ದಿನದ ಅಪರಾಧಗಳ ಪಕ್ಷಿನೋಟ: ೦೭ ನೇ ಜುಲೈ, ೧೮:೦೦ ಗಂಟೆ

ಮನೆಗಳ್ಳತನ:

ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೬-೦೭-೨೦೧೭ ರಂದು ಬೆಳಗ್ಗೆ ೧೦:೩೦ ಗಂಟೆ ಸಮಯದಲ್ಲಿ ಕೋಲಾರ ನಗರ ಚೌಡೆಶ್ವರಿ ನಗರದ ಚವಗಿಳಾದ ಜೀವಾನಂದರೆಡ್ಡಿ ರವರು ತಮ್ಮ ಮನೆಗೆ ಡೋರ್‍ ಲಾಕಿ ಹಾಕಿಕೊಂಡು ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಡೋರ್‍ ಲಾಕ್ ಮುರಿದು ಒಳ ಪ್ರವೇಶಿಸಿದ ಕಳ್ಳರು ಮನೆಯಲ್ಲಿದ್ದ ರೂ. ೫,೦೦,೦೦೦-೦ ಬೆಲೆ ಬಾಳುವ ಚಿನ್ನಾಭರಣಗಳನ್ನು ಹಾಗೂ ರೂ. ೫೫,೦೦೦-೦೦ ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ವರದಕ್ಷಿಣೆ ಸಾವು:

ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆಯೊಬ್ಬರು ನೇಣು ಹಾಕಿಕೊಂಡು ಮೃತಪಟ್ಟಿರುವ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲೂಕು ಸೀಪುರ ಗ್ರಾಮದ ವಾಸಿ ವಿಮಲ ಎಂಬ ಹೆಂಗಸು ಮೃತಪಟ್ಟವರು. ದಿನಾಂಕ ೧೮-೦೫-೨೦೧೭ ರಂದು ವಿಮಲಾರವರು ಕೋಲಾರ ತಾಲೂಕು ನಂದಬಳ್ಳಿ ಗ್ರಾಮದ ವಾಸಿ ಪ್ರಸನ್ನ ಕುಮಾರ್‍ ಎಂಬುವರನ್ನು ಪ್ರೀತಿಸಿ ವಿವಾಹವಾಗಿದ್ದರು. ವಿಮಲ ರವರು ದಿನಾಂಕ ೦೬-೦೭-೨೦೧೭ ರಂದು ೧೫:೩೦ ಗಂಟೆ ಸಮಯದಲ್ಲಿ ತಾನು ಕೆಲಸ ಮಾಡುತ್ತದ್ದ ಸಂಗೊಂಡಹಳ್ಳಿ ಸಮೀಪದ ಎಸ್.ಕೆ ಇಟ್ಟಿಗೆ ಫ್ಯಾಕ್ಟರಿಯ ಬಳಿ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ. ವಿವಾಹವಾದ ನಂತರದಲ್ಲಿ ಪ್ರಸನ್ನ ಕುಮಾರ್‍ ತನ್ನ ತಂದೆ ತಾಯಿಯೊಡನೆ ಸೇರಿಕೊಂಡು ವರದಕ್ಷಿಣೆ ಹಣ ತರುವಂತೆ ವಿಮಲ ರವರಿಗೆ ಚಿತ್ರಹಿಂಸೆ ನೀಡುತ್ತಿದ್ದು ಈ ಕಾರಣದಿಂದ ಇವರ ಹಿಂಸೆಯನ್ನು ತಾಳಲಾರದೇ ವಿಮಲ ಈ ಕೃತ್ಯ ಮಾಡಿರುವುದಾಗಿ ಇವರ ತಂದೆ ವೆಂಕಟೇಶಪ್ಪ ರವರು ತಮ್ಮ ದೂರಿನಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *