ದಿನದ ಅಪರಾಧಗಳ ಪಕ್ಷಿನೋಟ: ೦೫ ನೇ ಜುಲೈ, ೧೮:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ:

ಕೋಲಾರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೊಪ್ಪಳ ಜಿಲ್ಲೆಯ ವಾಸಿಗಳಾದ ಮಾದವಿ, ಸಿಂಧೂರ ಮತ್ತು ಅನುಷಾ ಎಂಬುವರು ಎಪಿ-೩೭-ಸಿಎ-೪೮೮ ಸಂಖ್ಯೆಯ ಕಾರಿನಲ್ಲಿ ತಿರುಪತಿಗೆ ಹೋಗುವ ಸಲುವಾಗಿ ದಿನಾಂಕ  ೦೫-೦೭-೨೦೧೭ ರಂದು ೦೬:೧೫ ಗಂಟೆ ಸಮಯದಲ್ಲಿ  ಕೋಲಾರ ನಗರ ಹೊರವಲಯದ ಟಮಕ ಬಳಿ ಎನ್.ಹೆಚ್ ೭೫ ರಸ್ತೆಯಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಇವರ ಮುಂಭಾಗ ಹೋಗುತ್ತಿದ್ದ ಕ್ಯಾಂಟ್ರೋ ವಾಹನ ಸಂಖ್ಯೆ ಕೆಎ-೫೧-ಸಿ-೭೩೯ ರ ಚಾಲಕ ವಜಾಗರೂತೆಯಿಂದ ಇದ್ದಕ್ಕಿದ್ದಂತೆ ತನ್ನ ವಾಹನವನ್ನು ನಿಲ್ಲಿಸಿರುತ್ತಾನೆ. ಇದರ ಪರಿಣಾಮ ಹಿಂದೆ ಬರುತ್ತಿದ್ದ ಕಾರ್‍ ಕ್ಯಾಂಟ್ರೋ ವಾಹನಕ್ಕೆ ಡಿಕ್ಕಿ ಹೊಡೆದಿರುತ್ತದೆ. ಇದರ ಪರಿಣಾಮ ಕಾರಿನಲ್ಲಿದ್ದವರಿಗೆ ತೀವ್ರವಾದ ಗಾಯಗಳಾಗಿದ್ದು ಆ ಪೈಕಿ ಮಾದವಿ ರವರು ಕೊಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಸೀತಹಳ್ಳಿ ಗ್ರಾಮದ ಆಫ್ಜಲ್ ಖಾನ್ ಫಾರ್ಮ್ ಲ್ಯಾಂಡಿನ ಬಳಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೫-೦೭-೨೦೧೭ ರಂದು ೦೯:೦೦ ಗಂಟೆ ಸಮಯದಲ್ಲಿ ಮೇಲ್ಕಂಡ ಜಮೀನಿನಲ್ಲಿ ಮಾಲೂರು ದೊಂಬರಪಾಳ್ಯದ ವಾಸಿ ವೆಂಕಟರಮಣಪ್ಪ (೪೦) ಎಂಬುವರು ಟ್ರಾಕ್ಟರಿನಲ್ಲಿ ಉಳುಮೆ ಮಾಡುತ್ತಿದ್ದರು. ಆ ಸಮಯದಲ್ಲಿ ಇವರು ಟ್ರಾಕ್ಟರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದು ಟ್ರಾಕ್ಟರ್‍ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *