ದಿನದ ಅಪರಾಧಗಳ ಪಕ್ಷಿನೋಟ ೨೯-೦೮-೨೦೧೯

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:೨೮-೦೮-೨೦೧೦೯  ಸಂಜೆ ೪:೦೦ ಗಂಟೆ ಯಿಂದ ೨೯-೦೮-೨೦೧೯ ಸಂಜೆ ೪:೦೦ ಗಂಟೆ  24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳುದಾಖಲಾಗಿರುತ್ತವೆ

 

 

ಯುವತಿ ಕಾಣೆಯಾಗಿರುವ ಬಗ್ಗೆ :

ಮುಳಬಾಗಿಲು ಗ್ರಾಮಾಂತರ ಪೊಲೀಸ್  ಠಾಣೆಯಲ್ಲಿ  ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲ್ಲೂಕು ಗಾಜುಲಬಾವಿ ಗ್ರಾಮದಲ್ಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ನಿವಾಸಿಯಾದ ಎಂ , ಶ್ರೀನಿವಾಸ್  ರವರ  ಎರಡನೇ ಮಗಳು ಸುಪ್ರಿಯಾ (೧೯) ವರ್ಷ ಇವರು ಪಿ,ಯು,ಸಿ  ವ್ಯಾಸಾಂಗ ಮಾಡಿದ್ದು, ದಿನಾಂಕ ೧೫-೦೮-೨೦೧೯ ರಂದು ಎಂದಿನಂತೆ ರಾತ್ರಿ ಎಲ್ಲರೂ ಊಟ ಮಾಡಿ ಮಲಗಿದ್ದು, ಮುಂಜಾನೆ ಎದ್ದು ನೋಡಿದಾಗ ಸುಪ್ರಿಯಾ  ಮನೆಯಲ್ಲಿ ಕಾಣಿಸದೇ ಇದ್ದು , ನಂತರ ಈ ಬಗ್ಗೆ ಸುತ್ತ,ಮುತ್ತ ಗ್ರಾಮದಲ್ಲಿ ಹುಡಿಕಿದ್ದು, ಪತ್ತೆಯಾಗದೇ ರಾತ್ರೋ ರಾತ್ರಿ ಯಾರಿಗೂ ಹೇಳದೇ ಹೊರಗಡೆ ಹೋಗಿ ಕಾಣೆಯಾಗಿರುತ್ತಾಳೆ. ಅದೇ ಗ್ರಾಮದ ವಾಸಿಯಾದ ಬಾಲಾಜಿ ಬಿನ್ ನಾರಾಯಣಪ್ಪ, ಎಂಬುವರ ಜೋತೆ ಸುಪ್ರಿಯಾ ಹೋಗಿರುವುದಾಗಿ ಪಿರ್ಯಾದಿದಾರ  ಅನುಮಾನ ವ್ಯಕ್ತಪಡಿಸಿರುತ್ತಾರೆ.

ಯುವತಿ ಕಾಣೆಯಾಗಿರುವ ಬಗ್ಗೆ :

ಕೋಲಾರ ನಗರ ಪೊಲೀಸ್  ಠಾಣೆಯಲ್ಲಿ  ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.ದಕ್ಷ ಅಕಾಡೆಮಿ ಕಾಲೇಜ್  ಕೋಲಾರ ನಗರ . ದಲ್ಲಿ ಘಟನೆ ಸಂಬವಿಸಿರುತ್ತದೆ. ಶ್ರೀನಿವಾಸಪುರ ತಾಲ್ಲೂಕು  ಯಲ್ದೂರು ಹೋಬಳಿ  ಚನ್ಮಹಳ್ಳಿ  ಗ್ರಾಮದ ನಿವಾಸಿಯಾದ  ಸಿ, ಎಂ ಕ್ರಿಷ್ಣನಾಯಕ ರವರ ೯ ನೇ ಮಗಳಾದ ಚಂದ್ರಿಕಾ  ರವರು  ಕೋಲಾರದ  ಶ್ರೀ ದಕ್ಷಾ ಅಕಾಡೆಮಿಯಲ್ಲಿ  ಮೊದಲನೇ ವರ್ಷದ ಬಿ,ಕಾಂ.,  ವಿದ್ಯಾಬ್ಯಾಸವನ್ನು  ಮಾಡುತ್ತಿದ್ದು,  ಪ್ರತಿದಿನ ೭:೩೦ ಗಂಟೆಗೆ ಮನೆಯಿಂದ ಕಾಲೇಜಿಗೆ ಹೊರಟು ಸಂಜೆ ೫:೦೦ ಗಂಟೆಗೆ  ಮನೆಗೆ ವಾಪಸ್ ಆಗುತ್ತಿದ್ದು,  ದಿನಾಂಕನ ೨೭-೦೮-೨೦೧೯ ರಂದು  ಎಂದಿನಂತೆ ಕಾಲೇಜಿಗೆ ಬಂದವಳು ಮನೆಗೆ ವಾಪಸ್ಸಾಗದೇ ಕಾಣೆಯಾಗಿರುತ್ತಾಳೆ,

ಮಾರಾಣಾಂತಿಕ ರಸ್ತೆ ಅಪಘಾತ:

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತ ಸಂಬವಿಸಿರುತ್ತದೆ,  ಮಾಲೂರು ತಾಲ್ಲೂಕು , ಮೈಲಾಂಡ್ಲಹಳ್ಳಿ ಕೆರೆಯ ಕಟ್ಟೆಯ ಬಳಿ ಘಟನೆ ಸಂಬವಿಸಿರುತ್ತದೆ,  ಮಾಲೂರು ತಾಲ್ಲೂಕು  ಮಾಸ್ತಿ ಹೋಬಳಿ  ಆನಿಕಾರಹಳ್ಳಿ ಗ್ರಾಮದ ವಾಸಿಯಾದ  ಮುನಿವೆಂಕಟಪ್ಪ ರವರು  ತನ್ನ ಬಾಬತ್ತು  ದ್ವಿಚಕ್ರ ವಾಹನ  ಸಂಖ್ಯೆ: ಕೆ ಎ ೫೩ ಇಎಪ್ ೨೪೧೬ ಎಂಬ ವಾಹನದಲ್ಲಿ , ಮಾಲೂರು ತಾಲ್ಲೂಕು  ಕುಂಬಳಕಡತೂರು  ಗ್ರಆಮದ  ವಾಸಿಯಾಧ ನರಸಮ್ಮ ಎಂಬುವರನ್ನು ತನ್ನ ದ್ವಿಚಕ್ರ ವಾಹನದಲ್ಲಿ ಹಿಂಬದಿಯಲ್ಲಿ ಕೂರಿಸಿಕೊಂಡು   ಅಜಾಗರುಕತೆ ಮತ್ತು ಅತಿವೇಗ ದಿಂದ ಚಾಲನೇ ಮಾಡಿ ಹೋಗುತ್ತಿರುವಾಗ  ಮಾಲೂರು ತಾಲ್ಲೂಕು , ಮೈಲಾಂಡ್ಲಹಳ್ಳಿ ಕೆರೆಯ ಕಟ್ಟೆಯ ಬಳಿ  ವಾಹನ ಸಮೇತ ಬಿದ್ದು, ಹಿಂಬದಿ ಕುಳಿತಿದ್ದ ನರಸಮ್ಮ ಕೆಳಗೆ ಬಿದ್ದು ತಲೆಗೆ ತೀವ್ರ ಗಾಯವಾಗಿ ,ಚಿಕಿತ್ಸೆಗಾಗಿ  ಹೊಸಕೊಡೆ ಎಂವಿಜೆ ಆಸ್ಪತ್ರೆ ಗೆ ದಾಖಲು ಮಾಡಿದ್ದು , ಚಿಕಿತ್ಸೆ ಪಲಕಾರಿಯಾಗದೇ  ನರಸಮ್ಮ ರವರು  ದಿನಾಂಕ ೨೭-೦೮-೨೦೧೯ ರಂದು ರಾತ್ರಿ ೯:೦೦ ಗಂಟೆ ಯಲ್ಲಿ ಮೃತಪಟ್ಟಿರುತ್ತಾರೆ.

 

Leave a Reply

Your email address will not be published. Required fields are marked *