ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 09-10-2019

ದಿನಾಂಕ 08-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 09-10-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಕಳವು:

ಮುಳಬಾಗಿಲು ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ತಾಲ್ಲೂಕು  ಕೊರವೆನೂರು ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ,  ಸದರಿ ಗ್ರಾಮದ ನಿವಾಸಿಯಾದ  ಮಂಜುನಾಥ್‌ ಬಿನ್ ರಾಮಪ್ಪ ರವರ ಬಾಬತ್ತು  ಸರ್ವೆನಂಬರ್‌ ೨೦ ರಲ್ಲಿ ಕೊಳವೆ ಬಾವಿ ಇದ್ದು, , ಸದರಿಕೊಳವೆ ಬಾವಿಗೆ  ಸುಮಾರು೧೫೦  ಮೀಟರ್‌ ಉದ್ದದ ಕೇಬಲ್‌ ಅಳವಡಿಸಿದ್ದು, ಸದರಿ ಕೇಬಲ್‌ ಅನ್ನು ದಿನಾಂಕ ೦೭-೧೦-೨೦೧೯ ರಂದು ರಾತ್ರಿ ಯಾರೊ ಅಪರಿಚಿತರು ಕಳವು ಮಾಡಿ ಪರಾರಿಯಾಗಿರುತ್ತಾರೆ,

ಹಲ್ಲೆ ಮತ್ತು, ಪ್ರಾಣ ಬೆದರಿಕೆ :

ಮುಳಬಾಗಿಲು ಗ್ರಾಮಾಂತರ  ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಮತ್ತು, ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮುಳಬಾಗಿಲು ತಾಲ್ಲೂಕು  ಅಲಾಲಸಂದ್ರ ಗ್ರಾಮದ  ಬಳಿ ಘಟನೆ ಸಂಬವಿಸುರುತ್ತದೆ, ಸದರಿ ವಿಳಾಸದ ನಿವಾಸಿಯಾದ ವೆಂಕಟರಾಮಪ್ಪ ಬಿನ್ ಗಂಗಪ್ಪ ರವರು  ತಮ್ಮ ಪತ್ರಾಜಿತ ಆಸ್ತಿಯಲ್ಲಿ ತನ್ನ ಬಾಗಕ್ಕೆ ಬಂದಿರುವ  ಖಾತೆ ಸಂಖ್ಯೆ : ೮೭ ರಲ್ಲಿ ಬೇವಿನ ಮರಗಳನ್ನು ಬೆಳೆಸಿದ್ದು, ಸದರಿ ಮರಗಳನ್ನು ದಿನಾಂಕ ೦೮-೧೦-೨೦೧೯ ರಂದು ಅದೇ ಗ್ರಾಮದ ನಿವಾಸಿಗಳಾದ ರಾಜಮ್ಮ, ಕೊಂ ರಾಜಪ್ಪ, ನೀಲಮ್ಮ ಕೊಂ ರಾಜಪ್ಪ, ಪ್ರೇಮಮ್ಮ ಕೊಂ ಮುನಿರಾಜ್‌, ಮುನಿರಾಜ್ ಬಿನ್ ಗಂಗಪ್ಪ ರವರು ಒಟ್ಟಿಗೆ ಸೇರಿ ಸದರಿ ಮರಗಳನ್ನು ಕಡಿಯಲು ಬಂದಿದ್ದು ಇದನ್ನು ಕೇಳಿದ್ದಕ್ಕೆ ಎಲ್ಲರೂ  ಒಟ್ಟಿಗೆ ಹೊಡೆದು, ಹಲ್ಲೆ ಮಾಡಿ,   ಪ್ರಾಣ ಬೆದರಿಕೆ ಹಾಕಿರುತ್ತಾರೆ

ಮಾರಣಾಂತಿಕ ರಸ್ತೆ ಅಪಘಾತ:

ಮಾಸ್ತಿ ಪೊಲೀಸ್‌ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಮಾಲೂರು ತಾಲ್ಲೂಕು ಅಗರ- ನಿದರಮಂಗಲ ಗೇಟ್ ಬಳಿ ಘಟನೆ ಸಂಬವಿಸಿರುತ್ತದೆ, ಬಂಗಾರಪೇಟೆ ತಾಲ್ಲೂಕು ರೆಹಮಾನ್‌ ಕಾಂಪೌಂಡ್‌ ನ ನಿವಾಸಿಗಳಾದ ರಿಜ್ವಾನ್, ಬಿನ್ ಭಾಷ, ಮತ್ತು ಜಾಕೀರ್‌ ಎಂಬುವರು ಯಾವುದೋ ಕೆಲಸದ ನಿಮಿತ್ತ ದಿನಾಂಕ ೦೮-೧೦-೨೦೧೯ ರಂದು  ಮಾಲೂರಿಗೆ ಬಂದಿದ್ದು, ಕೆಲಸ ಮುಗಿಸಿ ಮನೆಗೆ ಹಿಂತುರಿಗಿದ್ದು, ಸುಮಾರು ೦೪:೩೦ ಗಂಟೆ ಸಮಯದಲ್ಲಿ KA07 A9854  ದ್ವಿಚಕ್ರ ವಾಹನದಲ್ಲಿ ಇಬ್ಬರೂ  ಹೋಗುತ್ತಿರುವಾಗ ಮಾಲೂರು ತಾಲ್ಲೂಕು ಅಗರ- ನಿದರಮಂಗಲ ಗೇಟ್ ಬಳಿ ಅತಿವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದ KA08 Q7742 ವಾಹನವು  KA07 A9854   ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಅಪಘಾತ ಉಂಟುಮಾಡಿ ,ಅಪಘಾತದ ಪರಿಣಾಮ ರಿಜ್ವಾನ್ ಮತ್ತು, ಜಾಕೀರ್‌ ರ ದ್ವಿಚಕ್ರ ವಾಹನ  ವಾಹನ ಸಮೇತ ಕೆಳಗೆ ಬಿದ್ದಿದ್ದು,ರಿಜ್ವಾನ್ ಸ್ಥಳದಲ್ಲೇ ಮೃತಪಟ್ಟಿದ್ದು, ಜಾಕೀರ್‌ ಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ  ಸಾಗಿಸವ ಮಾರ್ಗ ಮದ್ಯೇ ಮೃತಪಟ್ಟಿರುತ್ತಾನೆ,

ಅಕ್ರಮ ಜೂಜು ರೂ ಸುಮಾರು ೮.೧೦೦ ,ಮತ್ತು ೬ ಜನ ಬಂದನ:

ಶ್ರೀನಿವಾಸಪುರ ಪೊಲಿಸ್ ಠಾಣೆಯಲ್ಲಿ ಅಕ್ರಮ ಜೂಜಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಶ್ರೀನಿವಾಸಪುರ ತಾಲ್ಲೂಕು ರೋಣೂರು ಹೋಬಳಿ, ದೊಡ್ಡಮಾಲದೊಡ್ಡಿ ಗ್ರಾಮದ ಬಳಿ ಘಟನೆ ಸಂಬವಿಸಿರುತ್ತದೆ,  ದಿನಾಂಕ ೦೯-೧೦-೨೦೧೯ ರಂದು ಖಚಿತ ಮಾಹಿತಿ ಮೇರೆಗೆ  ಸದರಿ ವಿಳಾಸದಲ್ಲಿ ಅಕ್ರಮವಾಗಿ ಜುಜಾಟ ಆಡಿತ್ತಿದ್ದು, ಮಾಹಿತಿ ನಿಜವಾಗಿದ್ದು, ಪಂಚರ ಸಮಕ್ಷಮದಲ್ಲಿ  ಶ್ರಿನಿವಾಸಪುರ ಠಾಣೆಯ ಸಿಬ್ಬಂದಿ ದಾಳಿ ಮಾಡಿ ಸುಮಾರು ರೂ ೮,೧೦೦ ಮತ್ತು ೬ ಜನರನ್ನು ವಶಕ್ಕೆ ಪಡೆದಿರುತ್ತಾರೆ,

ಆರೋಪಿಗಳ ವಿಳಾಸ :

೧) ಅಸ್ಲಂ , ಜಾಕೀರ್‌ ಹುಸೇನ್  ಮೊಹೊಲ್ಲಾ, ಶ್ರಿನಿವಾಸಪುರ

೨) ಶಹಿಉಲ್ಲಾ, ಜಾಕೀರ್‌ ಹುಸೇನ್  ಮೊಹೊಲ್ಲಾ, ಶ್ರಿನಿವಾಸಪುರ

೩) ಮುಬಾರಕ್‌, ಇಂದಿರಾ ನಗರ  ಶ್ರಿನಿವಾಸಪುರ ನಗರ

೪) ಜಾವೀದ್ ಪಾಷ, , ಜಾಕೀರ್‌ ಹುಸೇನ್  ಮೊಹೊಲ್ಲಾ, ಶ್ರಿನಿವಾಸಪುರ

೫) ಇಂದರ್‍ ಅಹಮದ್, ಜಾಕೀರ್‌ ಹುಸೇನ್  ಮೊಹೊಲ್ಲಾ, ಶ್ರಿನಿವಾಸಪುರ

೬) ನಜೀರ್‍ ಅಹಮದ್  , ಜಾಕೀರ್‌ ಹುಸೇನ್  ಮೊಹೊಲ್ಲಾ, ಶ್ರಿನಿವಾಸಪುರ

Leave a Reply

Your email address will not be published. Required fields are marked *