ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 10-10-2019

ದಿನಾಂಕ 09-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 10-10-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

 ಮಾರಣಾಂತಿಕ ರಸ್ತೆ ಅಪಘಾತ:

ಕೋಲಾರ ಟ್ರಾಪಿಕ್ ಪೊಲೀಸ್‌ ಠಾಣೆಯಲ್ಲಿ  ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,   ಬಂಗಾರಪೇಟೆ ಪ್ಲೈಓವರ್‌ ಹತ್ತಿರ,  ಚೆನ್ನೈ- ಬೆಂಗಳೂರು  NH75, ಕೋಲಾರ, ಎಂಬಲ್ಲಿ ಘಟನೆ ಸಂಬವಿಸಿರುತ್ತದೆ,  ಕೋಲಾರ ತಾಲ್ಲೂಕು  ಶಾಪುರ್‌ ಗ್ರಾಮದ ನಿವಾಸಿಯಾದ  ಶಂಕರಪ್ಪ ಎಂಬುವರು ದಿನಾಂಕ ೦೯-೧೦-೨೦೧೯ ರಂದು   ಬಂಗಾರಪೇಟೆ ಪ್ಲೈಓವರ್‌ ಹತ್ತಿರ,  ಚೆನ್ನೈ- ಬೆಂಗಳೂರು  NH75 ಬಳಿ ತನ್ನ ಬಾಬತ್ತು ಕೆಎ೦೭ ಎಸ್‌೭೬೦೮, ದ್ವಿಚಕ್ರ ವಾಹನದಲ್ಲಿ  ಹೋಗುತ್ತಿರುವಾಗ  ಯಾವುದೋ ಅಪರಿಚಿತ ವಾಹನ ಡಿಕ್ಕಿ ಹೊಡೆಸಿ ಅಪಘಾತ ಉಂಟುಮಾಡಿ ವಾಹನ ನಿಲ್ಲಿಸದೇ ಹೊರಟಿದ್ದು, ,ಅಪಘಾತದಿಂದ  ಶಂಕರಪ್ಪ ವಾಹನ ಸಮೇತ ಕೆಳಗೆ ಬಿದ್ದು, ತೀವ್ರ ಗಾಯಳಾಗಿ, ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಗೆ  ಕೊಂಡೊಯುವ ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆ,

ಸಾರ್ವಜನಿಕವಾಗಿ ಮಧ್ಯ ಸೇವನೆ  ಇಬ್ಬರ ಬಂದನ:

ವೇಮಗಲ್  ಪೊಲೀಸ್ ಠಾಣೆಯಲ್ಲಿ ಸಾರ್ವಜನಿವಾಗಿ  ಮಧ್ಯಸೇವನೆ ಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು ರಾಜಕಲ್ಲಹಳ್ಳಿ ಎಂಬಲ್ಲಿ ಘಟನೆ ಸಂಬವಿಸಿರುತ್ತದೆ,  ದಿನಾಂಕ  ೦೯-೧೦-೨೦೧೯ ರಂದು  PSI  ಕೃಷ್ಣಮೂರ್ತಿ ರವರು ಗಸ್ತು ಕರ್ತವ್ಯದ ಮೇಲೆ  ಸದರಿ ವಿಳಾಸದಲ್ಲಿ  ಕರ್ತವ್ಯ ನಿರ್ವಹಿಸುತ್ತಿರುವಾಗ  ಸದರಿ ಸ್ಥಳದಲ್ಲಿ  ಅದೇ ಗ್ರಾಮದ ನಿವಾಸಿಗಳಾದ  ಚಂದ್ರಶೇಖರ್‌ ಬಿನ್ ಬೀರಪ್ಪ ಮತ್ತು ಪೆರುಮಾಳ್ ಬಿನ್ ಮುನಿಯಪ್ಪ ರವರು ಸುಮಾರು ೧೦:೦೦ ಗಂಟೆ ಸಮಯದಲ್ಲಿ  ಸಾರ್ವಜನಿಕ ಸ್ಥಳದಲ್ಲಿ , ಸಾರ್ವಜನಿಕರಿಗೆ ತೊಂದರೆ ಯಾಗುವಂತೆ ಮದ್ಯಸೇವನೆ ಮಾಡುತ್ತಿದ್ದು, ಸದರಿ ಆಸಾಮಿಗಳನ್ನು ಪಂಚರ ಸಮಕ್ಷಮದಲ್ಲಿ ಠಾಣೆಯ ವಶಕ್ಕೆ ಪಡೆದಿರುತ್ತಾರೆ,

ಕಳವು:

ಕೋಲಾರ ನಗರ ಪೊಲೀಸ್‌ ಠಾಣೆಯಲ್ಲಿ  ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,   SVR School,  ಹಾರೋಹಳ್ಳಿ , ಕೋಲಾರ ದಲ್ಲಿ ವಾಸವಾಗಿದ್ದ , ಸುದ್ದಪಲ್ಲಿ ಗ್ರಾಮ, ಚೆಬ್ರೋಲ್ ಮಂಡಲಂ, ಗುಂಟೂರು, ಆಂದ್ರಪ್ರದೇಶ್‌ ದ ನಿವಾಸಿಯಾದ ಮುಸಲ ಆಂಜಿ ಬಿನ್ ಕೃಷ್ಣಯ್ಯ ಎಂಬುವರು ಕೋಲಾರದ ಮೇಲ್ಕಂಡ ವಿಳಾಸದಲ್ಲಿ ವಾಸವಾಗಿದ್ದು  ಒಂದು ವರ್ಷದ ಹಿಂದೆ ಆಂದ್ರಪ್ರದೇಶದ ,ಗುಂಟೂರಿನ ಲಿಂಗಯ್ಯಪಾಳ್ಯಂ ನ ನಿವಾಸಿಯಾದ  ಆವುಲ ಬ್ರಮ್ಹಯ್ಯ ರವರ ಬಳಿ  AP 07 DF9613 ENNG NO; 2955110 ಸಂಖ್ಯೆಯ ಕಾರನ್ನು ಖರಿದಿಸಿದ್ದು ದಿನಾಂಕ ೧೯-೦೯-೨೦೧೯ ರಂದು ರಾತ್ರಿ ೧೧:೦೦ ಗಂಟೆಗೆ ಮನೆಯ ಮುಂದೆ ನಿಲ್ಲಿಸಿ  ಮರುದಿನ ನೊಡಲಾಗಿ ಯಾರೊ ಅಪರಿಚಿತರು ಕಾರನ್ನು ಕಳವು ಮಾಡಿ ಪರಾರಿ ಯಾಗಿರುತ್ತಾರೆ,

Leave a Reply

Your email address will not be published. Required fields are marked *