ದಿನದ ಅಪರಾಧಗಳ ಪಕ್ಷಿನೋಟ: ೧೧ ನೇ ಜುಲೈ, ೧೮:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ:

ವೇಮಗಲ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೦-೦೭-೨೦೧೭ ರಂದು ೧೫:೩೦ ಗಂಟೆ ಸಮಯದಲ್ಲಿ ಹೊಸಕೋಟೆ ತಾಲೂಕು ಯಲಚಹಳ್ಳಿ ಗ್ರಾಮದ ವಾಸಿ ನಾಗರಾಜ.ವಿ ಎಂಬುವರು ತಮ್ಮ ಬಜಾಜ್ ಬಾಕ್ಸರ್‍ ಸಂಖ್ಯೆ ಕೆಎ-೦೩-ಇಜೆ-೭೯೩೧ ರಲ್ಲಿ ತಮ್ಮ ಗ್ರಾಮಕ್ಕೆ ಹೋಗುವ ಸಲುವಾಗಿ ನರಸಾಪುರ ಕೆರೆ ಕಟ್ಟೆಯ ಬೆಳ್ಳೂರು ಬಳಿ ರಸ್ತೆ ತಿರುವಿನಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಕೆಎ-೦೭-ಎಫ್-೧೬೩೩ ಕೆ.ಎಸ್.ಆರ್‍.ಟಿ.ಸಿ ಬಸ್ ನ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ದ್ವಿಚಕ್ರವಾಹನ ಜಖಂಗೊಂಡು ನಾಗರಾಜರವರಿಗೆ ತೀವ್ರವಾದ ಗಾಯಗಳಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

ಹೆಂಗಸು ಕಾಣೆಯಾಗಿರುವ ಬಗ್ಗೆ:

ಮಾಲೂರು ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ಚಾಕನಹಳ್ಳಿ ಗ್ರಾಮದ ವಾಸಿ ಚೈತ್ರ.ಎಂ (೨೫) ಎಂಬುವರು ಕಾಣೆಯಾಗಿರುತ್ತಾರೆ. ದಿನಾಂಕ ೦೬-೦೭-೨೦೧೭ ರಂದು ಬೆಳಗ್ಗೆ ೦೫:೦೦ ಗಂಟೆಗೆ ತನ್ನ ಮನೆಯಿಂದ ಹೊರಟ ಚೈತ್ರ ಹಿಂತಿರುಗಿ ಬಾರದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಇವರ ಸಹೋದರ ಶ್ರೀನಿವಾಸ ಎಂಬುವರು ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.

ಕಾಣೆಯಾಗಿರುವ ಮಹಿಳೆ ಚೈತ್ರ

 

Leave a Reply

Your email address will not be published. Required fields are marked *