ದಿನದ ಅಪರಾಧಗಳ ಪಕ್ಷಿನೋಟ: ೦೫ ನೇ ಜುಲೈ ೧೦:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ:

ನಿಂತಿದ್ದ ೪೦೭ ಟೆಂಪೋ ವಾಹನಕ್ಕೆ ಬೊಲೇರೋ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೊಲೆರೋ ವಾಹನದಲ್ಲಿದ್ದ ಇಬ್ಬರು ಮೃತ ಪಟ್ಟ ಘಟನೆಗೆ ಸಂಬಂಧಿಸಿದಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ದೊಡ್ಡಹಸಾಳ ಗ್ರಾಮದ ವಾಸಿ ಸೋಮಶೇಖರ್‍ ಹಾಗೂ ವಿಳಾಸ ತಿಳಿಯಬೇಕಾದ ಮತ್ತೊಬ್ಬ ಶರಣ್ ಎಂಬುವರು ಮೃತಪಟ್ಟವರು. ಇವರಿಬ್ಬರೂ ದಿನಾಂಕ ೦೪-೦೭-೨೦೧೭ ರಂದು ೦೩:೩೦ ಗಂಟೆ ಸಮಯದಲ್ಲಿ ಬೊಲೇರೋ ಗೂಡ್ಸ್ ವಾಹನ ಸಂಖ್ಯೆ ಕೆಎ-೩೨-ಬಿ-೦೪೪೦ ರಲ್ಲಿ ಕೋಳಿಗಳನ್ನು ತುಂಬಿಕೊಂಡು ಬೆಂಗಳೂರಿಗೆ ಹೋಗುವ ಸಲುವಾಗಿ ಎನ್.ಹೆಚ್ ೭೫ ರಸ್ತೆಯ ಕೆಂದಟ್ಟಿ ಗೇಟ್ ಸಮೀಪ ಹೋಗುತ್ತಿದ್ದರು. ಆ ಸಮಯದಲ್ಲಿ ಟೆಂಪೋ ಸಂಖ್ಯೆ ಎಪಿ-೦೩-ಟಿಇ-೨೫೬೮ ವಾಹನದ ಚಾಲಕ ಅಜಾಗರೂಕತೆಯಿಂದ ತನ್ನ ವಾಹನವನ್ನು ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೇ ರಸ್ತೆಯಲ್ಲಿ ನಿಲ್ಲಿಸಿದ್ದನು. ನಿಲ್ಲಿಸಿದ್ದ ಟೆಂಪೋಗೇ ಹಿಂಬದಿಯಿಂದ ಬಂದ ಬೊಲೇರೋ ವಾಹನದ ಚಾಲಕ ನಾಗೇಶ್ ಎಂಬುವನು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಶರಣ್ ಹಾಗೂ ಸೋಮಶೇಖರ್‍ ತೀವ್ರವಾದ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಚಾಲಕ ನಾಗೇಶ್ ಗೂ ಸಹಾ ತೀವ್ರವಾದ ಗಾಯಗಳಾಗಿದ್ದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುತ್ತಾರೆ.

ಅಪಹರಣ:

ಅಪಹರಣಕ್ಕೆ ಸಂಬಂಧಿಸಿದಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಅಣ್ಣೆಹಳ್ಳಿ ಗ್ರಾಮದ ೧೭ ವರ್ಷದ ಯುವತಿ ಅಪಹರಣಕ್ಕೀಡಾಗಿರುತ್ತಾಳೆ. ದಿನಾಂಕ ೧೯-೦೬-೨೦೧೭ ರಂದು ೦೮:೦೦ ಗಂಟೆಗೆ ಕೃತ್ಯ ಸಂಭವಿಸಿದ್ದು ಚಿಂತಾಮಣಿ ತಾಲೂಕು ಹುಣಸೇಪುರ ಗ್ರಾಮದ ವಾಸಿ ನವೀನ್ ಎಂಬುವನು ಅಪಹರಣ ಮಾಡಿರುವುದಾಗಿ ಅಪಹರಣಕ್ಕೀಡಾದ ಯುವತಿಯ ತಂದೆ ತನ್ನ ದೂರಿನಲ್ಲಿ ತಿಳಿಸಿರುತ್ತಾರೆ.

ಮಹಿಳೆ ಕಾಣೆಯಾಗಿರುವ ಬಗ್ಗೆ:

ಮಹಿಳೆ ಕಾಣೆಯಾಗಿರುವ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಈಕಂಬಳ್ಳಿ ಗ್ರಾಮದ ವಾಸಿ ವಿದ್ಯಾಶ್ರೀ (೨೧) ಎಂಬುವರು ತನ್ನ ೧೦ ತಿಂಗಳ ಮಗುವಿನೊಂದಿಗೆ ಕಾಣೆಯಾಗಿರುತ್ತಾರೆ. ದಿನಾಂಕ ೦೩-೦೭-೨೦೧೭ ರಂದು ೧೪:೦೦ ಗಂಟೆಗೆ ತನ್ನ ಮನಯಿಂದ ಹೊರಟ ವಿದ್ಯಾಶ್ರೀ ರವರು ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ.

ಕಾಣೆಯಾದ ಮಹಿಳೆ ವಿದ್ಯಾಶ್ರಿ

Leave a Reply

Your email address will not be published. Required fields are marked *