ದಿನದ ಅಪರಾಧಗಳ ಪಕ್ಷಿನೋಟ: ೧೨ ನೇ ಜುಲೈ, ೧೮:೦೦ ಗಂಟೆ

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ:

ಟ್ರಾಕ್ಟರ್‍ ಹರಿದ ಪರಿಣಾಮ ಮಹಿಳೆ ಮತ್ತು ಆಕೆಯ ಮಗು ಸ್ಥಳದಲ್ಲೇ ಮೃತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ತಾಲೂಕು ದ್ವಾಪಸಂದ್ರ ಗ್ರಾಮದ ಡಿ.ಕೆ ನಾರಾಯಣಸ್ವಾಮಿ ರವರ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಮೂಲತಃ ಒರಿಸ್ಸಾ ರಾಜ್ಯದ ನಿವಾಸಿಯಾದ ಬಿರಾಜಿನಿ ಗುಡೋ (೩೪) ಮತ್ತು ಈಕೆಯ ಮಗು ಮಿತ್ತಲ್ (೩) ಮೃತಪಟ್ಟವರು. ಬಿರಾಜಿನಿ ಗುಡೋ ರವರು ದಿನಾಂಕ ೧೨-೦೭-೨೦೧೭ ರಂದು ೧೧:೩೦ ಗಂಟೆ ಸಮಯದಲ್ಲಿ ತನ್ನ ಮಗುವಿನೊಡನೆ ದ್ವಾಪಸಂದ್ರ ಗ್ರಾಮದ ಸರ್ಕಾರಿ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿದ್ದರು. ಆ ಸಮದಯಲ್ಲಿ ಹಿಂಭಾಗದಿಂದ ಬಂದ ಟ್ರಾಕ್ಟರ್‍ ಸಂಖ್ಯೆ ಎಪಿ-೦೪-ಎಕ್ಸ್-೭೮೮೮ ರ ಚಾಲಕ ತನ್ನ ಟ್ರಾಕ್ಟರನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆದಿರುತ್ತಾನೆ. ಟ್ರಾಕ್ಟರಿನ ಚಕ್ರ ಮಹಿಳೆ ಮತ್ತು ಮಗುವಿನ ಮೇಲೆ ಹರಿದ ಪರಿಣಾಮ ತೀವ್ರವಾದ ಗಾಯಗಳಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಟ್ರಾಕ್ಟರ್‍ ಚಾಲಕ ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ.

ಶ್ರೀನಿವಾಸಪುರದಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೦೭-೨೦೧೭ರಂದು ೦೯:೦೦ ಗಂಟೆ ಸಮಯದಲ್ಲಿ ಶ್ರೀನಿವಾಸಪುರ ತಾಲೂಕು ಅತ್ತಿಕುಂಟೆ ಗ್ರಾಮದ ವಾಸಿ ಪ್ರಮೀಳ ಎಂಬುವರು ಕೆಲಸಕ್ಕೆ ಹೊಗುವ ಸಲುವಾಗಿ ಪಾತಮುತ್ತಕದ ಪಲ್ಲಿ ಗ್ರಾಮದ ವಾಸಿ ಪ್ರಭಾಕರಾಚಾರಿ ಎಂಬುವರೊಡನೆ ಅವರ ಹೀರೋಹೋಂಡಾ ಸ್ಪ್ಲೆಂಡರ್‍ ದ್ವಿಚಕ್ರವಾಹನ ಸಂಖ್ಯೆ ಕೆಎ-೦೮-ಯು-೨೫೦೭ ರಲ್ಲಿ ಅತ್ತಿಕುಂಟೆ ಗ್ರಾಮದ ಬಳಿ ಹೋಗುತ್ತಿದ್ದರು. ಆ ಸಮಯದಲ್ಲಿ ಇವರ ಸೀರೆ ದ್ವಿಚಕ್ರವಾಹನದ ಚಕ್ರಕ್ಕೆ ಸಿಲುಕಿ ದ್ವಿಚಕ್ರವಾಹನ ಕೆಳಗೆ ಬಿದ್ದಿರುತ್ತದೆ. ಇದರ ಪರಿಣಾಮ ಪ್ರಮೀಳ ರವರಿಗೆ ತೀವ್ರವಾದ ಗಾಯಗಳಾಗಿದ್ದು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪ್ರಮೀಳಾ ರವರು ಮೃತಪಟ್ಟಿರುತ್ತಾರೆ.

 

Leave a Reply

Your email address will not be published. Required fields are marked *