ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೨೩-೦೬-೨೦೧೯

ದಿನಾಂಕ ೨೨-೦೬-೨೦೧೯ ರ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೩-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ವರೆಗೆ ವರದಿಯಾಗಿರುವ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

ವಿಶೇಷ ಮತ್ತು ಸ್ಥಳೀಯ ಕಾಯ್ದೆ ಪ್ರಕರಣಗಳು:

ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಹಾಗೂ ಕೊಲೆ ಪ್ರಯತ್ಮಕ್ಕೆ ಸಂಬಂಧಿಸಿದಂತ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು ತಿಮ್ಮನಪಲ್ಲಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೬-೨೦೧೯ ರಂದು ೨೦:೦೦ ಗಂಟೆ ಸಮಯದಲ್ಲಿ ತನ್ನ ಮನೆಯಲ್ಲಿದ್ದ ತಿಮ್ಮನಪಲ್ಲಿ ಗ್ರಾಮದ ವಾಸಿ ವಿಶ್ವನಾಥ ಟಿ.ಎನ್ (೨೭) ಎಂಬುವರ ವಿರುದ್ದ ಗುಂಪು ಕಟ್ಟಿಕೊಂಡು ಬಂದ ಅದೃ ಗ್ರಾಮದ ವಾಸಿಗಳಾದ ಶಿವಾರೆಡ್ಡಿ, ಮಂಜುನಾಥ ರೆಡ್ಡಿ, ಚೌಡರೆಡ್ಡಿ ಮತ್ತು ಶಂಕರಪ್ಪ ಎಂಬುವರು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಿರುತ್ತಾರೆ. ಅವರಲ್ಲಿ ಶಂಕರಪ್ಪ ಎಂಬುವರು ಕೊಲೆ ಮಾಡುವ ಉದ್ದೇಶದಿಂದ ಮಚ್ಚಿನಿಂದ ವಿಶ್ವನಾಥ ರವರ ತಲೆಗೆ ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆ. ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ಕೊಲೆಗೆ ಯತ್ನ:

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಮದನಹಳ್ಳಿ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೨೨-೦೬-೨೦೧೯ ರಂದು ೧೫:೩೦ ಗಂಟೆ ಸಮಯದಲ್ಲಿ ಮದನಹಳ್ಳಿ ಗ್ರಾಮದ ವಾಸಿ ಸಂತೋಷ (೨೩) ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ರತ್ನಮ್ಮ, ಕಿಟ್ಟಪ್ಪ ಮತ್ತು ಸರಳ ಎಂಬುವರು ಕೊಲೆ ಮಾಡುವ ಉದ್ದೇಶದಿಂದ ಮಚ್ಚಿನಿಂದ ಮತ್ತು ಚಾಕುವಿನಿಂದ ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆ. ಕೊಳಾಯಿಯಿಂದ ನೀರು ಹಿಡಿಯುವ ವಿಚಾರದ ಹಿನ್ನೆಲೆಯಲ್ಲಿ ಈ ಕೃತ್ಯ ಸಂಭವಿಸಿರುತ್ತದೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ:

ಶ್ರಿನಿವಾಸಪುರ ತಾಲ್ಲೂಕು ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರಿನಿವಾಸಪುರ ತಾಲ್ಲೂಕು ಬಿ .ಸಿ ರಸ್ತೆ ಕಮತಂಪಲ್ಲಿ ಗೇಟ್ ಬಳಿ ಘಟನೆ ಸಂಬವಿಸಿರುತ್ತದೆ.  ದಿನಾಂಕ: ೨೨-೦೬-೨೦೧೯ ರಂದು ಚಿಂತಾಮಣಿ ತಾಲ್ಲೂಕು ನಿಮ್ಮಕಾಯಲಪಲ್ಲಿ ಗ್ರಾಮದ ನಿವಾಸಿ ವೆಂಕಟೇಶ್ ಎಂಬುವರು ತಮ್ಮ ದ್ವಿಚಕ್ರ ವಾಹನದಲ್ಲಿ ಸಂಖ್ಯೆ (ಕೆ ಎ ೦೭ ಎಸ್೦೨೭೧ )ವಯುಕ್ತಿಕ ಕೆಲಸದ ಪ್ರಯುಕ್ತ ಶ್ರಿನಿವಾಸಪುರ ತಾಲ್ಲೂಕು ದೊಡ್ಡಬಂದಾರ್ಲಹಳ್ಲಿ ಗ್ರಾಮದಿಂದ ಸ್ವಂತ ಗ್ರಾಮಕ್ಕೆ ತೆರಳುವಾಗ ಸುಮಾರು ೨೩:೩೦ ಗಂಟೆ ಸಯದಲ್ಲಿ ಬಿ.ಸಿ. ರಸ್ತೆ ಕಮತಂಪಲ್ಲಿ ಗೇಟ್ ಬಳಿ ಯಾವುದೋ ವಾಹನ ಅತಿವೇಗ ಮತ್ತು ಅಜಾಕರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂದೆಯಿಂದ ,ಸಂಖ್ಯೆ (ಕೆ ಎ ೦೭ ಎಸ್೦೨೭೧ ) ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಿಂತಾಮಣಿ ತಾಲ್ಲೂಕು ನಿಮ್ಮಕಾಯಲಪಲ್ಲಿ ಗ್ರಾಮದ ನಿವಾಸಿ ವೆಂಕಟೇಶ್ ಎಂಬುವರಿಗೆ ತಲೆ,ಎರಡು ಮೊಣಕಾಲು ,ಹೊಟ್ಟೆಗೆ ರಕ್ತಗಾಯಾಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ:

ಮಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಳಬಾಗಿಲು ತಾಲ್ಲೂಕು ನಂಗಲಿ ಎನ್ ಎಚ್ -೭೫ ರಸ್ತೆ ಕೆ,ಎಸ್,ಆರ್,ಟಿ,ಸಿ, ಡಿಪ್ಪೊ ಹತ್ತಿರ ಘಟನೆ ಸಂಬವಿಸಿರುತ್ತದೆ. ದಿನಾಂಕ: ೨೩-೦೬-೨೦೧೯ ರಂದು ಸುಮಾರು ೯:೩೦ ಗಂಟೆ ಸಯದಲ್ಲಿ ಮುಜಾಸಿಂಗ್ ಬೇಗ್ /ಬಿನ್ ಮುಸ್ತಾಕ್ ಬೇಗ್ ,ರವರು ತನ್ನ ಬಾಬತ್ತು ಕೆ ಎ ೦೨ ಎನ್ ೧೮೭ ನ ತಮ್ಮ ದ್ವಿಚಕ್ರ ವಾಹನದಲ್ಲಿ ಮಳಬಾಗಿಲು ತಾಲ್ಲೂಕು ನಂಗಲಿ ಎನ್ ಎಚ್ -೭೫ ರಸ್ತೆ ಕೆ,ಎಸ್,ಆರ್,ಟಿ,ಸಿ, ಡಿಪ್ಪೊ ಹತ್ತಿರ  ಎಡಬದಿಯಲ್ಲಿ ಹೋಗುತ್ತಿದ್ದಾಗ  ಕೆ ಎ ೦೭ ಎಪ಼್ ೧೮೩೩ ಕೆ,ಎಸ್,ಆರ್,ಟಿ,ಸಿ ವಾಹನವನ್ನು ಚಾಲಕ ಅತಿವೇಗ ಮತ್ತು ಅಜಾಕರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮುಜಾಸಿಂಗ್ ಬೇಗ್ /ಬಿನ್ ಮುಸ್ತಾಕ್ ಬೇಗ್ ,ರವರು ತನ್ನ ಬಾಬತ್ತು ಕೆ ಎ ೦೨ ಎನ್ ೧೮೭ ನ ತಮ್ಮ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಡಿಕ್ಕಿ ಹೊಡೆದ ಪರಿಣಾಮ ಮುಜಾಸಿಂಗ್ ಬೇಗ್ /ಬಿನ್ ಮುಸ್ತಾಕ್ ಬೇಗ್ ,ರವರಿಗೆ ಎದೆ,ಹೊಟ್ಟೆ ,ಮರ್ಮಾಂಗಕ್ಕೆ ತೀರ್ವ ರಕ್ತಗಾಯಾಳಾಗಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *