ದಿನದ ಅಪರಾಧಗಳ ಪಕ್ಷಿನೋಟ: ೦೮ ನೇ ಜುಲೈ, ೧೦:೦೦ ಗಂಟೆ

ಸ್ಥಳೀಯ ಮತ್ತು ವಿಶೇಷ ಕಾಯ್ದೆ ಪ್ರಕರಣಗಳು: 

ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ಪಾಲಸಂದ್ರ ಲೇ ಔಟ್ ಬಡಾವಣೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೭-೭-೨೦೧೭ ರಂದು ೦೯:೩೦ ಗಂಟೆ ಸಮಯದಲ್ಲಿ ಪಾಲಸಂದ್ರ ಬಡಾವಣೆಯ ವಾಸಿ ಶ್ರೀಮತಿ ಶಿವಮಣಿ.ವಿ ಎಂಬುವರ ಮೇಲೆ ಜಗಳ ತೆಗೆದ ಮಂಜುನಾಥ, ಮುನಿಯಪ್ಪ, ಸುಶೀಲಮ್ಮ, ರೋಜ ಮತ್ತು ಸುಜಾತ ಎಂಬುವರು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜಾತಿನಿಂದನೆ ಮಾಡಿರುತ್ತಾರೆ.

Leave a Reply

Your email address will not be published. Required fields are marked *