ಮನೆಕಳವು ಆರೋಪಿಯ ಬಂಧನ: ೫ ಲಕ್ಷ ರೂ ಬೆಲೆಯ ಚಿನ್ನಾಭರಣ ವಶ

ಕೋಲಾರ ಜಿಲ್ಲೆಯ ಹೆಚ್ಚುವರಿ ಪ್ರಭಾರವನ್ನು ವಹಿಸಿರುವ ಪೊಲೀಸ್ ವರಿಷ್ಟಾಧಿಕಾರಿಗಳಾದ ಶ್ರೀ ಲೋಕೇಶ್ ಕುಮಾರ್‍, ಐ.ಪಿ.ಎಸ್, ಕೋಲಾರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ರಾಜೀವ್ ಹಾಗೂ ಕೋಲಾರ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಅಬ್ದುಲ್ ಸತ್ತಾರ್‍ ರವರ ಮಾರ್ಗದರ್ಶನದಲ್ಲಿ ಕೋಲಾ ನಗರ ಸಿ.ಪಿ.ಐ ರವರಾದ ಶ್ರೀ ಲೋಕೇಶ್ ಕುಮಾರ್‍ ರವರ ನೇತೃತ್ವದಲ್ಲಿ ಇತ್ತೀಚೆಗೆ ಗಲ್‌ಪೇಟೆ ಪೊಲೀಸ್ ಠಾಣೆಯಲ್ಲಿ ವರದಿಯಾಗಿದ್ದ ಮನೆ ಕಳವು ಪ್ರಕರಣದ ಆರೋಪಿಗಳ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು.

ಈ ತಂಡದಲ್ಲಿದ್ದ ಗಲ್‌ಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಮುರಳಿ ಮತ್ತು ಸಿಬ್ಬಂದಿಯವರಾದ ನಾಗರಾಜ್, ಎ.ಎಸ್.ಐ, ಜಿ.ಆನಂದ ಹೆಚ್.ಸಿ ೧೦೫, ಆಂಜನಪ್ಪ, ಪಿ.ಸಿ-೬೬೭ ಹಾಗೂ ಮತ್ತಿತರರು ಕಾರ್ಯಾಚರಣೆ ನಡೆಸಿ ಕಳವು ಕೃತ್ಯ ಎಸಗಿದ್ದ ಆರೋಪಿಯನ್ನು ಬಂಧಿಸಿ ಆತನಿಂದ ಸುಮಾರು ರೂ. ೫,೦೦,೦೦೦-೦೦ ಬೆಲೆ ಬಾಳುವ ೧೬೭ ಗ್ರಾಂ ತೂಕದ ಚಿನ್ನಾಭರಣಗಳ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಬಂಧಿತ ಆರೋಪಿಯ ವಿವರ:

ತೌಫಿಕ್ ಪಾಷ ತಂದೆ ಅಮೀರ್‍ ಜಾನ್ (೩೦), ಹಣ್ಣಿನ ವ್ಯಾಪಾರ, ೧ ನೇ ಮುಖ್ಯರಸ್ತೆ, ೪ ನೇ ಕ್ರಾಸ್,  ಬೀಡಿ ಕಾಲೋನಿ, ಮಹಬೂಬ್ ನಗರ, ಕೋಲಾರ.

Leave a Reply

Your email address will not be published. Required fields are marked *