹೊಡೆದು , ಕೈಗಳಿಂದ ಹೊಡೆದು, ಹಲ್ಲೆ ಮಾಡಿ, ಜಮೀನಿನ ವಿಷಕ್ಕೆ ಬಂದರೆ ಸಾಯಿಸಿಬಿಡುವುದಾಗಿ ಪ್ರಾಣಬೆದರಿಕೆ ಹಾಕಿರುತ್ತಾರೆ,

Leave a Reply

Your email address will not be published. Required fields are marked *