ಮಾಲೂರು ಪೊಲೀಸರ ಕಾರ್ಯಾಚರಣೆ: ಕೊಲೆ ಆರೋಪಿಯ ಬಂಧನ

ದಿನಾಂಕ 1-8-2018 ರಂದು ಮಾಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಖಾಸಾಗಿ ಶಾಲೆಯ 10 ನೇ ತರಗತಿ 15 ವರ್ಷದ ವಿದ್ಯಾಥರ್ಿ ಈಕೆಯನ್ನು ಮಾಲೂರು – ಮಾಸ್ತಿ ರಸ್ತೆ ರೈಲ್ವೆ ಬ್ರಿಡ್ಜ್ ಬಳಿ, ಅತ್ಯಾಚಾರವೆತ್ನಿಸಲು ಪ್ರಯತ್ನಿಸಿ, ಕೊಲೆ ಮಾಡಿದ್ದು. ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ನೊಂದಾಣಿಯಾಗಿ ತನಿಖೆಯಲ್ಲಿದ್ದು. ಈ ಕೃತ್ಯವು ಬಹು ಘೋರ ಕೃತ್ಯವಾಗಿದ್ದು, ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದ್ದು. ಕೇಂದ್ರ ವಲಯದ ಪೊಲೀಸ್ ಮಹಾನೀರಿಕ್ಷಕರಾದ, ಶ್ರೀ. ಬಿ. ದಯಾನಂದ್, ಐಪಿಎಸ್, ರವರು ಖುದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಡಾ: ರೋಹಿಣಿ ಕಟೋಚ್ ಸೆಪಟ್, ಪೋಲಿಸ್ ಅಧೀಕ್ಷಕರು ಕೋಲಾರ, ಜಿಲ್ಲೆ ರವರ ನೇತೃತ್ವದಲ್ಲಿ ಅರೋಪಿಯನ್ನು ಪತ್ತೆ ಹಚ್ಚಲು ಸೂಚಿಸಿ ಮಾರ್ಗದರ್ಶನ ನೀಡಿದ್ದು, ಮಾನ್ಯ ಕೋಲಾರ ಜಿಲ್ಲೆ ಎಸ್.ಪಿ ರವರು, ಅಡಿಷನಲ್ ಎಸ್ಪಿ ಶೀ. ರಾಜೀವ್, ಡಿವೈಎಸ್ಪಿ. ಶ್ರೀ. ಬಿ.ಕೆ. ಉಮೇಶ್, ಮಾಲೂರು ವೃತ್ತ ನಿರೀಕ್ಷಕರಾದ ಶ್ರೀ. ಬಿ.ಎಸ್.ಸತೀಶ್, ಪಿಎಸ್ಐ, ಎಂ.ಎಲ್.ಗಿರೀಶ್, ಪಿಎಸ್ಐ ಎಮ್. ಎನ್.ಮುರಳಿ ಮತ್ತು ಸಿಬ್ಬಂದಿಯವರ ತಂಡವನ್ನು ರಚಿಸಿದ್ದು. ಅರೋಪಿಯನ್ನು ಪತ್ತೆ ಮಾಡಲು ಮಾರ್ಗರ್ಶನ ನೀಡಿದ್ದು. ತಂಡವು ಘಟನೆ ಜರುಗಿದ ಸಮಯದಿಂದ ಕಾರ್ಯಪ್ರವೃತ್ತರಾಗಿ ಸತತವಾಗಿ 2 ದಿವಸಗಳ ನಿರಂತರ ಕಾರ್ಯಾಚರಣೆ ನೆಡೆಸಿ ಅರೋಪಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಅರೋಪಿ ತಲೆಮರಿಸಿಕೊಂಡು ರೈಲಿನ ಮುಖಾಂತರ ದೂರ ಓಡಿ ಹೋಗಲು ಪ್ರಯತ್ನಿಸುತ್ತಿದ್ದ ಸಮಯದಲ್ಲಿ ಟೇಕಲ್ ರೈಲ್ವೆ ನಿಲ್ದಾಣದಲ್ಲಿ ತಂಡದವರು ಆರೋಪಿಯನ್ನು ದಿನಾಂಕ 03-08-2018 ರಂದು ಬೆಳಿಗಿನ ಜಾವ ಬಂದಿಸಿರುತ್ತಾರೆ. ಅರೋಪಿಯ ಹೆಸರು, ಟಿ.ಎನ್ ಸುರೇಶ್ ಬಾಬು @ ಬಾಬು @ ಸೂರಿ ಬಿನ್ ನಾರಾಯಣಸ್ವಾಮಿ. 25 ವರ್ಷ, ಟೇಕಲ್ ವಾಸಿಯಾಗಿದ್ದು, ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿರುತ್ತಾನೆ. ಆರೋಪಿಯು ತಾನು ಇಂದಿರಾ ನಗರದಲ್ಲಿ ಗಾರೆ ಕಲಸ ಮಾಡುತ್ತಿದ್ದ ಸಮಯದಲ್ಲಿ ಮೃತೆ ವಿದ್ಯಾಥರ್ಿಯನ್ನು ನೋಡುತ್ತಿದ್ದು ಅಕೆಯ ಮೇಲೆ ಇಷ್ಟವಾಗಿದ್ದು, ದಿನಾಂಕ 1-8-2018 ರಂದು ತನ್ನ ಸ್ನೇಹಿತೆಯ ಜೊತೆ ನೆಡೆದುಕೊಂಡು ಬರುತ್ತಿದ್ದ ಸಮಯದಲ್ಲಿ ಅಡ್ಡಗಟ್ಟಿ ಹಿಡಿದುಕೊಂಡು, ಅತ್ಯಾಚಾರ ವೆಸಗಲು ಪ್ರಯತ್ನಿಸಿ ಅಕೆ ಕಿರುಚಿಕೊಂಡು ಪ್ರತಿಭಟಿಸಿದ್ದರಿಂದ ಆಕೆಯ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುತ್ತಾನೆ. ಅರೋಪಿಯ ತನ್ನ ದುಷೃತ್ಯವನ್ನು ಒಪ್ಪಿಕೊಂಡಿರುತ್ತಾನೆ. ಅರೋಪಿಯನ್ನು ಅತೀ ಶೀಘ್ರದಲ್ಲಿ ಬಂಧಿಸಿದ ಅಡಿಷನಲ್ ಎಸ್ಪಿ ಶೀ. ರಾಜೀವ್ , ಡಿವೈಎಸ್ಪಿ. ಶ್ರೀ. ಬಿ.ಕೆ. ಉಮೇಶ್, ಮಾಲೂರು ವೃತ್ತ ನಿರೀಕ್ಷಕರಾದ ಶ್ರೀ. ಬಿ.ಎಸ್.ಸತೀಶ್, ಪಿಎಸ್ಐ, ಎಂ.ಎಲ್.ಗಿರೀಶ್, ಪಿಎಸ್ಐ ಎಮ್.ಎನ್.ಮುರಳಿ ಸಿಬ್ಬಂದಿಯವರಾದ ಪಿಸಿ ಕೋದಂಡಪಾಣಿ. ಪಿಸಿ ಮುರಳಿ ಮೋಹನ್, ಪಿಸಿ ವೆಂಕಟೇಶ್, ಎಹೆಚ್ಸಿ ನಾಗೇಂದ್ರ ರವರುಗಳ ಕಾರ್ಯವನ್ನು ಮಾನ್ಯ ಕೆಂದ್ರ ವಲಯದ ಐಜಿಪಿ ಶ್ರೀ. ಬಿ. ದಯಾನಂದ್, ಐಪಿಸ್, ರವರು ಶ್ಲಾಘಿಸಿರುತ್ತಾರೆ. ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಡಾ: ರೋಹಿಣಿ ಕಟೋಚ್ ಸೆಪೆಟ್, ಐಪಿಎಸ್ ರವರು ತಂಡದ ಕಾರ್ಯವನ್ನು ಪ್ರಶಂಸಿಸಿ ಬಹುಮಾನವನ್ನು ಘೋಷಿಸಿರುತ್ತಾರೆ.

Leave a Reply

Your email address will not be published. Required fields are marked *