ದಿನದ ಅಪರಾಧಗಳ ಪಕ್ಷಿನೋಟ: ೧೨-೧೦-೨೦೧೯

ಹಲ್ಲೆ
ಮಾಸ್ತಿ ಪೊಲಿಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮಾಸ್ತಿ ಬಳಿಯ ಜಿಂಗತಿಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿರುತ್ತದೆ. ದಿನಾಂಕ ೧೦-೧೦-೨೦೧೯ ರಂದು ೧೮:೪೫ ಗಂಟೆ ಸಮಯದಲ್ಲಿ ಗ್ರಾಮದ ವಾಸಿ ಯಲ್ಲಪ್ಪ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿಗಳಾದ ಚಂದ್ರ, ಪ್ರದೀಪ್ ಮತ್ತು ಮುನಿಯಪ್ಪ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡಿನಿಂದ ಹೊಡೆದು ಗಾಯ ಪಡಿಸಿರುತ್ತಾರೆ. ಇದೇ ಘಟನೆಯ ಬಗ್ಗೆ ಪ್ರದೀಪ್ ಎಂಬುವರು ಯಲ್ಲಪ್ಪ ಹಾಗೂ ಮತ್ತಿತರರ ವಿರುದ್ದ ಸಹಾ ದೂರು ನೀಡಿದ್ದು ಕೇಸು ಮತ್ತು ಪ್ರತಿಕೇಸು ದಾಖಲಾಗರುತ್ತದೆ.

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಶ್ರೀನಿವಾಸಪುರ ಟೌನ್ ಉನಿಕೇಲಿಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೯-೧೦-೨೨೦೧೯ ರಂದು ೧೭:೪೫ ಗಂಟೆ ಸಮಯದಲ್ಲಿ ರಾಮಾಂಜಿ ಎಂಬುವರ ಮೇಲೆ ಜಗಳ ತೆಗೆದ ಯಶೋಧ, ಭಾರತಿ, ಚಲಪತಿ ಹಾಗೂ ವೆಂಕಟರವಣ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಕೈಗಳಿಂದ ಹೊಡೆದು ಹಲ್ಲೆ ಮಾಡಿ ಪ್ರಾಣ ಬೆಕದರಿಕೆ ಹಾಕಿರುತ್ತಾರೆ.

Leave a Reply

Your email address will not be published. Required fields are marked *