ದಿನದ ಅಪರಾಧ ಗಳ ಪಕ್ಷಿನೋಟ ದಿನಾಂಕ ೦೩-೧೦-೨೦೧೯

ಹಲ್ಲೆ:

ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಮುಳಬಾಗಿಲು ತಾಲೂಕು ಸಂಗಸಂದ್ರ ಗ್ರಾಮದಲ್ಲಿ ಕೃತ್ಯ ಸಂಭವಿಸಿರುತ್ತದೆ. ದಿನಾಂಕ ೦೨-೧೦-೨೦೧೯ ರಂದು ೧೮:೦೦ ಗಂಟೆ ಸಮಯದಲ್ಲಿ ಸಂಗಸಂದ್ರ ಗ್ರಾಮದ ವಾಸಿ ಕೃಷ್ಣಪ್ಪ ಎಂಬುವರ ಮೇಲೆ ಜಗಳ ತೆಗೆದ ಅದೇ ಗ್ರಾಮದ ವಾಸಿ ಶಂಕರಪ್ಪ ಎಂಬುವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಶಂಕರಪ್ಪ ಕೃಷ್ಣಪ್ಪ ರವರ ಮನೆಯಲ್ಲಿ ಬಾಡಿಗೆಗೆ ಇದ್ದು ಖಾಲಿ ಮಾಡುವ ವಿಚಾರದಲ್ಲಿ ಈ ಘಟನೆ ಸಂಭವಿಸಿರುತ್ತದೆ.

 

ಜೂಜಾಟ ದಾಳಿ; ರೂ. ೫೩೭೦೦-೦೦ ವಶ, ೧೪ ಜನರ ಬಂಧನ

 

ಕೋಲಾರ ಜಿಲ್ಲೆ ಡಿ.ಸಿ.ಐ.ಬಿ ಶಾಖೆಯ ಆರಕ್ಷಕ ನಿರೀಕ್ಷಕರಾದ ಶ್ರೀ ಗೋವರ್ದನ್ ರವರು ತಮಗೆ ಬಂದ ಖಚಿತ ವರ್ತಮಾನದ ಮೇರೆಗೆ ತಮ್ಮ ಸಿಬ್ಬಂದಿಯವರೊಡನೆ ಶ್ರೀನಿವಾಸಪುರ ತಾಲ್ಲುಕು ಹೆಬ್ಬಟ ಗ್ರಾಮದ ಬಳಿ ದಾಳಿ ಮಾಡಿ ಇಸ್ಪೀಟ್ ಎಲೆಗಳನ್ನು ಬಳಸಿ ಅಕ್ರಮ ಜೂಜಾಟದಲ್ಲಿ ನಿರತರಾಗಿದ್ದ ೧೪ ಜನರನ್ನು ಬಂಧಿಸಿರುತ್ತಾರೆ. ಈ ವೇಳೆ ಜೂಜಾಟಕ್ಕೆ ಪಣವಾಗಿಟ್ಟಿದ್ದ ರೂ. ೫೩,೭೦೦-೦೦ ಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *