ದಿನದ ಅಪರಾಧಗಳ ಪಕ್ಷಿನೋಟ: ೧೪ ನೇ ಜುಲೈ, ೧೦:೦೦ ಗಂಟೆ

ಮನೆಗಳ್ಳತನ:

ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಮನೆಗಳ್ಳನತಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ಟೌಔನ್ ಮಹಬೂಬ್ ನಗರದ ವಾಸಿ ಅಲ್ಲಾಬಕಾಶ್ ಎಂಬುವರ ಮನೆಯಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೨-೦೭-೨೦೧೭ ರಂದು ಅಲ್ಲಾಬಕಾಶ್ ರವರು ತಮ್ಮ ಮನೆಗೆ ಬೀಗ ಹಾಕಿಕೊಂಡು ತನ್ನ ಹೆಂಡತಿಯ ಹೆರಿಗೆಯ ಸಂಬಂಧ ಕೋಲಾರದ ಆರ್‍.ಎಲ್.ಜಾಲಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮರುದಿನ ಅಂದರೆ ದಿನಾಂಕ ೧೩-೦೭-೨೦೧೭ ರಂದು ಬೆಳಗ್ಗೆ ೦೬:೩೦ ಗಂಟೆಗೆ ತಮ್ಮ ಮನೆಗೆ ಹೋಗಿ ನೋಡಿದಾಗ ಕೃತ್ಯ ಬೆಳಕಿಗೆ ಬಂದಿರುತ್ತದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಡೋರ್‍‌ಲಾಕನ್ನು ಮೀಟಿ ಬಾಗಿಲು ತೆರೆದು ಒಳನುಗ್ಗಿದ ಯಾರೋ ಕಳ್ಳರು ಮನೆಯಲ್ಲಿದ್ದ ರೂ. ೯೫,೦೦೦-೦೦ ನಗದು ಹಾಗೂ ೧೨೦ ಗ್ರಾಂ ತೂಕದ ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಮಾರಣಾಂತಿಕ ರಸ್ತೆ ಅಪಘಾತ:

ದ್ವಿಚಕ್ರವಾಹನಗಳು ಮುಖಾ ಮುಕಿ ಡಿಕ್ಕಿ ಹೊಡೆದ ಪರಿಣಾಮ ಮೂರು ಜನರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು-ಕೆ.ಜಿ.ಎಫ್ ರಸ್ತೆಯ ಕುಮದೇನಹಳ್ಳಿ ಗ್ರಾಮದ ಗೇಟ್ ಸಮೀಪ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೧೩-೦೬-೨೦೧೭ ರಂದು ೧೪:೩೦ ಗಂಟೆ ಸಮಯದಲ್ಲಿ ಕೆ.ಚದುಮನಹಳ್ಳಿ ಗ್ರಾಮದ ವಾಸಿಯಾದ ಸೀನಪ್ಪ (೪೦) ರವರು ತಮ್ಮ ಮತ್ನಿ ಇಂದ್ರಮ್ಮ (೩೮) ಎಂಬುವರೊಡನೆ ಮುಳಬಾಗಿಲುನಿಂದ ತಮ್ಮ ಗ್ರಾಮಕ್ಕೆ ಹೋಗುವ ಸಲುವಾಗಿ ತಮ್ಮ ಅಪಾಚಿ ಸಂಖ್ಯೆ ಕೆಎ-೦೮-ಕೆ-೧೩೦೦ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದರು. ಆ ಸಮಯದಲ್ಲಿ ಎದುರುಗಡೆಯಿಂದ ಬಂದ ಕೆಎ-೫೩-ಇ.ಎಲ್-೭೦೨೭ ಬಜಾಜ್ ಪ್ಲಾಟೀನಾ ದ್ವಿಚಕ್ರವಾಹನದ ಚಾಲಕ ಕೊರವೆನೂರು ಗ್ರಾಮದ ವಾಸಿ ಸಂತೋಷ್ ರೆಡ್ಡಿ ಎಂಬುವರು ತನ್ನ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸೀನಪ್ಪ ರವರ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ. ಇದರ ಪರಿಣಾಮ ಇಂದ್ರಮ್ಮ ಹಾಗೂ  ಮತ್ತೊಂದು ದ್ವಿಚಕ್ರವಾಹನದ ಚಾಲಕ ಸಂತೋಷ್ ರೆಡ್ಡಿ ಇಬ್ಬರೂ ತೀವ್ರವಾದ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಸೀನಪ್ಪ ರವರಿಗೂ ತೀವ್ರವಾದ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗಮದ್ಯದಲ್ಲಿ ಮೃತಪಟ್ಟಿರುತ್ತಾರೆ.

ವಿಶೇಷ ಮತ್ತು ಸ್ಥಳೀಯ ಕಾಯ್ದೆ ಪ್ರಕರಣಗಳು:

ಗಲ್‌ಪೇಟೆ ಪೊಲೀಸ್ ಠಾಣೆಯಲ್ಲ ಪರಿಶಿಷ್ಟ ಜಾತಿ/ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ ೧೨-೦೭-೨೦೧೭ ರಂದು ೧೬:೧೫ ಗಂಟೆ ಸಮಯದಲ್ಲಿ ಕೋಲಾರ ತಾಲ್ಲೂಕು ಕಛೇರಿಯಲ್ಲಿ ಕೋಲಾರ ತಾಲೂಕು ಹೊನ್ನೇನಹಳ್ಳಿ ಗ್ರಾಮದ ವಾಸಿ ಕೃಷ್ಣಮೂರ್ತಿ ಎಂಬುವರು ಕೆಲಸದ ನಿಮಿತ್ತ ಇದ್ದರು. ಆ ಸಮಯದಲ್ಲ ಅಲ್ಲಿಗೆ ಬಂದ ಮುಳಬಾಗಿಲು ತಾಲೂಕು ಮಂಡಿಕಲ್ ಗ್ರಾಮದ ವಾಸಿ ಮಂಡಿಕಲ್ ನಾಗರಾಜ ಎಂಬುವರು ಕೃಷ್ಣಮೂರ್ತಿ ರವರ ಮೇಲೆ ಜಗಳ ತೆಗೆದು ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿನಿಂದನೆ ಮಾಡಿರುತ್ತಾರೆ.

Leave a Reply

Your email address will not be published. Required fields are marked *