ದಿನದ ಅಪರಾಧಗಳ ಪಕ್ಷಿನೋಟ ದಿನಾಂಕ ೧೭-೦೬-೨೦೧೯

ದಿನಾಂಕ ೧೬-೦೬-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೧೭-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಮಾರಣಾಂತಿಕ ರಸ್ತೆ ಅಪಘಾತ:

ಅತಿವೇಗ ಮತ್ತು ಅಜಾಗರೂಕತೆ ಚಾಲನೆಯಿಂದ ದ್ವಿಚಕ್ರವಾಹನ ಆಯ ತಪ್ಪಿ ಕೆಳಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಗೌನಿಪಲ್ಲಿ ಗ್ರಾಮದ ಕೋಡಿಪಲ್ಲಿ ಕ್ರಾಸ್ ಬಳಿ ಸಂಭವಿಸಿರುತ್ತದೆ. ಶ್ರೀನಿವಾಸಪುರ ತಾಲ್ಲುಕು ಗೌನಿಪಲ್ಲಿ ಗ್ರಾಮದ ವಾಸಿ ಹರಿಕೃಷ್ಣ (೩೨) ಎಂಬುವರು ಮೃತಪಟ್ಟವರು. ದಿನಾಂಕ ೧೪-೦೬-೨೦೧೯ ರಂದು ೧೯:೩೦ ಗಂಟೆ ಸಮಯದಲ್ಲಿ ಹರಿಕೃಷ್ಣ ರವರು ತಮ್ಮ ದ್ವಿಚಕ್ರವಾಹನ ಕೆಎ-೦೭-ಇಬಿ-೯೧೨೦ ರಲ್ಲಿ ಗೌನಿಪಲ್ಲಿ ಗ್ರಾಮದಿಂದ ತಾಡಿಗೋಳ್ ಕ್ರಾಸ್ ಗೆ ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿರುತ್ತದೆ. ಅಪಘಾತದಿಂದ ಗಾಯಗೊಂಡ ಹರಿಕೃಷ್ಣರವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

 

ಟ್ರಾಕ್ಟರ್ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ಟ್ರಾಕ್ಟರಿನಲ್ಲಿ ಕುಳಿತಿದ್ದ ವ್ಯಕ್ತಿ ಕೆಳಗೆ ಬಿದ್ದು ಟ್ರಾಕ್ಟರಿನ ಚಕ್ರ ಹರಿದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಮುಳಬಾಗಿಲು-ಕೆ.ಜಿ.ಎಫ್ ರಸ್ತೆಯ ಅತ್ತಿಕುಂಟೆ ಗೇಟ್ ಬಳಿ ಸಂಭಿವಿಸಿರುತ್ತದೆ. ಆಂದ್ರಪ್ರದೇಶ ಚಿತ್ತೂರು ಜಿಲ್ಲೆ ಮೊಗಿಲಿಪಡರೇಪು ಗ್ರಾಮದ ವಾಸಿ ದಾಸಪ್ಪ ಬಿನ್ ಸುಬ್ಬಣ್ಣ (೪೮) ಎಂಬುವರು ಮೃತಪಟ್ಟಿವರು. ದಾಸಪ್ಪರವರು ಮಾವಿನ ಕಾಯಿ ಫಸಲು ತೆಗೆಯುವ ಕೆಲಸಕ್ಕಾಗಿ ಮುಳಬಾಗಿಲಿಗೆ ಬಂದಿದ್ದರು. ದಿನಾಂಕ ೧೬-೦೬-೨೦೧೯ ರಂದು ೧೮:೩೦ ಗಂಟೆಯ ಸಮಯದಲ್ಲಿ ದಾಸಪ್ಪ ರವರು ಇನ್ನಿತರರೊಡನೆ ಟ್ರಾಕ್ಟರ್ ಸಂಖ್ಯೆ ಎಪಿ-೨೪-ಡಬ್ಲ್ಯೂ-೧೭೯೦ ರಲ್ಲಿ ಮೂಲಬಾಗಿಲುನಿಂದ ಅಗರ ಗ್ರಾಮಕ್ಕೆ ಹೋಗುತ್ತಿದ್ದ ಮಾರ್ಗ ಮದ್ಯೆ ಈ ಘಟನೆ ಸಂಭವಿಸಿರುತ್ತದೆ. ಅಪಘಾತದಿಂದ ತೀವ್ರ ಗಾಯಗಳಿಗೆ ಈಡಾದ ದಾಸಪ್ಪ ರವರನ್ನು ಚಿಕಿತ್ಸೆಗಾಗಿ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *