ದಿನದ ಅಪರಾಧಗಳ ಪಕ್ಷಿನೋಟ: ೦೬ ನೇ ಜುಲೈ, ೧೮:೦೦ ಗಂಟೆ

ಅಪ್ರಾಪ್ರ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ:

ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಗೆ ಸಂಬಂಧಿಸಿದಂತೆ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ನಗರ ರಹಮತ್ ನಗರದ ನಾಗಲಬಂಡೆ ಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೪-೦೭-೨೦೧೭ ರಂದು ೧೯:೩೦ ಗಂಟೆ ಸಮಯದಲ್ಲಿ ೧೪ ವರ್ಷದ ಬಾಲಕಿಯನ್ನು ನಂಬಿಸಿ ಅವಳ ಮನೆಯಿಂದ ಕರೆದೊಯ್ದ ಮುಳಬಾಘಿಲು ನಗರದ ವಾಸಿಗಳಾದ ಸಲ್ಮಾನ್ ಪಾಷ, ಯಾರಬ್ ಮತ್ತು ನವಾಜ್ ಎಂಬುವರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುತ್ತಾರೆ.

ಅಪಹರಣ:

ಅಪ್ರಾಪ್ತ ವಯಸ್ಸಿನ ಬಾಲಕ ಅಪಹಣವಾಗಿರುವ ಬಗ್ಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ಮುನೇಶ್ವರ ನಗರದ ವಾಸಿ ಕೇಶವ.ಟಿ (೧೭) ಎಂಬ ಹುಡುಗ ಅಪಹರಣಕ್ಕೀಡಾಗಿರುತ್ತಾನೆ. ದಿನಾಂಕ ೦೩-೦೭-೨೦೧೭ ರಂದು ೦೯:೦೦ ಗಂಟೆಗೆ ಕೃತ್ಯ ಸಂಭವಿಸಿದ್ದು ಬಾಲಕನ ತಂದೆ ಲಕ್ಷ್ಮಣ. ಎಂ ಎಂಬುವರು ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

ಹಾಸ್ಟಲಿನಲ್ಲಿದ್ದ ಬಾಲಕ ಅಪಹರಣವಾಗಿರುವ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು ಬೈರವೇಶ್ವರ ವಿದ್ಯಾನಿಕೇತನದ ಹಾಸ್ಟಲಿನಲ್ಲಿ ಕೃತ್ಯ ಸಂಭವಿಸಿರುತ್ತದೆ. ಹಾಸ್ಟಲಿನಲ್ಲಿ ವಾಸವಿದ್ದು ಏಳನೇ ತರಗತಿ ಓದುತ್ತಿರುವ ಬಂಗಾರಪೇಟೆ ವಿಜಯನಗರದ ವಾಸಿ ತೇಜಸ್ ಎಂಬುವನು ಅಪಹರಣಕ್ಕೀಡಾಗಿರುತ್ತಾನೆ. ದಿನಾಂಕ ೦೪-೦೭-೨೦೧೭ ರಂದು ೦೮:೦೦ ಗಂಟೆಗೆ ಕೃತ್ಯ ಸಂಭವಿಸಿದ್ದು ಈ ಬಗ್ಗೆ ಹಾಸ್ಟಲಿನ ವಾರ್ಡನ್ ಪ್ರಶಾಂತ್ ಎನ್ ದೇಶಬಂಡಾರಿ ರವರು ದೂರು ನೀಡಿರುತ್ತಾರೆ.

Leave a Reply

Your email address will not be published. Required fields are marked *