ದಿನದ ಅಪರಾಧಗಳ ಪಕ್ಷಿನೋಟ 05ನೇ ಸೆಪ್ಟೆಂಬರ್ 2019

ಕೋಲಾರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:05-09-2019 ರಂದು 16-00 ಗಂಟೆಗೆ ಪೂರ್ವದ 24 ಗಂಟೆಗಳ ಅವಧಿಯಲ್ಲಿ ಈ ಕೆಳಕಂಡ ಅಪರಾಧ ಪ್ರಕರಣಗಳುದಾಖಲಾಗಿರುತ್ತವೆ.

 

ಮಾರಣಾಂತಿಕ ರಸ್ತೆ ಅಪಘಾತ:

ಮಾಲೂರು ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಮಾಲೂರು ಪಟ್ಟಣದ ಮಾಲೂರು-ಹೊಸೂರು ರಸ್ತೆಯ ಬಿ.ಇ.ಓ. ಕಛೇರಿ ಮುಂಭಾಗ ಕೃತ್ಯ ಸಂಭವಿಸಿರುತ್ತದೆ. ಮಾಲೂರು ಪಟ್ಟಣದ ಆದರ್ಶನಗರದ ವಾಸಿಯಾದ ದೇವರಾಜ ರವರ ಅಣ್ಣನಾದ ಸುಮಾರು 50 ವರ್ಷ ವಯಸ್ಸಿನ ಲೋಕನಾಥನ್ ರವರು ದಿನಾಂಕ:04-09-2019 ರಂದು ರಾತ್ರಿ 9-45 ಗಂಟೆಯಲ್ಲಿ ಸ್ವಂತ ಕೆಲಸದ ನಿಮಿತ್ತ ಮಾಲೂರು ಬಸ್ ನಿಲ್ದಾಣದ ಸಮೀಪ ಹೋಗಿ ವಾಪಸ್ಸು ಮನೆಗೆ ಬರಲು ಮಾಲೂರು ಪಟ್ಟಣದ ಮಾಲೂರು-ಹೊಸೂರು ರಸ್ತೆಯ ಬಿ.ಇ.ಓ. ಕಛೇರಿ ಮುಂಭಾಗದಿಂದ ತಾಲ್ಲೂಕು ಕಛೇರಿಗೆ ಕಡೆಗೆ ಬರಲು ರಸ್ತೆಯನ್ನು ದಾಟುತ್ತಿದ್ದಾಗ ಹೊಸೂರು ಕಡೆಯಿಂದ ಬಂದ ದ್ವಿಚಕ್ರ ವಾಹನವನ್ನು ಅದರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಪಿರ್ಯಾದಿಯ ಅಣ್ಣನಾದ ಲೋಕನಾಥನ್ ರವರಿಗೆ ಡಿಕ್ಕಿಹೊಡೆಸಿದ ಪರಿಣಾಮ ತೀವ್ರತರವಾದ ಗಾಯಗಳಾಗಿದ್ದು, ಗಾಯಾಳುವನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದು, ಅದರಂತೆ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗು ದಾಖಲುಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 1-00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೋಲಾರ ಜಿಲ್ಲಾ ಪೊಲೀಸ್ ನಿಸ್ತಂತು ಕೇಂದ್ರದ ದೂರವಾಣಿ ಸಂಖ್ಯೆ 08152-243066 ಗೆಸಂಪರ್ಕಿಸಬಹುದಾಗಿರುತ್ತದೆ.

Leave a Reply

Your email address will not be published. Required fields are marked *