ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 05-10-2019

ದಿನಾಂಕ 04-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 05-10-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಮಹಿಳೆ ಕಾಣೆಯಾಗಿರುವ ಬಗ್ಗೆ:

 ಮುಳಬಾಗಿಲು  ನಗರ ಪೊಲೀಸ್‌ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ,  ಮುಳಬಾಗಿಲು ನಗರ , ಶ್ರೀ ಸತ್ಯನಾರಾಯಣ ದೇವಸ್ಥಾನ , ಮುತ್ಯಾಲಪೇಟೆ , ಎಂಬಲ್ಲಿ ಘಟನೆ ಸಂಬವಿಸಿರುತ್ತದೆ,   ಸದರಿ ವಿಳಾಸದ ನಿವಾಸಿಯಾದ ಮುನಿಸ್ವಾಮಿ ಎಂಬುವರ ಮಗಳು ಸುಮ ಎಮಬುವರು ದಿನಾಂಕ ೦೩-೧೦-೨೦೧೯ ರಂದು ಸುಮಾರು ೦೯:೩೦ ಗಂಟೆಗೆ ಎಂದಿನಂತೆ ಕಾಲೇಜಿಗೆ   ಹೋಗುವುದಾಗಿ ಹೇಳಿ  ಮನೆಯಲ್ಲಿದ್ದ ಸುಮಾರು ೨೫,೦೦೦ ರೂ ನಗದು ಹನವನ್ನು ತೆಗೆದುಕೊಂಡು ಮನೆಗೆ ಬರದೇ ಕಾಣೆಯಾಗಿರುತ್ತಾಳೆ,  ಪಿರ್ಯಾದುದಾರ  ಮುಲಬಾಗಿಲು ತಾಲ್ಲೂಕು  ಚದುಮನಹಳ್ಳಿ ಗ್ರಾಮದ ನಿವಾಸಿಯಾದ ಗಿರೀಶ್‌ ಎಂಬುವರ ಮೇಲೆ ಅನುಮಾನ ವ್ಯಕ್ತ ಪಡಿಸಿರುತ್ತಾರೆ,

 

ಕಳವು;

ಕೊಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರನ ದಾಖಲಾಗಿರುತ್ತದೆ, ಕೋಲಾರ ತಾಲ್ಲೂಕು ಮದನಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮದ ನಿವಾಸಿಯಾದ  ವೆಂಕಟಶಾಮಿರೆಡ್ಡಿ ಬಿನ್ ನಾರಾಯಣ ರೆಡ್ಡಿ ರವರಬಾಬತ್ತು ಜಮೀನಿನಲ್ಲಿ  ಅಳವಡಿಸಿದ್ದ ಬೋರ್‌ವೆಲ್‌ ಕೇಬಲ್, ಮತ್ತು ಸ್ಟಾಟರ್‌ ಗಳನ್ನು, ಮತ್ತು ಅಕ್ಕ, ಪಕ್ಕ  ಜಮೀನಿನಲ್ಲಿ ಅಳವಡಿಸಿದ್ದ ಬೊರ್‌ವೆಲ್‌ ಕೇಬಲ್‌, ಮತ್ತು ಸ್ಟಾಟರ್‌ಗಳನ್ನು , ಯಾರೊ ಅಪರಿಚಿತರು ದಿನಾಂಕ ೦೩-೧೦-೨೦೧೯ ರಂದು ರಾತ್ರಿ ಕಳವು ಮಾಡಿ ಪರಾರಿಯಾಗಿರುತ್ತಾರೆ,

ಸುಲಿಗೆ:

ಕೊಲಾರ ಗ್ರಾಮಾಂತರ ಪೊಲಿಸ್‌ ಠಾಣೆಯಲ್ಲಿ ಸುಲಿಗೆಗೆ ಸಂಬಂದಿಸಿದಂತೆ ಪ್ರಕರನ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು ದೊಡ್ಡಯ್ಯೂರು ಗ್ರಾಮದ ನಿವಾಸಿಯಾದ ಲಕ್ಷ್ಮಮ್ಮ ಎಂಬುವರು  ದಿನಾಂಕ೦೪-೧೦-೨೧೯ ರಂದು  ಬೆಳಿಗ್ಗೆ ೯:೦೦ ಗಂಟೆಯಲ್ಲಿ ತಮ್ಮ ಹೊಲದಲ್ಲಿ  ಹುಲ್ಲು ಕೊಯ್ಯುತ್ತಿರುವಾಗ ಯಾರೊ ಅಪರಿಚಿತ ವ್ಯಕ್ತಿ  ಲಕ್ಷ್ಮಮ್ಮ ರವರನ್ನು ಮಾತನಾಡಿಸಿ  ಒಂಟಿಯಾಗಿದ್ದನ್ನು ಗಮನಿಸಿ  ತಲೆಗೆ ದೊಣ್ಣೆಯಿಂದ ಹೊಡೆದು ತನ್ನ ಬಳಿ ಇದ್ದ ಬಂಗಾರದ ಓಲೆ, ಮಾಟಿ, ಲಕ್ಷ್ಮಿಕಾಸನ್ನು ಸುಲಿಗೆ ಮಾಡಿ ಪರಾರಿಯಾಗಿರುತ್ತಾನೆ,

Leave a Reply

Your email address will not be published. Required fields are marked *