ದಿನಾಂಕ೨೪-೦೬-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೫-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ದಿನಾಂಕ೨೪೦೬-೨೦೧೯ ಸಂಜೆ ೦೪:೦೦ ಗಂಟೆಯಿಂದ ದಿನಾಂಕ ೨೫-೦೬-೨೦೧೯ ರ ಸಂಜೆ ೦೪:೦೦ ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

ಯುವಕ ಕಾಣೆಯಾಗಿರುವ ಬಗ್ಗೆ;

ವೇಮಗಲ್ ಪೊಲೀಸ್ ಠಾಣೆಯಲ್ಲಿ ಯುವಕ ಕಾಣೆಯಾಗಿರುವ ಬಗ್ಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು  ಬಿ ಟು ಬ್ಲಾಕ್ ವೇಮಗಲ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿರುತ್ತದೆ. ಕೋಲಾರ ತಾಲ್ಲೂಕು  ಬಿ ಟು ಬ್ಲಾಕ್ ವೇಮಗಲ್ ಗ್ರಾಮದ ವಾಸಿಯಾದ ಮುನಿನಾರಯಣಪ್ಪ  ರವರ ಮೊದಲ ಹೆಂಡತಿಯಾದ ವೆಂಕಟಲಷ್ಮಮ್ಮ ರವರ ಮಗ ಸುರೇಶ್ (೨೧)ಗಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದು,ದಿನಾಂಕ ೧೮-೦೬-೨೦೧೯ ರಂದು ಬೆಳಿಗ್ಗೆ  ಸುಮಾರು ೯:೦೦ ಗಂಟೆ ಸಮಯದಲ್ಲಿ ಗಾರೆ ಕೆಲಸಕ್ಕೆ ಹೊರಟ   ಸುರೇಶ್ (೨೧) ಮನೆಗೆ ಬಂದಿರುವುದಿಲ್ಲ, ಸಂಬಂದಿಕರ ಕಡೆಗಳಲ್ಲಿ ಹುಡುಕಿದರು  ಸುಳಿವು ಇಲ್ಲದೆ ಕಾಣೆಯಾಗಿರುತ್ತಾನೆ.

ಸುಲಿಗೆ;

ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು ಕೆಂದಟ್ಟಿ ಗೇಟ್ ಬಳಿ ಕೃತ್ಯ ಸಂಬವಿಸಿರುತ್ತದೆ,ದಿನಾಂಕ ೨೩-೦೬-೨೦೧೯ರಂದು ರಾತ್ರಿ ಸುಮಾರು ೨೩:೩೦ ಗಂಟೆ ಸಮಯದಲ್ಲಿ ಕೋಲಾರ ತಾಲ್ಲೂಕು ಕೆಂದಟ್ಟಿ ಗೇಟ್ ಬಳಿ ಎರಡು ದ್ವಿಚಕ್ರ ವಾಹನಗಳೊಂದಿಗೆ ಸಂಖ್ಯೆ ಕೆ ಎ ೪೦ ಕೆ ೫೫೫ ಮತ್ತು ಕೆ ಎ ೪೦ ಡಬ್ಲೂ ೫೮೧೦ ಐದು  ಜನರು ಚಿಂತಾಮಣಿ ತಾಲ್ಲೂಕು ಕೈವಾರ ಗ್ರಾಮದ ವಾಸಿ ರಘುನಾಥ್ ಬಿನ್ ವೆಂಕಟರಾಯಪ್ಪ (೨೮), ಚಿಂತಾಮಣಿ ತಾಲ್ಲೂಕು  ನಾರಾಯಣ ಹಳ್ಳಿ ಗ್ರಾಮದ ವಾಸಿ ನರಸಿಂಹ ಬಿನ್ ಮುನಿಯಪ್ಪ(೩೦) , ಚಿಂತಾಮಣಿ ತಾಲ್ಲೂಕು  ತಿಮ್ಮಸಂದ್ರ ಗ್ರಾಮದ ವಾಸಿಕೆ,ಎಸ್ ಪ್ರಸಾದ್ ಬಿನ್ ನಾರಯಣಸ್ವಾಮಿ (೨೯), ಚಿಂತಾಮಣಿ ತಾಲ್ಲೂಕು  ದಿನ್ನ ಮಿಂದಹಳ್ಳಿ ಗ್ರಾಮದ ವಾಸಿ ಆನಂದ್ ಬಿನ್ ಗೋವಿಂದಪ್ಪ (೨೯),ಮತ್ತು  ಚಿಂತಾಮಣಿ ತಾಲ್ಲೂಕು ಸಂತೇಕಲ್ಲಹಳ್ಳಿ  ಗ್ರಾಮದ ವಾಸಿ  ಗುರುಮೂರ್ತಿ ಬಿನ್ ಮುನಿಯಪ್ಪ ಇವರು ಕೈಯಲ್ಲಿ ದೊಣ್ಣೆ,ಕಾರದ ಪುದಡಿ ,ಕಬಬಿನದ ರಾಡ್ ,ಚಾಕು ಹಿಡಿದು  ಒಂಟಿಯಾಗಿ ಬರುವ ಪ್ರಯಾಣಿಕರನ್ನು ತಡೆದು ,ಅವರ ಬಳಿ ಹಣ,ಒಡವೆ ಯನ್ನು ಮಾಡುತ್ತಿದ್ದು, ಕಚಿತ ಮಾಹಿತಿ ಮೇರೆಗೆ ಗಸ್ತು ಮಡುತ್ತಿದ್ದ ಕೋಲಾರ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ಪ್ರಖರಣ ದಾಖಲಿಸಿರುತ್ತಾರೆ.

ಆತ್ಮಹತ್ಯೆ ಪ್ರಕರಣ:

ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತ ಶ್ರೀನಿವಾಸಪುರ ನಗರ ಜಾಕೀರ್‍ ಹುಸನ್ ಮೊಹೊಲ್ಲಾ ಈದ್ಗಾ ಮೈದಾನ  ದ ಬಳಿ ಘಟನೆ  ಸಂಬವಿಸಿರುತ್ತದೆ, ಸಯ್ಯದ್ ಸುಲೇಮಾನ್ (೩೨) ಶ್ರೀನಿವಾಸಪುರ ನಗರ ಜಾಕೀರ್‍ ಹುಸನ್ ಮೊಹೊಲ್ಲಾ ದಲ್ಲಿ ವಾಸವಾಗಿದ್ದು  ದಿನಾಂಕ ೨೪-೦೬-೨೦೧೯ ರಂದು ಮದ್ಯಾಹ್ನ೧೧:೩ ಗಂಟೆ ಸಮಯದಲ್ಲಿ ಸಯ್ಯದ್ ಸುಲೇಮಾನ್ (೩೨)ರವರು ಶ್ರೀನಿವಾಸಪುರ ನಗರ ಜಾಕೀರ್‍ ಹುಸನ್ ಮೊಹೊಲ್ಲಾ ಈದ್ಗಾ ಮೈದಾನ  ದ ಬಳಿ ವಿಷ ಸೇವಿಸಿದ್ದುಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ  ದಾಕಲಿಸಿ  ಹೆಚ್ಚಿನ ಚಿಕಿತ್ಸೆಗಾಗಿ  ಆರ್‍ ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ.

 

 

Leave a Reply

Your email address will not be published. Required fields are marked *