ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ : 11-10-2019

ದಿನಾಂಕ 10-09-2019 ಸಂಜೆ 04:೦೦ ಗಂಟೆಯಿಂದ ದಿನಾಂಕ 11-10-2019 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ವ್ಯಕ್ತಿ ಕಾಣೆಯಾಗಿರುವ ಬಗ್ಗೆ :
ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ತಾಲ್ಲುಕು ಗಾಜಲುದಿನ್ನೆ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ನಿವಾಸಿಗಳಾದ ದಿವ್ಯ ಮತ್ತು ರ್ಸೂರ್ಯಪ್ರಕಾಶ್ ದಂಪತಿಗಳು , ದುಡಿಮೆ ಮಾಡಲು ಬೆಂಗಳೂರಿನ ಮಾರತ್‌ಹಳ್ಳಿಯ ಬಳಿ ಮುನ್ನೆಕೊಳಾಳ ದಲ್ಲಿ ವಾಸವಿದ್ದು, ಅಲ್ಲಿ ಸೂರ್ಯಪ್ರಕಾಶ್‌ ಜೀವನಕ್ಕಾಗಿ ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಅಲ್ಲಿ ಬೇರೆಯವರ ಬಳಿ ಸಾಲ ಮಾಡಿ ಅಲ್ಲಿಂದ ತನ್ನ ಸ್ವಗ್ರಾಮಕ್ಕೆ ಹಿಂತಿರುಗಿದ್ದು, ದಿನಾಂಕ ೩-೧೦-೨೦೧೯ ರಂದು ರಾತ್ರಿ ೧೦:೦೦ಗಂಟೆ ಸಮಯದಲ್ಲಿ ಸಾಲಗಾರರು ಮನೆಯ ಬಳಿ ಬಂದು ಹಣ ಕೇಳಿದ ವಿಷಯ ತಿಳಿದ ಸೂರ್ಯಪ್ರಾಕಾಶ್‌ ಮನೆಯ ಬಾಗಿಲು ಹಾಕಿಕೊಂಡು ಹೋದವರು ವಾಪ್ಪಸ್ಸು ಆಗದೇ ಕಾಣೆಯಾಗಿರುತ್ತಾರೆ.

ಅಕ್ರಮ ಮಟ್ಕಾ ಜೂಜು ರೂ ಸುಮಾರು 2050 , ಮತ್ತು ಮೂರು ಜನರ ಬಂದನ:
ಗಲ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಜೂಜಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ, ಕೋಲಾರ ನಗರದ ಚಿಕ್ಕಬಳ್ಳಪುರ ರಸ್ತೆ, KGNಹೋಟೆಲ್‌ ಬಳಿ ಘಟನೆ ಸಂಬವಿಸಿರುತ್ತದೆ, ದಿನಾಂಕ ೧೦-೧೦-೨೦೧೯ ರಂದು ಸದರಿ ಜಾಗದಲ್ಲಿ ಅಕ್ರಮ ಜೂಜಿನ ಖಚಿತ ಮಾಹಿತಿ ಮೇರೆಗೆ ಪೋಲೀಸ್‌ ಸಿಬ್ಬಂದಿ ನೋಡಲಾಗಿ ಮಾಹಿತಿ ನಿಜವಾಗಿದ್ದು,ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಸುಮಾರು ರು ೨೦೫೦ ಮತ್ತು ಮೂರು ಜನರನ್ನು ವಶಕ್ಕೆ ಪಡೆದಿರುತ್ತಾರೆ,
ಬಂದಿತ ಆರೋಪಿಗಳ ವಿವರ ;
೧) ಆಸಿಪ್ ಬಿನ್ ಸಯ್ಯದ್ ಅಹಮದ್ ಖಾನ್ , ರೆಹಮತ್ತುಲ್ಲಾ ನಗರ, ಕೋಲಾರ,
೨) ಲಿಯಾಜ್ ಬಿನ್ ಲೇಟ್ ರಸೂಲ್ಸಾಬ್ , ಜುನೇದಿಯಾಮೊಸಕಾ ರಸ್ತೆ , ಕೋಲಾರ
೩) ಅಕ್ಮಲ್‌ ಬಿನ್ ಅಬ್ದುಲ್‌ ರಹೀಮ್‌ ಅಜಾದ್‌ ನಗರ ಕೋಲಾರ,

Leave a Reply

Your email address will not be published. Required fields are marked *