ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೨೬-೦೬-೨೦೧೯

ದಿನಾಂಕ ೨೫೦೬-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೬-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಮಾರಣಾಂತಿಕ ರಸ್ತೆ ಅಪಘಾತ:

ಶ್ರೀನಿವಾಸಪುರ ತಾಲ್ಲೂಕು ರಾಯ್ಪಾಡು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು ಕನ್ನಂಕುಂಟೆ ಕ್ರಾಸ್ ಬಿ ,ಸಿ ರಸ್ತೆ ಬಳಿ ಘಟನೆ ಸಂಬವಿಸಿರುತ್ತದೆ. ದಿನಾಂಕ ೨೨-೦೬-೨೦೧೯ ರಂದು ರಾಜಶೇಖರ್‍ ಮತ್ತು ಅವರ ಪತ್ನಿ ರಮಾದೇವಿ ತಮ್ಮ ಮಕ್ಕಳೊಡನೆ ರಮಾದೇವಿ ರವರ ತವರೂರಾದ ಶ್ರೀನಿವಾಸಪುರ ತಾಲ್ಲೂಕು ಚೀಟಂಪಲ್ಲಿ ಗ್ರಾಮಕ್ಕೆ ಬಂದಿದ್ದು ದಿನಾಂಕ ೨೫-೦೬-೨೦೧೯ ರಂದು ಬೆಳಿಗ್ಗೆ೧೧:೦೦ಗಂಟೆ ಸಮಯದಲ್ಲಿ ರಾಜಶೇಖರ್‍ ತಮ್ಮ ಬಾಬತ್ತು ದ್ವಿಚಕ್ರವಾಹನ ನೋಂದಣಿ ಸಂಖ್ಯೆ ಎಪಿ ೦೩ ಎ ಎಲ್  ೯೭೬೩ ಯಮಹ  ದ್ವಿಚಕ್ರವಾಹನದಲ್ಲಿ ತಮ್ಮ ಗ್ರಾಮಕ್ಕೆ ಹೋಗಿದ್ದು ಅದೇ ರಾತ್ರಿ ೯:೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲ್ಲೂಕು ಚೀಟಂಪಲ್ಲಿ ಗ್ರಾಮಕ್ಕೆ ಬರುತ್ತಿರುವಾಗ ಬೆಂಗಳೂರು –ಮದನಪಲ್ಲಿ ರಸ್ತೆಯಲ್ಲಿ ಕನ್ನಂಕುಂಟೆ ಕ್ರಾಸ್ ಬಿ ,ಸಿ ರಸ್ತೆ ಬಳಿ ಯಾವುದೊ ಅಪರಿಚಿತ ವಾಹನ ಅತಿವೇಗ ಮತ್ತು ಅಜಾಗರುಕತೆಯಿಂದ ವಾಹನ ಚಾಲಿಸಿ ನೋಂದಣಿ ಸಂಖ್ಯೆ ಎಪಿ ೦೩ ಎ ಎಲ್  ೯೭೬೩ ಯಮಹ  ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಾಜಶೇಖರ್‍ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ:

ಮಾಲೂರು ತಾಲ್ಲೂಕು ಮಾಸ್ತಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲ್ಲೂಕು ಟೇಕಲ್ ಹೋಬಳಿ ವೀರಕಪುತ್ರ ಗ್ರಾಮದ ಬಳಿ ಘಟನೆ ಸಂಬವಿಸಿರುತ್ತದೆ.ಮಂಜುನಾಥ್ ಮತ್ತು ಹುಲಿಗಮ್ಮ ಗಂಡ ಹೆಂಡತಿಯಾಗಿದ್ದು, ಕೂಲಿ ಕೆಲಸಕ್ಕಾಗಿ ಕೊಪ್ಪಳ( ಜಿ) ಗಂಗಾವತಿ (ತಾ) ಯಡ್ಡಹಳ್ಲಿ ಗ್ರಾಮ ದಿಂದ ಮಾಲೂರು ತಾಲ್ಲೂಕು ಟೇಕಲ್ ಹೋಬಳಿ ವೀರಕಪುತ್ರ ಗ್ರಾಮಕ್ಕೆ  ಬಂದಿದ್ದು, ದಿನಾಂಕ ೨೪-೦೬-೨೦೧೯ ರಂದು ರಾತ್ರಿ  ೭:೩೦ ಗಂಟೆ ಸಮಯದಲ್ಲಿ ತಮ್ಮ ಬಾಬತ್ತು ದ್ವಿಚಕ್ರವಾಹನ ಎಚ್ ಎಪ಼್ ಡಿಲೆಕ್ಸ್ ಕೆ ಎ ೩೭  ಇ ಇ ೭೨೯೪ ತಮ್ಮ ಬಾಬತ್ತು ದ್ವಿಚಕ್ರವಾಹನದಲ್ಲಿ ವಾಹನ ಅತಿವೇಗ ಮತ್ತು ಅಜಾಗರುಕತೆಯಿಂದ ವಾಹನ ಚಾಲಿಸಿ ಮಾಲೂರು ತಾಲ್ಲೂಕು ಟೇಕಲ್ ಹೋಬಳಿ ವೀರಕಪುತ್ರ ಗ್ರಾಮದ ಬಳಿ ಆಯತಪ್ಪಿ ಹಳ್ಳಕ್ಕೆ ಬಿದ್ದು ತಲೆಗೆ ರಕ್ತಗಾಯಾಳಾಗಿದ್ದು ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆ ಗೆ ದಾಖಲಿಸಿದ್ದು ಚಿಕಿತ್ಸೆ ಪಲಕಾರಿಯಾಗದೆ  ದಿನಾಂಕ ೨೫-೦೬-೨೦೧೯ ರಂದು ಬೆಳಿಗ್ಗೆ ೭:೩೫  ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *