ದಿನಾಂಕ ೨೬-೦೬-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೭-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.
ಕಳವು:
ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ಉರ್ದು ಹಿರಿಯ ಪ್ರಾಥಮಿಕ ಶಾಲೆ (ಗರ್ಲ್ಸ)ಯಲ್ಲಿ ಘಟನೆ ಸಂಬವಿಸಿರುತ್ತದೆ. ದಿನಾಂಕ ೨೫-೦೬-೨೦೧೯ ರಂದು ಎಂದಿನಂತೆ ೪:೩೦ ಗಂಟೆ ಸಮಯಕ್ಕೆ ಶಾಲೆ ಕರ್ತವ್ಯ ಮುಗಿಸಿ ಶಾಲೆಯನ್ನು ಬೀಗ ಹಾಕಿಕೊಂಡು ಹೋಗಿದ್ದು ,ಮರುದಿನ ಬೆಳಿಗ್ಗೆ ಸುಮಾರು ೯:೦೦ ಗಂಟೆ ಸಮಯದಲ್ಲಿ ಅಡುಗೆ ಕೋಣೆ ವೀಷ್ಶಿಸಿದಾಗ ಯಾರೊ ಅಪರಿಚಿತರು ಅಡುಗೆ ಕೋಣೆಯ ಬಾಗಿಲು ಮತ್ತು ಬೀಗ ಮುರಿದು ಅದರಲ್ಲಿದ್ದ ೩ ಪಾತ್ರೆ,(ಅಲ್ಯೂಮಿನಿಯಂ) ೧೦ ಕೆ,ಜಿ, (ಅಕ್ಕಿ),ಮತ್ತು ಪ್ಲೇಟ್ ,ಕಟ್ಲರ್,ಗಳನ್ನು ಕಳವು ಮಾಡಿರುತ್ತಾರೆ, ಒಟ್ಟು ಪಾತ್ರೆಗಳ ಬೆಲೆ ಸುಮಾರು ೨೦೦೦ ರೂಗಳಾಗಿರುತ್ತವೆ.
ಪ್ರಾಣ ಬೆದರಿಕೆ :
ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಾಣ ಬೆದರಿಕೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲ್ಲೂಕು ಸುರಕುಂಟೆ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ ದಿನಾಂಕ ೨೭-೦೬-೨೦೧೯ ರಂದು ಮುಳಬಾಗಿಲು ತಾಲ್ಲೂಕು ಸುರಕುಂಟೆ ಗ್ರಾಮದ ವಾಸಿಯಾದ ರತ್ನಮ್ಮ (೫೮) ಇವರನ್ನು ಅದೇ ಗ್ರಾಮದ ವಾಸಿಯಾದ ಸುಬ್ರಮಣಿ ಎಂಬುವರು ಯಾವುದೋ ದ್ವೇಷ ಮತ್ತು ದುರುದ್ದೇಶ ಸುಲುವಾಗಿ ವಿನಾಕಾರಣ ಗಲಾಟೆ ಮಾಡಿ,ಹೊಡೆದು,ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.
ಮಹಿಳೆ ಕಾಣೆಯಾಗಿರುವ ಬಗ್ಗೆ;
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ವಕ್ಕಲೇರಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ. ದಿನಾಂಕ ೨೪-೦೬-೨೦೧೯ ರಂದು ಕೋಲಾರ ತಾಲ್ಲೂಕು ವಕ್ಕಲೇರಿ ಗ್ರಾಮದ ವಾಸಿ ಯಾದ ನಾಗರಾಜ ಬಿನ್ ಲೆಟ್ ಲಕ್ಷ್ಮಯ್ಯ ರವರ ಮಗಳು ಲಾವಣ್ಯ (೨೦) ಮನೆಯಿಂದ ಹೊರಟವಳು ಹಿಂತಿರುಗದೆ ಕಾಣೆಯಾಗಿರುತ್ತಾರೆ.
ಕಾಣೆಯಾಗಿರುವ ಮಹಿಳೆ ವಿವರ:
ಬಣ್ಣ: ಗೋದಿ ಬಣ್ಣ, ಸಾದಾರಣ ಮೈಕಟ್ಟು,ಎಡಗಾಲು ಸ್ವಲ್ಪ ಅಂಗ ವೈಕಲ್ಯ . ಬಿಳಿ ಚುಡಿದಾರ್ .
ಮಹಿಳೆ ಕಾಣೆಯಾಗಿರುವ ಬಗ್ಗೆ;
ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ಮಟ್ನಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ. ಕೋಲಾರ ತಾಲ್ಲೂಕು ಮಟ್ನಹಳ್ಳಿ ಗ್ರಾಮದ ವಾಸಿಯಾದ ಮುನಿಹನುಮಂತಪ್ಪ (೫೪) ರವರ ಮಗಳು ಶ್ವೇತ (೧೯) ದಿನಾಂಕ ೦೧-೦೫-೨೦೧೯ ರಂದು ಮನೆಯಿಂದ ಹೊರಗಡೆ ಹೋದವರು ಮನೆಗೆ ವಾಪಸ್ಸಾಗದೆ ಎಲ್ಲಾ ಪರಿಚಿತ ಹಾಗೂ ಸಂಬಂದಿಕರಲ್ಲಿ ಹುಡುಕಿದರು ಸಿಗದೆ ಕಾಣೆಯಾಗಿರುತ್ತಾರೆ.
ಕಾಣೆಯಾಗಿರುವ ಮಹಿಳೆ ವಿವರ:
ಎತ್ತರ; ೫ ಅಡ
ಬಣ್ಣ: ಗೋದಿ ಬಣ್ಣ, ಸಾದಾರಣ ಮೈಕಟ್ಟು,ಗುಂಡು ಮುಖ.ಕೆಂಪು ಬಣ್ಣದ ಚುಡಿದಾರ್ .