ದಿನದ ಅಪರಾಧಗಳ ಪಕ್ಷಿನೋಟ: ೧೦ ನೇ ಜುಲೈ, ೧೮:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ:

ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೦೮-೦೭-೨೦೧೭ ರಂದು ೨೦:೨೦ ಗಂಟೆ ಸಮಯದಲ್ಲಿ ಮಾಲೂರು ತಾಲ್ಲೂಕು ಶಿವಾರಪಟ್ಟಣದ ವಾಸಿ ಲಕ್ಷ್ಮಣ್ ಎಂಬುವರು ನರಸಾಪುರ ಕಾಮತ್ ಹೋಟೆಲ್ ಮುಂಬಾಗಿ ಅಂಗಡಿಗೆ ಹೋಗುವ ಸಲುವಾಗಿ ಎನ್.ಹೆಚ್ ೭೫ ರಸ್ತೆಯನ್ನು ದಾಟುತ್ತಿದ್ದರು. ಆ ಸಮಯದಲ್ಲಿ ಬೆಂಗಳೂರು ಕಡೆಯಿಂದ ಬಂದ ಕೆಎ-೦೨-ಎಂ.ಸಿ-೬೯೪೪ ಕಾರಿನ ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಲಕ್ಷ್ನಣ ರವರಿಗೆ ತೀವ್ರವಾದ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

ಮನೆಗಳ್ಳತನ:

ಮನೆ ಕಳ್ಳತನಕ್ಕೆ ಸಂಬಂದಿಸಿದಂತೆ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರದ ಮಿಲ್ಲತ್ ನಗರದ ವಾಸಿ ಅಬ್ದುಲ್ ಮಲಿಕ್ ರವರ ಮನೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೮-೦೭-೨೦೧೭ ರಂದು ಅಬ್ದುಲ್ ಮಲಿಕ್ ರವರು ತಮ್ಮ ಮನೆಗೆ ಬೀಗಹಾಕಿಕೊಂಡು ಶಿಡ್ಲಘಟ್ಟದ ತಮ್ಮ ನೆಂಟರ ಮನೆಗೆ ಹೋಗಿದ್ದರು, ಮನೆಯಲ್ಲಿ ಯಾರೂ ಇಲ್ಲದ ಈ ಸಮಯದಲ್ಲಿ ಮನೆಯ ಬಾಗಿಲನ್ನು ಯಾವುದೋ ಆಯುಧವನ್ನು ಬಳಸಿ ತೆಗೆದು ಒಳ ಪ್ರವೆಶಿಸಿದ ಯಾರೋ ಕಳ್ಳರು ೧೨೫ ಗ್ರಾಂ ಚಿನ್ನದ ಆಭರಣಗಳು ಮತ್ತು ರೂ. ೮೦,೦೦೦-೦೦ ನಗದು ಸೇರಿದಂತೆ ಒಟ್ಟು ೩,೯೦,೦೦೦-೦೦ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

Leave a Reply

Your email address will not be published. Required fields are marked *