ದಿನಾಂಕ:01/08/2018 ರಂದು ಮಾಲೂರಿನ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಯತ್ನ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೂರು ಠಾಣೆಯಲ್ಲಿ ಮೊ.ಸಂ.243/2018 ರೀತ್ಯಾ ಕೇಸು ದಾಖಲಾಗಿತ್ತು.
ಈ ಪ್ರಕರಣಲದಲ್ಲಿ ಮಾನ್ಯ ಎಸ್.ಪಿ. ಸಾಹೇಬರಾದ ಡಾ:ರೋಹಿಣಿ ಕಟೋಚ್ ಸೆಪಟ್, ಮತ್ತು ಮಾನ್ಯ ಅಡಿಷನಲ್ ಎಸ್.ಪಿ ಸಾಹೇಬರ ನೇತೃತ್ವದಲ್ಲಿ ಕೋಲಾರ ಉಪ ವಿಭಾಗದ ಮಾನ್ಯ ಡಿ.ಎಸ್.ಪಿ ಸಾಹೇಬರಾದ ಶ್ರೀ ಉಮೇಶ್ ಸಾಹೇಬರ ಮಾರ್ಗದರ್ಶನದಲ್ಲಿ ಮಾಲೂರು ವೃತ್ತ ನಿರೀಕ್ಷಕರಾದ ಶ್ರೀ ಬಿ.ಎಸ್.ಸತೀಶ್, ಸಿ.ಪಿ.ಐ, ಮಾಲೂರು ಠಾಣೆಯ ಪಿ.ಎಸ್.ಐ ಶ್ರೀ ಎಂ.ಎನ್.ಮುರಳಿ, ಮಾಸ್ತಿ ಪಿ.ಎಸ್.ಐ ಶ್ರೀ ಎಂ.ಎಲ್ ಗಿರೀಶ್ ಮತ್ತು ಸಿಬ್ಬಂದಿಯವರು ಈ ಕೇಸಿನ ಆರೋಪಿ ಟಿ.ಎನ್.ಸುರೇಶ್ ಬಾಬು @ @ ಸೂರಿ ಬಿನ್ ನಾರಾಯಣಸ್ವಾಮಿ, 25ವರ್ಷ, ಟೇಕಲ್ ಗ್ರಾಮ, ಮಾಲೂರು ತಾಲ್ಲೂಕು ಎಂಬುವನನ್ನು 24 ಗಂಟೆಗಳ ಒಳಗೆ ಬಂಧಿಸಿ ಆರೋಪಿಯನ್ನು ಘನ ನ್ಯಾಯಾಲಯಕ್ಕೆ ಹಾಜರ್ಪಡಿಸಿ ತನಿಖೆಯನ್ನು ಕೈಗೊಂಡು 21 ದಿನಗಳಲ್ಲಿ ಎಲ್ಲಾ ಸಾಕ್ಷ್ಯದಾರಗಳನ್ನು ಸಂಗ್ರಹಿಸಿ ಆರೋಪಿಯ ವಿರುದ್ದ ಮಾಲೂರು ವೃತ್ತ ನಿರೀಕ್ಷಕರಾದ ಶ್ರೀ ಬಿ.ಎಸ್.ಸತೀಶ್ ರವರು ಕಲಂ 302, 341, 376, 511, ಐ.ಪಿ.ಸಿ ಮತ್ತು ಕಲಂ 8 ಪೋಕ್ಸೋ ಆಕ್ಟ್ ರೀತ್ಯ ದೋಷಾರೋಪಣಾ ಪಟ್ಟಿಯನ್ನು ಘನ ನ್ಯಾಯಾಲಯಕ್ಕೆ ಸಲ್ಲಿಸಿಕೊಂಡಿರುತ್ತಾರೆ.
ಸದರಿ ಪ್ರಕರಣದ ಕುರಿತು ಘನ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಮಾನ್ಯ ನ್ಯಾಯಾದೀಶರು 24 ದಿನಗಳಲ್ಲಿ ವಿಚಾರಣೆಯನ್ನು ಪೂರೈಸಿ ದಿನಾಂಕ:15/09/2018 ರಂದು ಈ ಕೇಸಿನಲ್ಲಿ ಆರೋಪಿ ಟಿ.ಎನ್.ಸುರೇಶ್ ಬಾಬು @ ಬಾಬು @ ಸೂರಿ ಬಿನ್ ನಾರಾಯಣಸ್ವಾಮಿ, 25ವರ್ಷ, ಪ.ಜಾತಿ, ಗಾರೆ ಕೆಲಸ, ವಾಸ: ಟೇಕಲ್ ಗ್ರಾಮ, ಮಾಲೂರು ತಾಲ್ಲೂಕು ರವರಿಗೆ ಕಲಂ 235(2) ಸಿ.ಆರ್.ಪಿ.ಸಿ ರೀತ್ಯಾ ಗಲ್ಲು ಶಿಕ್ಷೆಯನ್ನು ವಿಧಿಸಿ ಆದೇಶ ಮಾಡಿರುತ್ತೆ. ಈ ಪ್ರಕರಣದಲ್ಲಿ ತನಿಖಾಧಿಕಾರಿಗಳು ಮತ್ತು ತನಿಖೆಗೆ ಸಹಕರಿಸಿದ ಎಲ್ಲಾ ಆದಿಕಾರಿ ಮತ್ತು ಸಿಬ್ಬಂದಿಯವರನ್ನು ಪ್ರಶಂಶಿಸಿರುತ್ತಾರೆ.